»   » ಬ್ಲಾಕ್ ಬಸ್ಟರ್ ಹಿಟ್ 'ಬುಲ್ ಬುಲ್' ಫುಲ್ ಮೂವಿ

ಬ್ಲಾಕ್ ಬಸ್ಟರ್ ಹಿಟ್ 'ಬುಲ್ ಬುಲ್' ಫುಲ್ ಮೂವಿ

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಬುಲ್ ಬುಲ್' 2013ನೇ ಸಾಲಿನಲ್ಲಿ ಅತಿಹೆಚ್ಚು ಗಳಿಸಿದ ಚಿತ್ರವಾಗಿ ಹೊರಹೊಮ್ಮಿತ್ತು. ಈ ಚಿತ್ರದ ಇನ್ನೊಂದು ವಿಶೇಷ ಎಂದರೆ 19 ಕೇಂದ್ರಗಳಲ್ಲಿ ಸೆಂಚುರಿ ದಾಖಲಿಸಿದ್ದು. ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಂಡಿರುವುದು ಬುಲ್ ಬುಲ್ ಚಿತ್ರದ ಇನ್ನೊಂದು ವಿಶೇಷ.

'ಬುಲ್ ಬುಲ್' ಚಿತ್ರವನ್ನು ವಿ.ಹರಿಕೃಷ್ಣ, ಎಂಡಿ ಶ್ರೀಧರ್, ಕೃಷ್ಣಕುಮಾರ್, ಕವಿರಾಜ್ ಹಾಗೂ ದಿನಕರ್ ತೂಗುದೀಪ ಅವರು ಸೇರಿ ನಿರ್ಮಿಸಿದ್ದರು. ಫ್ರೆಂಡ್ಸ್, ಪೊರ್ಕಿ, ಚೆಲ್ಲಾಟ, ಕೃಷ್ಣ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಎಂ.ಡಿ. ಶ್ರೀಧರ್ ಆಕ್ಷನ್ ಕಟ್ ನಲ್ಲಿ ಚಿತ್ರ ಮೂಡಿಬಂದಿದೆ. [ಬುಲ್ ಬುಲ್ ಚಿತ್ರ ವಿಮರ್ಶೆ]


ಬೆಂಗಳೂರು, ಗೋವಾ ಹಾಗೂ ಮೈಸೂರಿನಲ್ಲಿ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಸರಿಸುಮಾರು ರು.8 ಕೋಟಿ ಬಜೆಟ್ ನಲ್ಲಿ ಬುಲ್ ಬುಲ್ ಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರದ ಪಾತ್ರವರ್ಗದಲ್ಲಿದ್ದ ರೆಬೆಲ್ ಸ್ಟಾರ್ ಅಂಬರೀಶ್, ಅಶೋಕ್, ರಮೇಶ್ ಭಟ್, ಟೆನ್ನಿಸ್ ಕೃಷ್ಣ, ಸಾಧು ಕೋಕಿಲ, ವಿ ಹರಿಕೃಷ್ಣ, ಕವಿರಾಜ್ ಹಾಗೂ ಚಿತ್ರದ ನಿರ್ದೇಶಕ ಎಂ.ಡಿ.ಶ್ರೀಧರ್ ಅವರನ್ನು ಸನ್ಮಾನಿಸಲಾಯಿತು.

ಹೀಗೆ ಹಲವಾರು ವಿಶೇಷಗಳ ಸಂಗಮವಾಗಿರುವ ಈ ಚಿತ್ರ ತೆಲುಗಿನ 'ಡಾರ್ಲಿಂಗ್' ಚಿತ್ರದ ರೀಮೇಕ್. ಒಂದು ವೇಳೆ ಥಿಯೇಟರ್ ನಲ್ಲಿ ಈ ಚಿತ್ರವನ್ನು ಮಿಸ್ ಆಗಿದ್ದರೆ. ಇಗೋ ಇಲ್ಲಿದೆ ನೋಡಿ ಫುಲ್ ಮೂವಿ. ಈ ಚಿತ್ರವನ್ನು ನೋಡುತ್ತಾ ವೀಕೆಂಡ್ ಎಂಜಾಯ್ ಮಾಡಿ. (ಫಿಲ್ಮಿಬೀಟ್ ಕನ್ನಡ)

Watch BulBul - Kannada Full Movie
English summary
Watch the Blockbuster hit BulBul - Kannada Full Movie. The film directed by M. D. Shridhar. It is the remake of the Telugu film Darling. The film stars Darshan, Ambarish and debutant Rachita Ram in lead roles.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada