ನಿವೇದಿತಾ ಗೌಡ ಥಾಯ್ಲೆಂಡ್ ವಿಡಿಯೋ ವೈರಲ್...!
ಚಿತ್ರರಂಗದಲ್ಲಿರುವ ಅನೇಕರು ಏನೇ ಮಾಡಿದರು ನೋಡುಗರಿಗದು ಎಲೆ ಅಡಿಕೆಯೇ. ಕೆಮ್ಮಿದರೂ ಸುದ್ದಿ, ಪಾರ್ಟಿ ಮಾಡಿದರೂ ಸುದ್ದಿ, ಬಿಕಿನಿ ಹಾಕಿಕೊಂಡರು ಸುದ್ದಿ, ಅಷ್ಟರ ಮಟ್ಟಿಗೆ ಸೆಲೆಬ್ರೆಟಿಗಳ ವ್ಯೆಯಕ್ತಿಕ ಬದುಕು ಮೂರಾ ಬಟ್ಟೆಯಾಗಿರುತ್ತೆ. ಇನ್ನು ಮದುವೆ ಆಗಿ ಆ ನಂತರ ವಿಚ್ಛೇದನವಾಗಿದ್ದರಂತೂ ಮುಗೀತು. ಕಾಲೆಳೆಯಲು ಅಂತಾನೇ ಇರುವ ಒಂದು ಗುಂಪು ಇವರ ಮೇಲೆ ನಿಗಾ ವಹಿಸಿರುತ್ತೆ. ಚೂರು ಎಲ್ಲಾದರೂ ಎಡವಿದರೂ ಸಾಕು ಟ್ರೋಲ್ ಮಾಡುತ್ತೆ.
ಹೀಗೆ ಟ್ರೋಲ್ ಆದಾಗೆಲ್ಲ ಕೆಲವರು ತಲೆ ಕೆಡಿಸಿಕೊಳ್ಳುತ್ತಾರೆ. ಇನ್ನು ಹಲವರು ಚಲ್ತಾ ಹೈ ಎಂದು ಮುನ್ನಡೆಯುತ್ತಾರೆ. ಉದಾಹರಣೆಗೆ ನಿವೇದಿತಾ ಗೌಡ. ಹೌದು. ಯಾರೇನೇ ಅಂದರು, ಎಷ್ಟೇ ಟೀಕೆ ಟಿಪ್ಪಣಿ ಮಾಡಿದರೂ, ಕಾಲೆಳೆದರೂ, ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಉಫ್ ಎಂದು ಮುಂದೆ ಸಾಗುವುದು ಬಹುಮುಖ ಪ್ರತಿಭೆ ನಿವೇದಿತಾ ಗೌಡ ಅವರ ಮೂಲ ಗುಣ.

ಯಾರೇ ಕೂಗಾಡಲಿ, ಬಾತ್ ರೂಮ್ ಅಲ್ಲಾಡಲಿ ಎನ್ನುವ ವ್ಯಕ್ತಿತ್ವವನ್ನು ರೂಢಿಸಿಕೊಂಡಿರುವ ನಿವೇದಿತಾ ಗೌಡ ಸದ್ಯ ಎಲ್ಲಿದ್ದಾರೆ ಎನ್ನುವುದು ಗೊತ್ತಿಲ್ಲವಾದರೂ ಇವರ ಥಾಯ್ಲೆಂಡ್ ಪ್ರವಾಸದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಹೌದು, ದಿಜೇಕೋಬ್ಜ್ ಎಂಬ ಇನ್‌ಸ್ಟಾಗ್ರಾಮ್‌ನಲ್ಲಿ ನಿವೇದಿತಾ ಗೌಡ ಅವರ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ದಿಜೇಕೋಬ್ಜ್ ಥಾಯ್ಲೆಂಡ್‌ನಲ್ಲಿ ನಿಮ್ಮ ನೆಚ್ಚಿನ ಸ್ಥಳ ಯಾವುದು ಎನ್ನುವ ಪ್ರಶ್ನೆ ಕೇಳಿದ್ದಾರೆ. ನಿಮ್ಮ ಹೆಸರೇನು ಯಾವ ಜಾಗ ಇಷ್ಟ ಎಂದೆಲ್ಲ ಕೇಳಿದ್ದಾರೆ.
ದಿಜೇಕೋಬ್ಜ್ ಕೇಳಿದ ಪ್ರಶ್ನೆಗಳಿಗೆಲ್ಲ ನಿವೇದಿತಾ ಗೌಡ ಪಟಪಟ ಅಂತ ಉತ್ತರವನ್ನು ನೀಡಿದ್ದಾರೆ. ನಾನು ಇಲ್ಲಿ ಎರಡನೇ ಬಾರಿ ಬಂದಿದ್ದೇನೆ, ಕಳೆದ ವರ್ಷ ಕೂಡ ಬಂದಿದ್ದೇ ಇಲ್ಲಿನ ಬೀಚ್‌ಗಳು ಅಂದರೆ ನನಗೆ ಸಖತ್ ಇಷ್ಟ ಎಂದು ಅಲ್ಲಿನ ಕೆಲ ಸ್ಥಳಗಳನ್ನ ಹೆಸರನ್ನು ನಿವೇದಿತಾ ಗೌಡ ಹೇಳಿದ್ದಾರೆ.
ಎಂದಿನಂತೆ ನಿವೇದಿತಾ ಗೌಡ ಅವರ ಈ ವಿಡಿಯೋ ನಾನಾ ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ದಿಜೇಕೋಬ್ಜ್ ಅವರ ಇನ್‌ಸ್ಟಾಗ್ರಾಮ್ ಅಕೌಂಟ್‌ಗೆ ದಾಂಗುಡಿ ಇಟ್ಟಿರುವ ಅನೇಕರು ನಿವೇದಿತಾ ಗೌಡ ಅವರನ್ನು ತೆಗಳುತ್ತಿದ್ದಾರೆ. ಅಕ್ಕಾ ನೀವೇನು ಇಲ್ಲಿ ಎಂದು ಕಾಮೆಂಟ್ ಮಾಡಿದ್ದಾರೆ. ಒಬ್ಬರು ಭಾರತಕ್ಕೆ ಅವರನ್ನು ಕಳುಹಿಸಬೇಡಿ ಅಲ್ಲಿಯೇ ಇಟ್ಟುಕೊಂಡು ಬಿಡಿ ಎಂದರೆ ಇನ್ನು ಕೆಲವರು ನಿವೇದಿತಾ ಗೌಡ ಅವರ ಆಕ್ಸೆಂಟ್ ಬಗ್ಗೆ ತಕರಾರು ತೆಗೆದಿದ್ದಾರೆ.
ಇನ್ನು ನಿವೇದಿತಾ ಗೌಡ ಅವರ ಹೆಸರನ್ನು ದಿಜೇಕೋಬ್ಜ್ ತಪ್ಪಾಗಿ ತಮ್ಮ ವಿಡಿಯೋದಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ ಅನೇಕರು ನಿವೇದಿತಾ ಗೌಡ ಅವರ ಹೆಸರು ಸರಿಯಾಗಿ ಹಾಕಿ ಎನ್ನುತ್ತಿದ್ದಾರೆ. ನಿವೇದಿತಾ ಗೌಡ ಕರ್ನಾಟಕದಲ್ಲಿ ತುಂಬಾನೇ ಫೇಮಸ್ ಎಂದು ಕಾಮೆಂಟ್ ಮಾಡಿದ್ದಾರೆ. ನಿವೇದಿತಾ ಗೌಡ ಅವರ ಐಡಿಯನ್ನು ಕೂಡ ಟ್ಯಾಗ್ ಮಾಡುತ್ತಿದ್ದಾರೆ.
ಕೇವಲ ಒಂದು ಗಂಟೆಯಲ್ಲಿ ಈ ವಿಡಿಯೋಗೆ 5000ಕ್ಕೂ ಅಧಿಕ ಲೈಕ್‌ಗಳು ಬಂದಿವೆ. ಸಾಕಷ್ಟು ಜನ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಅಂದ್ಹಾಗೇ ಕೆಲ ದಿನಗಳ ಹಿಂದೆ ಕೂಡ ನಿವೇದಿತಾ ಗೌಡ ಇದೇ ರೀತಿ ಬೆಂಗಳೂರಿನಲ್ಲಿ ಅಪರಿಚಿತ ವ್ಯಕ್ತಿಯ ಜೊತೆ ಮಾತನಾಡಿದ್ದರು. ರಾಕೇಶ್ ಎಂಬ ವ್ಯಕ್ತಿ ನಿವೇದಿತಾ ಗೌಡ ಅವರ ವಿಡಿಯೋ ಹಂಚಿಕೊಂಡಿದ್ದರು.
ರಾಕೇಶ್ ಕೇಳಿದ್ದ ಪ್ರಶ್ನೆಗೆ ಉತ್ತರ ನೀಡಿದ್ದ ನಿವೇದಿತಾ ಗೌಡ, ಅಪರಿಚತ ವ್ಯಕ್ತಿಯಾದ ರಾಕೇಶ್ ಅವರ ಕೋರಿಕೆಯ ಮೇರೆಗೆ ಅವರ ಕ್ಯಾಮರಾಗೆ ಬೋಲ್ಡ್ ಫೋಸ್‌ಗಳನ್ನು ಕೂಡ ನೀಡಿದ್ದರು. ಡ್ಯಾನ್ಸ್ ಪ್ಲೋರ್ ಮೇಲೆ ಮಾದಕವಾಗಿ ಹೆಜ್ಜೆಯನ್ನು ಹಾಕಿದ್ದರು.
ಇನ್ನುಳಿದಂತೆ ಸದ್ಯ ನಿವೇದಿತಾ ಗೌಡ ಚಿತ್ರರಂಗದಲ್ಲಿ ಒಂದೊಂದೆ ಹೆಜ್ಜೆ ಇಡುತ್ತಿದ್ದಾರೆ. ಮಾಜಿ ಪತಿ ಚಂದನ್ ಶೆಟ್ಟಿ ಜೊತೆ ಮುದ್ದು ರಾಕ್ಷಸಿ ಎಂಬ ಚಿತ್ರದಲ್ಲಿ ನಿವೇದಿತಾ ಗೌಡ ನಟಿಸಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು ಶೀಘ್ರದಲ್ಲಿಯೇ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ. ಸೃಜನ್ ಲೊಕೇಶ್ ಜೊತೆ ನಿವೇದಿತಾ ಗೌಡ ಅಭಿನಯದ ಜಿಎಸ್‌ಟಿ ಚಿತ್ರ ಸದ್ಯದಲ್ಲಿಯೇ ತೆರೆಗೆ ಬರಲಿದೆ.


Click it and Unblock the Notifications










