ನಟ ವಿಜಯ್ ಬಗ್ಗೆ ಅಪಪ್ರಚಾರ...#RIPactorVijay ಟ್ರೆಂಡ್ ಮಾಡಿದ ಅಜಿತ್ ಫ್ಯಾನ್ಸ್
ಚಿತ್ರರಂಗದಲ್ಲಿ ಸ್ಟಾರ್ ವಾರ್ ಬೇಡ ಎಂದು ಸ್ವತಃ ಸ್ಟಾರ್ ಗಳು ಎಷ್ಟೇ ಕೇಳಿಕೊಂಡರೂ ಅಭಿಮಾನಿಗಳು ಮಾತ್ರ ತಮ್ಮ ಅತಿರೇಕದ ವರ್ತನೆಯಿಂದ ಪದೇ ಪದೇ ಅದನ್ನೇ ಮಾಡ್ತಿದ್ದಾರೆ. ರಜನಿಕಾಂತ್ ಅವರ 'ಪೇಟಾ' ಸಿನಿಮಾ ತೆರೆಕಂಡಾಗ ಅಜಿತ್ ಅಭಿಮಾನಿಗಳು ತಲೈವಾ ಅವರ ಬ್ಯಾನರ್, ಪೋಸ್ಟರ್ ದ್ವಂಸ ಮಾಡಿ ಸುದ್ದಿಯಾಗಿದ್ದರು.
ರಜನಿಕಾಂತ್ ವರ್ಸಸ್ ಅಜಿತ್ ಎಂದು ಇಬ್ಬರು ಅಭಿಮಾನಿಗಳು ಕಿತ್ತಾಡಿಕೊಂಡಿದ್ದರು. ಇದೀಗ, ಅಜಿತ್ ಅಭಿಮಾನಿಗಳು ಮತ್ತೊಬ್ಬ ನಟನ ವಿರುದ್ಧ ಸಮರ ಸಾರಿದ್ದಾರೆ.

ತಮಿಳು ಸ್ಟಾರ್ ನಟ ವಿಜಯ್ ಸಾವಿನ ಬಗ್ಗೆ ಅಪಪ್ರಚಾರ ಮಾಡಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗ್ತಿದೆ. #RIPactorVijay ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ಮಾಡಿ ವಿಜಯ್ ಅವರ ಬಗ್ಗೆ ಅವಹೇಳನಕಾರಿಯಾಗಿ ಸ್ಟೇಟಸ್ ಹಾಕುತ್ತಿದ್ದಾರೆ ಎಂದು ಅಜಿತ್ ಅಭಿಮಾನಿಗಳ ವಿರುದ್ಧ ವಿಜಯ್ ಫ್ಯಾನ್ಸ್ ಆರೋಪ ಮಾಡುತ್ತಿದ್ದಾರೆ.
#RIPactorVijay ಮತ್ತು #RIPVijay ಎಂಬ ಹ್ಯಾಷ್ ಟ್ಯಾಗ್ ಸೋಮವಾರ ಬೆಳಿಗ್ಗೆ ಟ್ರೆಂಡಿಂಗ್ ಆಗಿತ್ತು. ಇದನ್ನ ಕಂಡ ಕೆಲವು ಚಿತ್ರರಂಗದವರು ನಿಜಕ್ಕೂ ಅಚ್ಚರಿಯಾಗಿದ್ದರು. ಈ ಬೆಳವಣಿಗೆಯನ್ನ ತಮಿಳುನಾಡು ಮೂಲದ ಭಾರತ ಕ್ರಿಕೆಟ್ ತಂಡದ ಆಟಗಾರ ಆರ್.ಅಶ್ವಿನ್ ಟ್ವಿಟ್ಟರ್ ಮೂಲಕ ಖಂಡಿಸಿದ್ದಾರೆ.

ಇನ್ನೊಂದೆಡೆ ಅಜಿತ್ ಅಭಿಮಾನಿಗಳ ಅಪಪ್ರಚಾರಕ್ಕೆ ತಿರುಗೇಟು ನೀಡಿರುವ ವಿಜಯ್ ಅಭಿಮಾನಿಗಳು #LongLiveVIJAY....ಎಂಬ ಹ್ಯಾಷ್ ಟ್ಯಾಗ್ ನ್ನ ಟ್ರೆಂಡ್ ಮಾಡಿದ್ದಾರೆ. ವಿಜಯ್ ಪರವಾಗಿ ಟ್ವೀಟ್ ಮಾಡಿ, ಅಜಿತ್ ಅಭಿಮಾನಿಗಳಿಗೆ ಟಾಂಗ್ ಕೊಟ್ಟಿದ್ದಾರೆ.
ಸದ್ಯ ನಟ ವಿಜಯ್ 'ಬಿಗಿಲ್' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ ಮತ್ತೊಂದೆಡೆ ಅಜಿತ್ ಅಭಿನಯದ 'ನೇರ್ಕೊಂಡ ಪಾರ್ವೈ' ಸಿನಿಮಾ ತೆರೆಕಾಣಲು ಸಜ್ಜಾಗಿದೆ.


Click it and Unblock the Notifications











