»   » 'ಅಡ್ಡ' ಬಾಯ್ಸ್ ವಿಡಿಯೋ ನೋಡಿ ಕಿಸಕ್ಕನೆ ನಕ್ಕುಬಿಡಿ!

'ಅಡ್ಡ' ಬಾಯ್ಸ್ ವಿಡಿಯೋ ನೋಡಿ ಕಿಸಕ್ಕನೆ ನಕ್ಕುಬಿಡಿ!

Posted By:
Subscribe to Filmibeat Kannada

ಡವ್ ಹೊಡೆಯೋದು, ಕಾಳ್ ಹಾಕೋದು, ಪಟಾಯ್ಸೋದು....ಇವೆಲ್ಲಾ ಓತ್ಲ ಹೊಡೆಯೋ ಹುಡುಗ್ರ ಟೈಮ್ ಪಾಸ್ ಪ್ರೋಗ್ರಾಮ್ಗಳು.

ಅಕಸ್ಮಾತ್ ಕಾಳ್ ಹಾಕೋಕೆ ಯಾರು ಸಿಕ್ಲಿಲ್ಲ ಅಂತ ಇಟ್ಕೊಳ್ಳಿ...ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್ 'ನನ್ ಹುಡುಗಿ' ಅಂತ ಹೊಸ ಪುಂಗಿ ಎಪಿಸೋಡ್ ಶುರುವಾಗುತ್ತೆ.

ಇಂತಹ ಸಿಲ್ಲಿ ಪುಂಗಿಯಿಂದಲೇ ಹುಡುಗ್ರ ಅಡ್ಡದಲ್ಲಿ ಕಿರಿಕ್ ಆಗೋದು.! ಹೌದಾ ಅಂತ ನೀವು ಡೀಪಾಗಿ ಯೋಚನೆ ಮಾಡುವ ಮುನ್ನ ಒಮ್ಮೆ ಈ ವಿಡಿಯೋನ ನೋಡ್ಕೊಂಡ್ ಬನ್ನಿ.......

ನೋಡಿದ್ರಲ್ಲ, 'ಅಡ್ಡ'ದಲ್ಲಿ ಏನೇನೆಲ್ಲಾ ಆಗುತ್ತೆ ಅಂತ. ಹುಡುಗ್ರ ಮೆಂಟಾಲಿಟಿಯನ್ನ ಇಟ್ಕೊಂಡು ಅದಕ್ಕೆ ಹಾಸ್ಯ ಲೇಪನ ಕೊಟ್ಟು 'ಅಡ್ಡ'....ನಮ್ಮಪ್ಪನಾಣೆಗು ಪ್ರೇಮ್ದ್ ಅಲ್ಲ! ಅಂತ ಟೈಟಲ್ ಇಟ್ಟು ಯೂಟ್ಯೂಬ್ ವಾಹಿನಿ Namdu K ಈ ವಿಡಿಯೋ ನ ರೆಡಿಮಾಡಿದೆ. ['ಅಚ್ಚ'ಕನ್ನಡ ಹಾಡುಗಳ ಕಾಲೆಳೆದ 'ನಮ್ದುಕೆ' ವಾಹಿನಿ]

ಶ್ರವಣ್, ಸಂದೀಪ್, ರಜತ್, ಅರುಣ್, ರಘುನಂದನ್, ಚಂದನ್, ವೆಂಕಟೇಶ್ ಮುಂತಾದವರು 'ಅಡ್ಡ' ಬಾಯ್ಸ್ ಆಗಿ ಕಾಣಿಸಿಕೊಂಡಿದ್ರೆ ಶ್ರವಣ್ ಆಕ್ಷನ್ ಕಟ್ ಹೇಳಿದ್ದಾರೆ.

ಮನರಂಜನೆ ನೀಡುವುದಕ್ಕಾಗಿ ರೆಡಿಮಾಡಿರುವ ಈ ವಿಡಿಯೋನ ನೋಡಿ, ನೀವು ಕಿಸಕ್ಕನೆ ನಕ್ಕುಬಿಡಿ.....

English summary
'Adda' is Kannada short comedy spoof on how local adda boys fight. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada