'RX ಸೂರಿ' ಬಗ್ಗೆ ದುನಿಯಾ ವಿಜಯ್ ಬಿಚ್ಚಿಟ್ಟ ರಹಸ್ಯ

By Harshitha

'RX ಸೂರಿ' ಚಿತ್ರದ ಬಗ್ಗೆ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ದುನಿಯಾ ವಿಜಯ್ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ ಅಂತ ನಿನ್ನೆಯಷ್ಟೇ ನಾವು ನಿಮಗೆ ಹೇಳಿದ್ವಿ.

ಆ ಬ್ರೇಕಿಂಗ್ ನ್ಯೂಸ್ ಏನು ಅಂತ ತಿಳಿದುಕೊಳ್ಳುವ ಸಮಯ ಬಂದೇ ಬಿಟ್ಟಿದೆ. 'RX ಸೂರಿ' ಚಿತ್ರ ಆಂಧ್ರ ನೆಲದ ಪರಿಟಾಲ ರವಿ-ಸೂರಿ ಕಥೆ ಅಲ್ಲ. ಬೆಂಗಳೂರಿನಲ್ಲಿ ನಡೆದ ನೈಜ ರಕ್ತ ಚರಿತ್ರೆ ಇದು.! ['ಫಿಲ್ಮಿಬೀಟ್ ಕನ್ನಡ'ಗೆ ದುನಿಯಾ ವಿಜಯ್ ನೀಡಿದ ಬ್ರೇಕಿಂಗ್ ನ್ಯೂಸ್.!]

ಸುಮಾರು ಎಂಟು ವರ್ಷಗಳ ಹಿಂದೆ ಬೆಂಗಳೂರಿನ ಅವಲಹಳ್ಳಿಯಲ್ಲಿದ್ದ ರೌಡಿಯೊಬ್ಬರ ನಿಜ ಜೀವನದ ಪ್ರೇಮ ಕಥೆ ಈ 'RX ಸೂರಿ'. ಹಾಗಂತ ಖುದ್ದು ದುನಿಯಾ ವಿಜಯ್ ಮತ್ತು ನಿರ್ದೇಶಕ ಶ್ರೀ ಜೈ ಬಾಯ್ಬಿಟ್ಟಿದ್ದಾರೆ.

'ಫಿಲ್ಮಿಬೀಟ್ ಕನ್ನಡ'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವಲಹಳ್ಳಿಯ ರೌಡಿ, ಆತನ ಹಿಂದೆ ಬಿದ್ದು ಪ್ರೀತಿ ಮಾಡ್ತಿದ್ದ ಹುಡುಗಿ ಬಗ್ಗೆ ದುನಿಯಾ ವಿಜಯ್ ಮನಬಿಚ್ಚಿ ಮಾತನಾಡಿದ್ದಾರೆ. ಅದನ್ನೆಲ್ಲಾ ತಿಳಿದುಕೊಳ್ಳುವುದಕ್ಕೆ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.........

'RX ಸೂರಿ' ನಿಜವಾದ ಕಥೆ

'RX ಸೂರಿ' ನಿಜವಾದ ಕಥೆ

''ಸಿನಿಮಾದಲ್ಲಿ ನನ್ನ ತಂಗಿ ಕ್ಯಾರೆಕ್ಟರ್ ಗೆ ಕೆಟ್ಟ ಕೆಟ್ಟ ಮೆಸೇಜ್ ಗಳು ಬರುವುದಕ್ಕೆ ಶುರುವಾಗುತ್ತೆ. ನಾನು ಆಕೆಗೆ ಬೈದಾಗ, ಫೋನ್ ಕರೆನ್ಸಿ ಹಾಕುವ ಹುಡುಗರು ಈ ರೀತಿ ಮಾಡುತ್ತಿದ್ದಾರೆ ಅಂತ ಗೊತ್ತಾಗುತ್ತೆ. ಇದು ಸುಮಾರು ಕಡೆ ನಡೆಯುವ ವಿಷಯ. ಈ ವಿಷಯ ಗೊತ್ತಾಗಿ, ನಾನು ಹೊಡೆಯುವುದಕ್ಕೆ ಹೋಗಿ, ರೌಡಿ ಆಗುತ್ತೇನೆ. ಇಲ್ಲಿ ಫ್ಯಾಮಿಲಿಗಾಗಿ ಹೋರಾಡುವ ಹುಡುಗ ರೌಡಿ ಆಗುತ್ತಾನೆ. ವಾಸ್ತವವಾಗಿ ನಡೆದಿರುವ ಕಥೆ ಇದು. ಇದಕ್ಕಾಗಿ ನಾನು ಈ ಸಿನಿಮಾನ ಒಪ್ಪಿಕೊಂಡೆ''.

ನಿಜವಾದ ಪ್ರೇಮ ಕಥೆ

ನಿಜವಾದ ಪ್ರೇಮ ಕಥೆ

''ಪ್ರೀತಿ ಅಂತ ಶುರುವಾಗುತ್ತೆ. ಸಿನಿಮಾದಲ್ಲಿ ಹುಡುಗಿ ಪ್ರೀತಿ ಮಾಡ್ತಾಳೆ. ಹುಡುಗ ಬೇಡ ಅಂದ್ರೂ ಕೇಳಲ್ಲ. ಪ್ರೀತಿ ಬಲವಾಗಿ ಬೆಳೆದುಕೊಂಡು ಹೋಗುತ್ತೆ ಸಿನಿಮಾದಲ್ಲಿ. ಅದು ನನಗೆ ತುಂಬಾ ಇಷ್ಟವಾಯ್ತು.''

