»   » ಪ್ರತಿಯೊಬ್ಬ ಕನ್ನಡಿಗನೂ ನೋಡಲೇಬೇಕಾದ ವಿಡಿಯೋ

ಪ್ರತಿಯೊಬ್ಬ ಕನ್ನಡಿಗನೂ ನೋಡಲೇಬೇಕಾದ ವಿಡಿಯೋ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಕೆಲವು ಹಾಡುಗಾರರು ಹಾಗೂ ಸಂಗೀತಗಾರರು ಸೇರಿಕೊಂಡು ರಾಷ್ಟ್ರಕವಿ ಕುವೆಂಪು ಅವರ 'ಬಾರಿಸು ಕನ್ನಡ ಡಿಂಡಿಮವ' ಹಾಡನ್ನು ವಿಡಿಯೋ ಸಾಂಗ್ ಮಾಡುವ ಮೂಲಕ ಮತ್ತೊಮ್ಮೆ ಸತ್ತಂತಿಹ ಕನ್ನಡಿಗರನ್ನು ಬಡಿದೆಚ್ಚರಿಸಿದ್ದಾರೆ.

ಈಗಾಗಲೇ ಯೂಟ್ಯೂಬ್ ನಲ್ಲಿ ಹರಿದಾಡುತ್ತಿರುವ ಈ ವಿಡಿಯೋ ವನ್ನು ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿ ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಎಲ್ಲರ ಫೇಸ್ ಬುಕ್ ನಲ್ಲಿ ಓಡಾಡುತ್ತಿರುವ ವಿಡಿಯೋ ಭಾರಿ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ.

ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದು, ಉದಿತ್ ಹರಿತಾಸ್, ಅನನ್ಯ ಭಟ್, ನವೀನ್, ಸಜ್ಜು, ಮುಂತಾದವರು ಹಾಡಿಗೆ ಧ್ವನಿಯಾಗುವ ಮೂಲಕ ಕುವೆಂಪು ಅವರಿಗೆ ಗೌರವ ಸಲ್ಲಿಸಿದ್ದಾರೆ.

WATCH: A Tribute To 'Rashtrakavi' Kuvempu By Young Kannadigas Goes Viral

ಇದೀಗ ಈ ಹಾಡು ಎಲ್ಲೆಡೆ ವೈರಲ್ ಆಗಿದ್ದು, ಕನ್ನಡಭಿಮಾನಿಗಳನ್ನು ಬಡಿದೆಬ್ಬಿಸುತ್ತಿದೆ. ಈಗಾಗಲೇ ಕೆಲವರು ಈ ಹಾಡಿನ ಸ್ವಲ್ಪ ಆಡಿಯೋ ಭಾಗವನ್ನು ಕತ್ತರಿಸಿ ವಾಟ್ಸಪ್ ಮೂಲಕ ಹರಿಯಬಿಟ್ಟು ಎಲ್ಲರು ರಿಂಗ್ ಟೋನ್ ಮಾಡುವ ಮೂಲಕ ನವೆಂಬರ್ 1 ಕನ್ನಡ ರಾಜ್ಯೋತ್ಸವದ ದಿನ ಇದು ಟ್ರೆಂಡ್ ಆಗುವಂತೆ ಮಾಡಲು ಪ್ಲಾನ್ ಮಾಡುತ್ತಿದ್ದಾರೆ.

ನೀವು ನೋಡಿ ನಿಮ್ಮವರಿಗೂ ತೋರಿಸಿ ಈ ಹಾಡಿನ ಮೂಲಕ ನಾವು ದೇಶಭಕ್ತಿಯನ್ನು ಇನ್ನು ಹೆಚ್ಚಿಸೋಣ.

ರಾಷ್ಟ್ರಕವಿ ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವ ಹಾಡಿನ ವಿಡಿಯೋ ಇಲ್ಲಿದೆ ನೋಡಿ..

WATCH: A Tribute To 'Rashtrakavi' Kuvempu By Young Kannadigas Goes Viral

ಹಾಡಿನ ನಿರ್ಮಾಣ: ಕರ್ನಾಟಕ ಸರ್ಕಾರ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕೃಪಾಕರ ಸೇನಾನಿ ವೈಶಿಷ್ಟ್ಯಗಳು ಇದರ ಸಹಯೋಗದಲ್ಲಿ

ಸಾಹಿತ್ಯ: ಕುವೆಂಪು

ಕಾನ್ಸೆಪ್ಟ್ ಮತ್ತು ನಿರ್ದೇಶನ: ಸುನೀಲ್ ಮೈಸೂರು

ಸಂಗೀತ: ಪೂರ್ಣಚಂದ್ರ ತೇಜಸ್ವಿ

ಹಾಡುಗಾರರು: ಪೂರ್ಣಚಂದ್ರ ತೇಜಸ್ವಿ, ಉದಿತ್ ಹರಿತಾಸ್, ಬಪ್ಪಿ ಬ್ಲೋಸಮ್, ನವೀನ್ ಸಜ್ಜು, ಕನ್ನಿಕ, ಅನನ್ಯ ಭಟ್, ಪ್ರಥ್ವಿ ಭಾರದ್ವಾಜ್, ಭೂಮಿಕ, ಪಂಚಮ್ ಜೀವಾ, ಗೌತಮ್, ಶ್ರೇಯಸ್ ದೇವನೂರು,

English summary
A group of youngsters have made Kannadigas proud. The team of singers and musicians of Sandalwood have come up with a video song, penned by Rashtrakavi (National Poet) Kuvempu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada