»   » ಅಲ್ಲು ಅರ್ಜುನ್-ಉಪೇಂದ್ರ ಚಿತ್ರದ ಸೊಗಸಾದ ಟೀಸರ್

ಅಲ್ಲು ಅರ್ಜುನ್-ಉಪೇಂದ್ರ ಚಿತ್ರದ ಸೊಗಸಾದ ಟೀಸರ್

Posted By:
Subscribe to Filmibeat Kannada

ವರ್ಷಗಳ ನಂತ್ರ ಉಪೇಂದ್ರ ಟಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಹಿಟ್ ಡೈರೆಕ್ಟರ್ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದಲ್ಲಿ ಉಪ್ಪಿ ನಟಿಸುತ್ತಿದ್ದಾರೆ. ಟಾಲಿವುಡ್ ನ 'ಸ್ಟೈಲಿಶ್ ಸ್ಟಾರ್' ಅಲ್ಲು ಅರ್ಜುನ್ ಜೊತೆ ಮೊದಲ ಬಾರಿ ತೆರೆ ಹಂಚಿಕೊಳ್ಳುತ್ತಿದ್ದಾರೆ 'ರಿಯಲ್ ಸ್ಟಾರ್'.

ಈ ಎಲ್ಲಾ ಮ್ಯಾಟರ್ರು ಹಳೆಯದ್ದೇ, ಅಂತೆ ಕಂತೆ ಸುದ್ದಿಗಳು ಬಿಟ್ರೆ, ಅಲ್ಲು ಅರ್ಜುನ್ ಮತ್ತು ಉಪ್ಪಿ ಒಂದಾಗಿರುವ 'ಸನ್ ಆಫ್ ಸತ್ಯಮೂರ್ತಿ' ಸಿನಿಮಾ ಅಡ್ಡದಿಂದ ಇಲ್ಲಿವರೆಗೂ ಒಂದು ಪೋಸ್ಟರ್ ಕೂಡ ಬಿಡುಗಡೆಯಾಗಿರಲಿಲ್ಲ. ['ಉಪ್ಪಿಟ್ಟು' ಬಿಟ್ಟು ಆಂಧ್ರ ಮೀಲ್ಸ್ ಗೆ ಕೈಹಾಕಿದ ಉಪೇಂದ್ರ]

ಅದಕ್ಕಂತ ಒಂದು ಸ್ಪೆಷಲ್ ಪ್ಲಾನ್ ಮಾಡಿದ 'ಸನ್ ಆಫ್ ಸತ್ಯಮೂರ್ತಿ' ಚಿತ್ರತಂಡ ಹೋಳಿ ಹಬ್ಬಕ್ಕೆ ಎಲ್ಲಾ ಸಿನಿ ಪ್ರಿಯರಿಗೂ ಸರ್ಪ್ರೈಸ್ ಗಿಫ್ಟ್ ನೀಡಿದೆ. ಅದೇ ಈ ಟೀಸರ್.

ದೊಡ್ಡ ತಾರಾದಂಡು ಇರುವ 'ಸನ್ ಆಫ್ ಸತ್ಯಮೂರ್ತಿ' ಚಿತ್ರದ ಪಾತ್ರವರ್ಗವನ್ನ ಪರಿಚಯ ಮಾಡುವ ಟೀಸರ್ 'ಹೋಳಿ ಹಬ್ಬ'ದ ಪ್ರಯುಕ್ತ ಬಿಡುಗಡೆಯಾಗಿದೆ.

ಎಂದಿನಂತೆ ಸ್ಟೈಲಿಶ್ ಅವತಾರದಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದರೆ, ರಿಯಲ್ ಸ್ಟಾರ್ ಉಪೇಂದ್ರ ಕೊಂಚ ವೈಲೆಂಟ್ ಆಗಿ ಮಿಂಚಿದ್ದಾರೆ. ಸಮಂತಾ, ನಿತ್ಯ ಮೆನನ್, ಅದಾ ಶರ್ಮಾ ಮತ್ತು ಸ್ನೇಹಾ ಲವಲವಿಕೆಯಿಂದ ಎಲ್ಲರ ಕಣ್ಮನ ಸೆಳೆಯುತ್ತಾರೆ. [ಅಲ್ಲು ಅರ್ಜುನ್ ಜೊತೆ ರಿಯಲ್ ಸ್ಟಾರ್ ಉಪೇಂದ್ರ]

Watch Allu Arjun and Upendra starrer Son Of Satyamurthy Teaser

ಕಾಮಿಡಿ ಟ್ರ್ಯಾಕ್ ಬಗ್ಗೆ ಹೇಳ್ಬೇಕು ಅಂದ್ರೆ, ಬ್ರಹ್ಮಾನಂದಂ, ವೆನ್ನೆಲ್ಲಾ ಕಿಶೋರ್, ಎಂ.ಎಸ್.ನಾರಾಯಣ ಮತ್ತು ಅಲಿ ಅಂತಹ ಕಚಗುಳಿ ಖಿಲಾಡಿಗಳಿದ್ದಾರೆ. ವಿಲನ್ ಕ್ಯಾಟೆಗರಿಯಲ್ಲಿ ಪ್ರಕಾಶ್ ರೈ, ಸಂಪತ್ ರಾಜ್ ಅಭಿನಯಿಸಿದ್ದಾರೆ.

ಅಷ್ಟು ಬಿಟ್ಟರೆ, ಸಿನಿಮಾದ ಪಂಚಿಂಗ್ ಡೈಲಾಗ್ಸ್ ಮತ್ತು ತಾರೆಯರ ಪಾತ್ರಗಳು ರಿವೀಲ್ ಆಗಿಲ್ಲ. ಆದ್ರೆ, ದೇವಿ ಶ್ರೀ ಪ್ರಸಾದ್ ಸಂಗೀತದ ಝಲಕ್ ಹೇಗಿರಬಹುದು ಅನ್ನೋ ಕುತೂಹಲಕ್ಕೆ ಟೀಸರ್ ಉತ್ತರ ನೀಡಿದೆ. [ಟಾಲಿವುಡ್ ನಲ್ಲಿ ಅಕೌಂಟ್ ಓಪನ್ ಮಾಡಿದ ರಘು ದೀಕ್ಷಿತ್]

ಮಾರ್ಚ್ 15 ಕ್ಕೆ 'ಸನ್ ಆಫ್ ಸತ್ಯಮೂರ್ತಿ' ಚಿತ್ರದ ಆಡಿಯೋ ರಿಲೀಸ್ ಆಗುತ್ತಿದೆ. ಏಪ್ರಿಲ್ 2 ರಂದು ವಿಶ್ವದಾದ್ಯಂತ ಸಿನಿಮಾ ರಿಲೀಸ್ ಆಗುತ್ತಿದೆ. ಅಲ್ಲಿಯವರೆಗೂ ಈ ಟೀಸರ್ ನೋಡಿ ಖುಷಿ ಪಡಿ.

English summary
After a long time Real Star Upendra is shooting for a Telugu film 'Son Of Satyamurthy' directed by Trivikram Srinivas. Upendra and Allu Arjun are sharing screen space for the first time in this film. Watch the teaser here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada