»   » 'ರನ್ನ' ಚಿತ್ರದ ರಂಗೀನ್ ಬುಲ್ ಬುಲ್ ಚಿತ್ರಗಳು

'ರನ್ನ' ಚಿತ್ರದ ರಂಗೀನ್ ಬುಲ್ ಬುಲ್ ಚಿತ್ರಗಳು

Posted By:
Subscribe to Filmibeat Kannada

ನಟಿ ರಚಿತಾ ರಾಮ್ ಬದಲಾಗಿದ್ದಾರೆ. ಲಂಗಾ ದಾವಣಿ ತೊಟ್ಟು, ಸೀರೆಯುಟ್ಟು ಬಿಂಕ ಪಡುತ್ತಿದ್ದ 'ಬುಲ್ ಬುಲ್' ಬೆಡಗಿ ಈಕೆ ಅಲ್ಲ ಈಗ. ಏಕ್ದಂ ಮಾಡರ್ನ್ ಆಗಿಬಿಟ್ಟಿದ್ದಾರೆ ರಚಿತಾ ರಾಮ್. ಹಿಂದೆಂದಿಗಿಂತಲೂ ಕೊಂಚ ತೆಳ್ಳಗಾಗಿ, ಶಾರ್ಟ್ ಸ್ಕರ್ಟ್ ತೊಟ್ಟಿರುವ ರಚಿತಾ ರಾಮ್ 'ರನ್ನ' ಚಿತ್ರದಲ್ಲಿ ಕಾಣಿಸುವುದೇ ವಿಭಿನ್ನವಾಗಿ.

ಹೇಳಿ ಕೇಳಿ ಕಿಚ್ಚ ಸುದೀಪ್ ಗೆ ಮೊದಲ ಬಾರಿ ಜೋಡಿಯಾಗಿದ್ದಾರೆ ನಟಿ ರಚಿತಾ ರಾಮ್. ಅಂದ್ಮೇಲೆ ಆಕೆಗೊಂದು ಮೇಕ್ ಓವರ್ ಬೇಡ್ವಾ? ಸುದೀಪ್ ಸ್ಟೈಲ್ ಗೆ ರಚಿತಾ ಮ್ಯಾಚ್ ಆಗಬೇಕಲ್ವಾ? ಅದಕ್ಕಂತಲೇ 'ರನ್ನ' ಚಿತ್ರತಂಡ ರಚಿತಾಗೆ ಸ್ಪೆಷಲ್ ಲುಕ್ ಕೊಟ್ಟು ಒಂದು ಫೋಟೋಶೂಟ್ ಮಾಡಿಸಿತ್ತು. ಆ ವಿಡಿಯೋ ನಿಮ್ಮ ನೆಚ್ಚಿನ 'ಫಿಲ್ಮಿಬೀಟ್ ಕನ್ನಡ'ಗೆ ಲಭಿಸಿದೆ.


ಅಲ್ಟ್ರಾ ಮಾಡರ್ನ್ ಲುಕ್ ನಲ್ಲಿ ರಚಿತಾ ರಾಮ್ ಕ್ಯಾಮರಾ ಕಣ್ಣುಗಳಲ್ಲಿ ಹೇಗೆ ಸೆರೆಯಾಗಿದ್ದಾರೆ ಅಂತ ನೀವೇ ನಿಮ್ಮ ಕಣ್ಣಾರೆ ಕಣ್ತುಂಬಿಕೊಳ್ಳಿ....ಕೆಳಗಿರುವ ಸ್ಲೈಡ್ ಗಳಲ್ಲಿ....


'ರನ್ನ'ನ ಹುಡುಗಿಯ ಚಿನ್ನದಂಥ ಲುಕ್

'ರನ್ನ' ಚಿತ್ರದಲ್ಲಿ ರಚಿತಾ ರಾಮ್ ನಿಮ್ಮೆಲ್ಲರ ಕಣ್ಣ ಮುಂದೆ ಬರುವುದು ಹೀಗೆ. ಕಂಪ್ಲೀಟ್ ಕಾರ್ಪರೇಟ್ ಲುಕ್ ನಲ್ಲಿ! ಮೊದಲಿದ್ದ ಹೇರ್ ಸ್ಟೈಲ್ ಗೆ ಕೊಂಚ ಆಲ್ಟರ್ ಮಾಡಿ, ಹೇರ್ ಕಲರಿಂಗ್ ಮಾಡಿಸಿದ್ದಾರೆ ರಚಿತಾ. ಬಿಂಕ ಬಿಟ್ಟು ತುಂಡು ಸ್ಕರ್ಟ್ ತೊಟ್ಟು ಪೋಸ್ ಕೊಟ್ಟಿರುವುದನ್ನ ನೋಡ್ತಿದ್ರೆ, ರಚಿತಾ ದಿಲ್ಲಿ ಹುಡುಗಿ ಪಾತ್ರಕ್ಕೆ ಪರ್ಫೆಕ್ಟ್ ಆಗಿ ಸೂಟ್ ಆಗ್ತಾರೆ ಅಲ್ವಾ?


ಸುದೀಪ್ ಗೆ ತಕ್ಕಂತೆ ಸ್ಟೈಲಿಂಗ್..!

ಕಿಚ್ಚ ಸುದೀಪ್ ಗೆ ಹೇಗೆ ಫೋಟೋಶೂಟ್ ಗಾಗಿ ಸ್ಪೆಷಲ್ ಸೂಟ್ ಗಳನ್ನ ಚಿತ್ರತಂಡ ರೆಡಿಮಾಡಿಸಿತ್ತೋ, ಹಾಗೇ ರಚಿತಾಗೂ ಸ್ಪೆಷಲ್ ಕಾಸ್ಟ್ಯೂಮ್ಸ್ ರೆಡಿಮಾಡಿಸಿದ್ದರು 'ರನ್ನ' ಚಿತ್ರದ ನಿರ್ದೇಶಕ ನಂದಕಿಶೋರ್. ಚಿತ್ರ ಪ್ರಾರಂಭವಾಗುವುದಕ್ಕೂ ಮುನ್ನ ಮಾಡಿದ ಫೋಟೋಶೂಟ್ ನ ವಿಡಿಯೋ ಇದೀಗ ಔಟ್ ಆಗಿದೆ. [ಹಾಂಗ್ ಕಾಂಗ್ ಹಾರಲಿರುವ ಕಿಚ್ಚ ಸುದೀಪ್ 'ರನ್ನ']


ಅಲ್ಲಿ ಸಮಂತಾ...ಇಲ್ಲಿ ರಚಿತಾ...!

'ರನ್ನ' ಚಿತ್ರ ಹೇಳಿ ಕೇಳಿ ತೆಲುಗಿನ ಸೂಪರ್ ಹಿಟ್ 'ಅತ್ತಾರಿಂಟಿಕಿ ದಾರೇದಿ' ಚಿತ್ರದ ರೀಮೇಕ್. ತೆಲುಗಿನಲ್ಲಿ ನಟಿ ಸಮಂತಾ ಮುದ್ದು ಮುದ್ದಾಗಿ ಮಾಡರ್ನ್ ಆಗಿ ಕಾಣಿಸಿಕೊಂಡಿದ್ದರು. ಅಲ್ಲಿನ ಸಮಂತಾಳನ್ನ ಮೀರಿಸುವ ಹಾಗೆ ಕನ್ನಡದಲ್ಲಿ ತಯಾರಾಗಿದ್ದಾರೆ ನಟಿ ರಚಿತಾ ರಾಮ್.


ರಚಿತಾ ಅಮ್ಮನ ಪಾತ್ರದಲ್ಲಿ ಮಧು

ರಚಿತಾ ಮತ್ತು ಹರಿಪ್ರಿಯಾಗೆ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ನಟಿ ಮಧು. ಒಂದ್ಕಾಲದಲ್ಲಿ ಬಜಾರಿ ಸೊಸೆಯಾಗಿ 'ಅಣ್ಣಯ್ಯ' ಚಿತ್ರದಲ್ಲಿ ನಟಿಸಿದ ಮಧು, ಇದೀಗ ಗಯ್ಯಾಳಿ 'ಅತ್ತೆ'ಯಾಗಿ 'ರನ್ನ' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅತ್ತೆ ಮಧು ಇನ್ನೂ ಸುರಸುಂದರಾಂಗಿಯಂತೆ ಕಾಣುವಾಗ ರಚಿತಾ ಯಾವುದರಲ್ಲಿ ಕಮ್ಮಿಯಾಗಬೇಕು ಹೇಳಿ...['ರನ್ನ'ನ ಅತ್ತೆ ಮಧು ರಿಚ್ ಲುಕ್ ವಿಡಿಯೋ ಔಟ್]


ರಚಿತಾ ಕೈಯಲ್ಲಿ ಎರಡು ಬಿಗ್ ಪ್ರಾಜೆಕ್ಟ್ ಗಳು!

'ರನ್ನ' ಚಿತ್ರದಲ್ಲಿ ಬಿಜಿಯಾಗಿರುವ ರಚಿತಾ, ಶ್ರೀಮುರುಳಿಯ 'ರಥಾವರ' ಚಿತ್ರಕ್ಕೆ ಸಹಿ ಹಾಕಿದ್ದಾರೆ. ಕಾಲಿವುಡ್ ಅಂಗಳದಿಂದಲೂ ರಚಿತಾಗೆ ಅವಕಾಶಗಳು ಅರಸಿ ಬರುತ್ತಿವೆಯಂತೆ. ಆದ್ರೆ, ಬಂದ ಅವಕಾಶಗಳನ್ನೆಲ್ಲಾ ಒಪ್ಪಿಕೊಳ್ಳದೇ, ಚೆಂದವಿರುವ ಪಾತ್ರಗಳನ್ನ ಅಳೆದು ತೂಗಿ ಓಕೆ ಮಾಡುತ್ತಿದ್ದಾರಂತೆ ರಚಿತಾ.


ಯುಗಾದಿಗೆ 'ರನ್ನ' ನಿಮ್ಮ ಮುಂದೆ

ಸುದೀಪ್ ಮತ್ತು ರಚಿತಾ ಜೊತೆಗೆ ಮಧು ಸೂಪರ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿರುವ 'ರನ್ನ' ಚಿತ್ರ ಯುಗಾದಿ ಹಬ್ಬಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ. ವಿದೇಶದಲ್ಲಿ ಶೂಟಿಂಗ್ ಮಾಡಿ ಬೆಂಗಳೂರಿಗೆ ವಾಪಸ್ಸಾಗಿರುವ 'ರನ್ನ' ನಿಮ್ಮ ಮುಂದೆ ಬರೋಕೂ ಮುನ್ನ ರಚಿತಾರ ಈ ಹೊಸ ಲುಕ್ ನ ಝಲಕ್ ನೋಡಿ ಆನಂದಿಸಿ...[ಯುಗಾದಿ ಹಬ್ಬಕ್ಕೆ ಸುದೀಪ್ 'ರನ್ನ' ಗ್ರ್ಯಾಂಡ್ ರಿಲೀಸ್? ]


English summary
Actress Rachita Ram of BulBul fame has undergone a makeover for her upcoming film 'Ranna'. Here is the making video of Rachita Ram's special photo shoot for 'Ranna'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada