'ಟಾಕ್ಸಿಕ್' ಚಿತ್ರದಲ್ಲಿ ನಟಿಸೋ ಸುವರ್ಣಾವಕಾಶ; ಯಶ್ ಜೊತೆ ನಟಿಸೋಕೆ ನೀವು ಮಾಡಬೇಕಿರುವುದು ಇಷ್ಟೇ!

ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಗೋವಾದಲ್ಲಿ ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ಆರಂಭವಾಗಿದೆ ಎನ್ನುವ ಗುಸುಗುಸು ಶುರುವಾಗಿದೆ. ಒಟ್ನಲ್ಲಿ ಯಶ್ ಅಂತೂ ಬೀಚ್‌ಗಳ ಊರಿನಲ್ಲಿ ಫ್ಯಾಮಿಲಿ ಸಮೇತ ಬೀಡು ಬಿಟ್ಟಂತೆ ಕಾಣುತ್ತಿದೆ. ಅಲ್ಲೇ 'ಟಾಕ್ಸಿಕ್' ಚಿತ್ರತಂಡ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ.

ಮಲಯಾಳಂ ನಿರ್ದೇಶನದ ಗೀತು ಮೋಹನ್ ದಾಸ್ 'ಟಾಕ್ಸಿಕ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ನಾಯಕಿಯರಾಗಿ ಕರೀನಾ ಕಪೂರ್ ಹಾಗೂ ಶ್ರುತಿ ಹಾಸನ್ ನಟಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಬಹುಕೋಟಿ ವೆಚ್ಚದಲ್ಲಿ ಈ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣವಾಗಲಿದೆ. ಮುಂದಿನ ವರ್ಷ ಏಪ್ರಿಲ್ 10ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ.

Want to act in Yash Toxic fim Makers Shared Casting Call details

ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೆ ನಟ ಯಶ್ ಕೂಡ 'ಟಾಕ್ಸಿಕ್' ಸಿನಿಮಾ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಅಂದಾಜು 180 ಕೋಟಿ ರೂ. ಬಜೆಟ್‌ನಲ್ಲಿ ಈ ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಮೂಡಿ ಬರಲಿದೆ. ಬರೀ ಅನೌನ್ಸ್‌ಮೆಂಟ್ ಮೋಷನ್ ಟೀಸರ್‌ನಿಂದಲೇ ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. 'KGF-2' ಬಳಿಕ ಯಶ್ ನಟಿಸುತ್ತಿರುವ ಸಿನಿಮಾ ಆಗಿರುವುದರಿಂದ ಕುತೂಹಲ ಹೆಚ್ಚಿದೆ.

ಹಾಲಿವುಡ್ ಕಲಾವಿದರು, ತಂತ್ರಜ್ಞರನ್ನು ಸೇರಿಸಿಕೊಂಡು ಪ್ಯಾನ್ ವರ್ಲ್ಡ್‌ ಮಟ್ಟದಲ್ಲಿ 'ಟಾಕ್ಸಿಕ್' ಸಿನಿಮಾ ಕಟ್ಟಿಕೊಡುವ ಪ್ರಯತ್ನ ನಡೀತಿದೆ. ಯಶ್ ಲುಕ್, ಗೆಟಪ್ ಎಲ್ಲವೂ ನಿರೀಕ್ಷೆ ಹುಟ್ಟಾಕ್ಕಿದೆ. ಡ್ರಗ್ಸ್ ದಂಧೆಯ ಸುತ್ತಾ ಸುತ್ತುವ ಸಿನಿಮಾ 'ಟಾಕ್ಸಿಕ್' ಎನ್ನುವ ಮಾತುಗಳು ಕೇಳಿಬರ್ತಿದೆ. ಸದ್ಯ ಗೋವಾದ ರೆಸಾರ್ಟ್‌ವೊಂದರಲ್ಲಿ ಸಿನಿಮಾ ಕೆಲಸಗಳು ನಡೀತಿದೆ. 'KGF-2' ನಂತರ ಹೊಸ ಕಥೆ ಫೈನಲ್ ಮಾಡಲು ಯಶ್ ಒಂದೂವರೆ ವರ್ಷ ಸಮಯ ತೆಗೆದುಕೊಂಡಿದ್ದರು. ಹಾಗಾಗಿ ಕಥೆಯ ಬಗ್ಗೆ ಬಹಳ ನಿರೀಕ್ಷೆಯಿದೆ.

ಗೋವಾ ಹಿನ್ನೆಲೆಯ ಡ್ರಗ್ಸ್ ಮಾಫಿಯಾ ಕಥೆ ಚಿತ್ರದಲ್ಲಿದೆ ಎನ್ನುವ ಊಹಾಪೋಹವೂ ಇದೆ. ಇದೊಂದು ಪೀರಿಯಡ್ ಸಿನಿಮಾ ಎನ್ನಲಾಗ್ತಿದೆ 60, 70 ದಶಕದ ಕಥೆ ಎನ್ನುವ ಅಂತೆ ಕಂತೆ ಸುದ್ದಿ ಹರಿದಾಡ್ತಿದೆ. ಆದರೆ ಕಥೆಯ ಬಗ್ಗೆ ಚಿತ್ರತಂಡ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಅಂದಹಾಗೆ ಚಿತ್ರತಂಡ ಈಗ ಕಾಸ್ಟಿಂಗ್ ಕಾಲ್ ಮಾಡಿದೆ. 'ಟಾಕ್ಸಿಕ್' ಚಿತ್ರದಲ್ಲಿ ನಟಿಸುವ ಸಹ ಕಲಾವಿದರ ಬೇಟೆಗೆ ಮುಂದಾಗಿದೆ.

ಹೌದು. ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದಲ್ಲಿ ನಟಿಸುವ ಅವಕಾಶ ನಿಮಗೂ ಸಿಗಲಿದೆ. ಈ ಬಗ್ಗೆ ಚಿತ್ರತಂಡವೇ ಮಾಹಿತಿ ನೀಡಿದೆ. ಚಿತ್ರದಲ್ಲಿ ನೀವು ಕಾಣಿಸಿಕೊಳ್ಳಲು ಏನು ಮಾಡಬೇಕು, ಎನ್ನುವ ಬಗ್ಗೆ ವಿವರಿಸಿದೆ. 25 ರಿಂದ 75 ವರ್ಷದೊಳಗಿನ ಪುರುಷರು, 12ರಿಂದ 16 ವರ್ಷದೊಳಗಿನ ಮಕ್ಕಳು, 23ರಿಂದ 65 ವರ್ಷದೊಳಗಿನ ವಯಸ್ಸಿನ ಮಹಿಳೆಯರು ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಬಹುದು. ನಟಿಸುವ ಆಸಕ್ತಿ ಇರುವವರು ಚಿತ್ರತಂಡ ಹೇಳಿದಂತೆ ಮಾಡಿ ತಮ್ಮ ಪ್ರತಿಭೆಯ ಪರಿಚಯ ಮಾಡಿಕೊಟ್ಟು 'ಟಾಕ್ಸಿಕ್' ಚಿತ್ರದಲ್ಲಿ ನಟಿಸುವ ಅವಕಾಶ ಪಡೆಯಬಹುದಾಗಿದೆ.

ನಿಮ್ಮ ಪರಿಚಯದ ಒಂದು ವೀಡಿಯೋ ಹಾಗೂ ನಿಮ್ಮ ನಟನೆಯ ಪ್ರತಿಭೆ ಪ್ರದರ್ಶಿಸಿ ಒಂದು ನಿಮಿಷದ ಮತ್ತೊಂದು ವೀಡಿಯೋ ಮಾಡಿ 8618706590 ವಾಟ್ಸಪ್ ಸಂಖ್ಯೆಗೆ ಕಳುಹಿಸಿ. ಮಾರ್ಚ್ 25ರ ಒಳಗೆ ವೀಡಿಯೋ ತಲುಪಿಸಿ. ಅದನ್ನು ಚಿತ್ರತಂಡ ನೋಡಿ ನಿಮ್ಮನ್ನು ಆಡಿಷನ್ ಕರೆದು ಚಿತ್ರದ ವಿವಿಧ ಪಾತ್ರಗಳಿಗೆ ಆಯ್ಕೆ ಮಾಡಿಕೊಳ್ಳಲಿದೆ. ಈ ಹಿಂದೆ 'KGF'-2 ಚಿತ್ರದ ಆಡಿಷನ್ಸ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಬಳಿಕ 'ಸಲಾರ್' ಸೇರಿದಂತೆ ಹಲವು ಸಿನಿಮಾಗಳಿಗೆ ಈ ರೀತಿ ಆಡಿಷನ್ಸ್ ಮಾಡಿ ಪ್ರತಿಭೆಗಳ ಹುಡುಕಾಟ ನಡೆಸಲಾಗಿತ್ತು.

More from Filmibeat

English summary
Kgf Actor Yash Next film Toxic Casting Call.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X