'ವಾಸ್ತು ಪ್ರಕಾರ' ಬರ್ತಾಯಿದೆ ಯೋಗರಾಜ್ ಭಟ್ರ ಚಿತ್ರ

By Harshitha

ಭಟ್ರು ಅಂದುಕೊಂಡಂಗೆ 'ವಾಸ್ತು ಪ್ರಕಾರ' ರೆಡಿಯಾಗಿದೆ. ಎಲ್ಲಾ ವಾಸ್ತು ದೋಷಗಳು ಪರಿಹಾರವಾಗಿರುವುದರಿಂದ ಏಪ್ರಿಲ್ 2 ರಂದು 'ವಾಸ್ತು ಪ್ರಕಾರ' ಚಿತ್ರವನ್ನ ಬೆಳ್ಳಿತೆರೆಗೆ ತರುತ್ತಿದ್ದಾರೆ ನಿರ್ದೇಶಕ ಯೋಗರಾಜ್ ಭಟ್.

ಅಸಲಿಗೆ ಭಟ್ಟರ ಸಿನಿಮಾ ತೆರೆಗೆ ಬಂದು ಮೂರು ವರ್ಷಗಳಾಗಿವೆ. ಆದ್ರಿಂದ, 'ವಾಸ್ತು ಪ್ರಕಾರ' ಚಿತ್ರದ ಬಗ್ಗೆ ತುಂಬಾ ಹೋಪ್ಸ್ ಇದೆ. ಕತ್ತಲಲ್ಲಿ ಕರಡಿಗೆ ಜಾಮೂನು ತಿನ್ನಿಸುವ ಭಟ್ರು, 'ವಾಸ್ತು ಪ್ರಕಾರ' ಸಿನಿಮಾದ ಮೂಲಕ ಏನು ಹೇಳೋಕೆ ಹೊರಟ್ಟಿದ್ದಾರೆ ಅನ್ನುವ ಕಾತರ ಕೂಡ ಅವರ ಅಭಿಮಾನಿಗಳಿಗಿದೆ.

ಆ ಕಾತರವನ್ನ ಕೊಂಚ ಕೂಲ್ ಮಾಡುವುದಕ್ಕೆ ಭಟ್ಟರ ಕ್ಯಾಂಪಿನಿಂದ 'ವಾಸ್ತು ಪ್ರಕಾರ' ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. 'ವಾಸ್ತು ಪ್ರಕಾರ' ಟೈಟಲ್ ನೋಡಿ, ಇದು ಶಾಸ್ತ್ರ-ಸಂಪ್ರದಾಯ ಇರುವ ಸಿನಿಮಾ ಇರಬೇಕು ಅಂತ ನೀವು ಭಾವಿಸಿದ್ದರೆ, ಮೊದಲು ಈ ಟ್ರೇಲರ್ ನೊಮ್ಮೆ ನೋಡಿಬಿಡಿ....

ಜ್ಯೋತಿಷ್ಯ-ಶಾಸ್ತ್ರ ಅಂತ ದಿನ ಬೆಳಗಾದ್ರೆ ಲಕ್ಷ-ಲಕ್ಷ ದುಡ್ಡು ಲೂಟಿ ಹೊಡೆಯುವವರ ಕಥೆಯನ್ನ ನೀವು ಕೇಳಿರ್ತೀರಾ. ಅಂಥದ್ದೇ ಎರಡು ವೈಟು ಒಂದು ರೆಡ್ಡು ಹಾಕುವ ಕಥೆಯನ್ನ 'ವಾಸ್ತು ಪ್ರಕಾರ' ಚಿತ್ರದ ಮೂಲಕ ಹೊತ್ತು ತಂದಿದ್ದಾರೆ ಭಟ್ರು. [ಭಟ್ರಿಗೆ ನೀಲಿ ರಾಣಿ ಸನ್ನಿ ಲಿಯೋನೇ ಬೆಸ್ಟು ಕಣ್ರೀ!]

ದೇವರು, ರಾಜಕಾರಣ, ಧರ್ಮ ಹೆಸರಲ್ಲಿ ದರೋಡೆ ಮಾಡುತ್ತಿರುವವರ ಪೈಕಿ ವಾಸ್ತು ಹೆಸರಲ್ಲಿ ಪೈಸಾ ಕಮಾಯಿ ಮಾಡುವ ಐಡಿಯಾ ನವರಸ ನಾಯಕ ಜಗ್ಗೇಶ್ ರದ್ದು. ಅವರಿಗೆ ಸಾಥ್ ಕೊಡೋಕೆ ರಕ್ಷಿತ್ ಶೆಟ್ಟಿ ಇದ್ದಾರೆ.

ಮೇಲ್ನೋಟಕ್ಕೆ ಅನಂತ್ ನಾಗ್ ಮತ್ತು ಸುಧಾರಾಣಿ ವಾಸ್ತು ದೋಷದಿಂದ ಬೆಂಡಾಗಿರುವಂತೆ ಕಾಣುತ್ತಾರೆ. ಇನ್ನೂ ಪ್ರೀತಿ ಹೆಸರಲ್ಲಿ ಲವ್ವಿ ಡವ್ವಿ ಆಡುವುದಕ್ಕೆ ಪಾರುಲ್ ಯಾದವ್ ಮತ್ತು ಐಶಾನಿ ಶಟ್ಟಿ ಇದ್ದಾರೆ. [ಆಸ್ತ್ರದುಲಯಕೋ ಮಿನಸೋಮಾ ಕಾಯಮಿಕ ಮುನಾಸೋ!]

ಟ್ರೇಲರ್ ನಲ್ಲಿ ವಿ.ಹರಿಕೃಷ್ಣ ಸಂಗೀತ ಸುಧೆಯ ಝಲಕ್ ಕೂಡ ಇದೆ. ಜಗ್ಗೇಶ್ ಇಮೇಜ್ ತಕ್ಕಂತೆ ಪಕ್ಕಾ ಕಾಮಿಡಿ ಎಂಟರ್ಟೇನರ್ ನಂತೆ ಕಾಣುವ 'ವಾಸ್ತು ಪ್ರಕಾರ' ಏಪ್ರಿಲ್ 2 ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಅಲ್ಲಿವರೆಗೂ ಬೇಸರ...ಕಾತರ...ಇಲ್ಲದೆ ಟ್ರೇಲರ್ ನೋಡ್ತಾಯಿರಿ....(ಫಿಲ್ಮಿಬೀಟ್ ಕನ್ನಡ)

More from Filmibeat

English summary
Yogaraj Bhat Directorial venture Vaasthu Prakara official trailer is out. The film is all set to release on April 2nd. Vaasthu Prakara features Jaggesh, Rakshit Shetty, Parul Yadav, Ananth Nag and Sudharani in lead roles. Check out the trailer of Vaasthu Prakara here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X