»   » ಈ ಹಾಡು ಕೇಳಿ..ನಿಮ್ಮ ನಾಲಿಗೆಗೆ ಕಸರತ್ತು ಕೊಡಿ...

ಈ ಹಾಡು ಕೇಳಿ..ನಿಮ್ಮ ನಾಲಿಗೆಗೆ ಕಸರತ್ತು ಕೊಡಿ...

Posted By:
Subscribe to Filmibeat Kannada

''ಅಕ್ಕ ಪಕ್ಕ ಸಿಕ್ಕಿ ನಕ್ಕ ಹಕ್ಕಿ ಪುಕ್ಕ ಹೆಕ್ಕಿ ಮುಕ್ಕ ರಾಗಿ ನಕ್ಕು ಕಿಕ್ಕಿರಿದ ಟಕರಕ ಟಕಟ....''ಇಂತಹ ಅಚ್ಚ ಕನ್ನಡ ಟಂಗ್ ಟ್ವಿಸ್ಟರ್ ಸಾಲುಗಳನ್ನ ಬಳಸಿ ರೆಡಿಯಾಗಿರುವ 'ರಂಗಿತರಂಗ' ಚಿತ್ರದ ಹಾಡು ಈಗ ಎಲ್ಲರ ಬಾಯಲ್ಲೂ ನಲಿದಾಡುತ್ತಿದೆ.

ಗಾಂಧಿನಗರಕ್ಕೆ ಈಗಷ್ಟೇ ಕಾಲಿಟ್ಟಿರುವ ಪ್ರತಿಭೆಗಳೆಲ್ಲಾ ಸೇರಿ ಮಾಡಿರುವ ಚಿತ್ರ 'ರಂಗಿತರಂಗ'. ಚಿತ್ರದ ಟ್ರೈಲರ್ ಎಷ್ಟು ಹಿಟ್ ಆಗಿದೆಯೋ, 'ಅಕ್ಕ-ಪಕ್ಕ' ಹಾಡು ಕೂಡ ಅಷ್ಟೇ ಕ್ಲಿಕ್ ಆಗಿದೆ. ಆ ಹಾಡನ್ನ ಒಮ್ಮೆ ನೀವೇ ನಿಮ್ಮ ಕಿವಿಯಾರೆ ಕೇಳಿಬಿಡಿ...

ನೋಡೋಕೆ ಕಂಪ್ಲೀಟ್ ಮಾಡರ್ನ್ ಸ್ಟೈಲ್ ನಲ್ಲಿ ರೆಡಿಯಾಗಿರುವ ಈ ಹಾಡಿಗೆ ಸಾಹಿತ್ಯ ಬರೆದು, ಸಂಗೀತ ಸಂಯೋಜಿಸಿರುವುದು ಖುದ್ದು 'ರಂಗಿತರಂಗ' ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ. [ಸೋಷಿಯಲ್ ಮೀಡಿಯಾದಲ್ಲಿ 'ರಂಗಿತರಂಗ' ಸೂಪರ್ ಹಿಟ್]

watch-akka-pakka-song-from-kannada-movie-rangitaranga

'ರಂಗಿತರಂಗ' ಥ್ರಿಲ್ಲರ್ ಸಿನಿಮಾ. ಈ ಚಿತ್ರದ ಮೂಲಕ ನಿರುಪ್ ಭಂಡಾರಿ, ರಾಧಿಕಾ ಚೇತನ್ ಸೇರಿದಂತೆ ಅನೇಕ ಕಲಾವಿದರು ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡ್ತಿದ್ದಾರೆ. ವಿಶೇಷ ಪಾತ್ರದಲ್ಲಿ ಸಾಯಿ ಕುಮಾರ್ ಕಾಣಿಸಿಕೊಂಡಿದ್ದಾರೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ಅದನ್ನ ನೋಡುವ ಮೊದಲು ಈ ಹಾಡನ್ನ ಕೇಳಿ, ನಿಮ್ಮ ನಾಲಿಗೆಗೆ ಕಸರತ್ತು ಕೊಡಿ...

English summary
New Comer Anup Bhandari directorial 'Rangitaranga' trailers and songs are becoming viral in Social Media. 'Rangitaranga' features Nirup Bhandari, Radhika Chetan, Sai Kumar and others. Watch 'Akka Pakka' song from the movie here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada