ವೆಡ್ಡಿಂಗ್ ಆನಿವರ್ಸರಿ ಸೆಲೆಬ್ರೇಷನ್; ದರ್ಶನ್- ವಿಜಯಲಕ್ಷ್ಮಿ ಬಿಂದಾಸ್ ಡ್ಯಾನ್ಸ್

ಕನ್ನಡ ನಟ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ 22ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿರುವುದು ಗೊತ್ತೇಯಿದೆ. ನಿನ್ನೆ ರಾತ್ರಿ ಆಪ್ತರ ಜೊತೆ ದಂಪತಿ ಖಾಸಗಿ ಹೋಟೆಲ್‌ನಲ್ಲಿ ಭರ್ಜರಿಯಾಗಿ ಆನಿವರ್ಸರಿ ಸೆಲೆಬ್ರೇಟ್ ಮಾಡಿದ್ದಾರೆ. ಡ್ಯಾನ್ಸ್, ಹಾಡು, ಹರಟೆ ಅಂತ ಸಖತ್ ಎಂಜಾಯ್ ಮಾಡಿದ್ದಾರೆ.

ಕನಕಪುರ ರಸ್ತೆಯ ರೆಸಾರ್ಟ್‌ವೊಂದರಲ್ಲಿ ಭರ್ಜರಿ ಪಾರ್ಟಿ ಮಾಡಿದ್ದಾರೆ. ವಿಜಯಲಕ್ಷ್ಮಿ ಸ್ನೇಹಿತೆಯರು ಕೂಡ ಇದಕ್ಕೆ ಸಾಕ್ಷಿ ಆಗಿದ್ದಾರೆ. ಪತ್ನಿಗಾಗಿ ದರ್ಶನ್ ಕೆಲ ಸಿನಿಮಾ ಗೀತೆಗಳನ್ನು ಹಾಡಿದ್ದಾರೆ. ಚಿಕ್ಕಣ್ಣ ಸೇರಿ ಕೆಲವೇ ದರ್ಶನ್ ಆಪ್ತರು ಈ ವೇಳೆ ಹಾಜರಿದ್ದರು. ಇನ್ನು ಈ ಭರ್ಜರಿ ಪಾರ್ಟಿಯ ಫೋಟೊ, ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Watch Darshan And Vijayalakshmi s dance on Muddu Raakshasi at anniversary bash

'ವಾಮನ' ಚಿತ್ರದ 'ಮುದ್ದು ರಾಕ್ಷಸಿ' ಹಾಡಿಗೆ ದರ್ಶನ್ ಹಾಗೂ ವಿಜಯಲಕ್ಷ್ಮಿ ಡ್ಯಾನ್ಸ್‌ ಮಾಡಿ ಸಂಭ್ರಮಿಸಿದ್ದರು. ಸುತ್ತ ಇದ್ದವರು ಹರ್ಷೋದ್ಘಾರದ ಮೂಲಕ ಹುರಿದುಂಬಿಸಿದ್ದಾರೆ. ಸಿಕ್ಕಾಪಟ್ಟೆ ಜೋಶ್‌ನಲ್ಲಿ ದರ್ಶನ್ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದರು. ವಿಚಾರಣಾಧೀನ ಕೈದಿಯಾಗಿ ಜೈಲು ವಾಸ ಅನುಭಸುವಂತಾಗಿತ್ತು. ಜಾಮೀನು ಪಡೆದು ಹೊರಬಂದಿದ್ದ ದರ್ಶನ್ ಬೆನ್ನು ನೋವಿನ ಸಮಸ್ಯೆಯಿಂದ ಬಳಲಿದ್ದರು.

ದರ್ಶನ್ ಜೈಲಿನಲ್ಲಿ ಇದ್ದಾಗ ಪತ್ನಿ ವಿಜಯಲಕ್ಷ್ಮಿ ಬೆಂಬಲವಾಗಿ ನಿಂತಿದ್ದರು. ಕಾನೂನು ಹೋರಾಟದ ಜೊತೆಗೆ ದೇವಸ್ಥಾನಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಪತಿಯನ್ನು ಜೈಲಿನಿಂದ ಹೊರಗೆ ಕರೆತರಲು ಶ್ರಮಿಸಿದ್ದರು. ಜೈಲಿನಿಂದ ಬಿಡುಗಡೆಯಾಗಿ ಬಂದಮೇಲೆ ಬೆನ್ನು ನೋವಿನ ಸಮಸ್ಯೆಗೆ ದರ್ಶನ್ ಚಿಕಿತ್ಸೆ ಪಡೆದು ವಿಶ್ರಾಂತಿಯಲ್ಲಿದ್ದರು. ಬಳಿಕ ನಿಧಾನವಾಗಿ ಓಡಾಡಲು ಆರಂಭಿಸಿದರು.

ತಮ್ಮ ಫಾರ್ಮ್‌ಹೌಸ್‌ನಲ್ಲಿ ಫ್ಯಾಮಿಲಿ ಜೊತೆ ಸಂಕ್ರಾಂತಿ ಆಚರಿಸಿದ್ದರು. ರಕ್ಷಿತಾ ಸಹೋದರನ ಮದುವೆಯಲ್ಲಿ ಸಹ ಭಾಗಿ ಆಗಿದ್ದರು. ಬಳಿಕ 'ಡೆವಿಲ್' ಸಿನಿಮಾ ಚಿತ್ರೀಕರಣಕ್ಕೆ ಹಾಜರಾಗಿದ್ದರು. ನಿಧಾನವಾಗಿ ದರ್ಶನ್ ಮೊದಲಿನಂತೆ ಸಹಜ ಜೀವನ ನಡೆಸುತ್ತಿದ್ದಾರೆ. ಇದೀಗ ಪತ್ನಿ ಜತೆ ಸೇರಿ ಅದ್ಧೂರಿಯಾಗಿ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದಾರೆ. ಕಳೆದ ವರ್ಷ ದುಬೈದಲ್ಲಿ ಅಭಿಮಾನಿಗಳ ಜೊತೆ ದಂಪತಿ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದರು.

ಇನ್ನು ರಾತ್ರಿ ಪಾರ್ಟಿ ಬಳಿಕ ವಿಜಯಲಕ್ಷ್ಮಿ ದರ್ಶನ್ ಇನ್‌ಸ್ಟಾಗ್ರಾಮ್‌ನಲ್ಲಿ 'ಶಾಶ್ವತ ಬಂಧ' ಎಂದು ಬರೆದು ಪತಿಯ ಜೊತೆಗಿನ ಫೋಟೊವನ್ನು ಹಂಚಿಕೊಂಡಿದ್ದಾರೆ. ನೆಚ್ಚಿನ ದಂಪತಿಗೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ವಿವಾಹ ವಾರ್ಷಿಕೋತ್ಸವದ ಶುಭಾಶಯ ಕೋರುತ್ತಿದ್ಧಾರೆ. ಇದೀಗ ಇಬ್ಬರ ಡ್ಯಾನ್ಸ್ ನೋಡಿ ಖುಷಿಯಾಗಿದ್ದಾರೆ. ನೂರ್ಕಾಲ ಹೀಗೆ ಖುಷಿಯಾಗಿರಿ ಎಂದು ಹಾರೈಸುತ್ತಿದ್ದಾರೆ.

22 ವರ್ಷಗಳ ಹಿಂದೆ ಮೇ 19ರಂದು ಧರ್ಮಸ್ಥಳದಲ್ಲಿ ದರ್ಶನ್ ಹಾಗೂ ವಿಜಯಲಕ್ಷ್ಮಿ ಮದುವೆ ನಡೆದಿತ್ತ. ದಂಪತಿಗೆ ಒಬ್ಬ ಮಗ ಇದ್ದಾನೆ. ಇಂಜಿನಿಯರಿಗೆ ವ್ಯಾಸಂಗ ಮಾಡುವಾಗ ಕಿರುತೆರೆ ನಿರೂಪಕಿಯಾಗಿ ವಿಜಯಲಕ್ಷ್ಮಿ ಕೆಲಸ ಮಾಡುತ್ತಿದ್ದರು. ಪ್ರೀತಿ ಅಲ್ಲ ಹೊಸ ಸಂಬಂಧ ಎಂದು ಮದುವೆ ಸಮಯದಲ್ಲಿ ನೀಡಿದ ಸಂದರ್ಶನದಲ್ಲಿ ದರ್ಶನ್ ಹೇಳಿಕೊಂಡಿದ್ದರು.

ದಾಂಪತ್ಯ ಜೀವನದಲ್ಲಿ ಸಾಕಷ್ಟು ಸಂಕಷ್ಟ ಎದುರಾಗಿತ್ತು. ಅದನ್ನೆಲ್ಲಾ ಮೀರಿ ದಂಪತಿ ಇದೀಗ ಜೊತೆಯಾಗಿ ಖುಷಿಯಾಗಿದ್ದಾರೆ. ಸದ್ಯ ದರ್ಶನ್ 'ಡೆವಿಲ್' ಸಿನಿಮಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕಳೆದೆರಡು ದಿನಗಳಿಂದ ಕ್ಲೀನ್‌ ಶೇವ್ ಲುಕ್‌ನಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಆಪ್ತರ ಮದುವೆ ಸಮಾರಂಭದಲ್ಲಿ ಕೂಡ ಇದೇ ರೀತಿ ದರ್ಶನ ಕೊಟ್ಟಿದ್ದರು. ಇದು 'ಡೆವಿಲ್' ಸಿನಿಮಾ ಲುಕ್ ಇರಬಹುದು ಎಂದು ಅಭಿಮಾನಿಗಳು ಭಾವಿಸುತ್ತಿದ್ದಾರೆ.

ವರ್ಷಾಂತ್ಯಕ್ಕೆ 'ಡೆವಿಲ್' ಸಿನಿಮಾ ತೆರೆಗೆ ಬರಲಿದೆ. ಮಿಲನಾ ಬಂಡವಾಳ ಹೂಡಿ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಇದೇ ಕಾಂಬಿನೇಷನ್‌ನಲ್ಲಿ ಈ ಹಿಂದೆ 'ತಾರಕ್' ಸಿನಿಮಾ ಬಂದು ಗೆದ್ದಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷವೇ ಸಿನಿಮಾ ತೆರೆಗೆ ಬರಬೇಕಿತ್ತು.

More from Filmibeat

English summary
Darshan And Vijayalakshmi's Wedding anniversary celebration; They both match steps at the party
Read more about: darshan vijayalakshmi sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X