ರಿಯಲ್ ಸೂಸೈಡ್ ಸ್ಟೋರಿ.!

ರಿಯಲ್ ಸೂಸೈಡ್ ಸ್ಟೋರಿ.!

''ಹೀರೋ ಮರ್ಡರ್ ಆಗುತ್ತೆ. ಹೀರೋಯಿನ್ ಬಾಡಿ ನೋಡುವುದಕ್ಕೆ ಬರುವುದಿಲ್ಲ. ಹುಡುಗ ಕೇಳಿಕೊಳ್ಳುತ್ತಾನೆ, ಹುಡುಗೀನ ನೋಡಬೇಕು ಅಂತ. ಇಲ್ಲ, ನಾನು ಬರಲ್ಲ ಅಂತ ವಾಪಸ್ ಹೋಗಿ ಸೂಸೈಡ್ ಮಾಡಿಕೊಳ್ಳುತ್ತಾಳೆ. ಇದು ನಿಜವಾಗ್ಲೂ ನಡೆದಿರುವ ಕಥೆ.''

''ಸಿನಿಮಾದಲ್ಲಿ ನಾವು ನೀಡಿರುವ ಸಂದೇಶ.....''

''ಸಿನಿಮಾದಲ್ಲಿ ನಾವು ನೀಡಿರುವ ಸಂದೇಶ.....''

''ಸಿನಿಮಾದ ಮೂಲಕ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಳ್ಳುವುದನ್ನ ನಿಲ್ಲಿಸಲಿ ಅನ್ನೋದು ನಮ್ಮ ಸಂದೇಶ.''

''ಆತ್ಮಹತ್ಯೆ ಮಾಡಿಕೊಂಡ ಹುಡುಗಿ ತಂದೆ-ತಾಯಿ ಭೇಟಿ ಮಾಡ್ದೆ''

''ಆತ್ಮಹತ್ಯೆ ಮಾಡಿಕೊಂಡ ಹುಡುಗಿ ತಂದೆ-ತಾಯಿ ಭೇಟಿ ಮಾಡ್ದೆ''

''ನಾನು ಹೋಗಿ ಹುಡುಗಿಯ ತಾಯಿ-ತಂದೆಯನ್ನ ಮೀಟ್ ಮಾಡಿ ಮಾತಾಡಿದ್ವಿ. ಅವರು ಹೇಳಿದ್ದು ಇಷ್ಟೆ. ಯಾರೇ ಪ್ರೀತಿ ಮಾಡಿದರೂ, ಮನೆಯವರಿಗೆ ತಿಳಿಸಬೇಕು. ನನ್ನ ಮಗಳು ಪ್ರೀತಿ ಮಾಡ್ತಿದ್ದಾಳೆ ಅಂತ ಗೊತ್ತಿದ್ರೆ, ಖಂಡಿತವಾಗ್ಲೂ ನಾನು ಮದುವೆ ಮಾಡ್ತಿದ್ದೆ. ಅಂತವಳು ಸೂಸೈಡ್ ಮಾಡಿಕೊಂಡುಬಿಟ್ಟಳು ಅಂತ ಅವರ ಮನೆಯವರು ತುಂಬಾ ಅತ್ತರು.''

ಬೆಂಗಳೂರಿನ ಅವಲಹಳ್ಳಿ ಕಥೆ

ಬೆಂಗಳೂರಿನ ಅವಲಹಳ್ಳಿ ಕಥೆ

''ಮೊದಲು ಯಾರೋ ಹಬ್ಬಿಸಿಬಿಟ್ಟಿದ್ದರು ಇದು ಪೆರಿಟಾಲ ರವಿ-ಸೂರಿ ಕಥೆ ಇದು ಅಂತ. ಆದ್ರೆ, ಅದೆಲ್ಲಾ ಸುಳ್ಳು. ಬೆಂಗಳೂರಿನ ಅವಲಹಳ್ಳಿಯಲ್ಲಿ ನಡೆದಿರುವ ಕಥೆ ಇದು. ಅವರ ಕುಟುಂಬದ ಎಷ್ಟೋ ಜನರಿಗೆ ಇವತ್ತಿಗೂ ಹುಡುಗಿ ಸತ್ತು ಹೋಗಿರುವ ವಿಷಯ ಗೊತ್ತಿಲ್ಲ.''

ದುನಿಯಾ ವಿಜಯ್-ಶ್ರೀ ಜೈ ಸಂದರ್ಶನ

ಎಂಟು ವರ್ಷಗಳ ಹಿಂದೆ ಅವಲಹಳ್ಳಿಯಲ್ಲಿ ನಡೆದ ನೈಜ ಘಟನೆಯನ್ನ ಇದ್ದ ಹಾಗೆ 'RX ಸೂರಿ' ಸಿನಿಮಾದಲ್ಲಿ ತೋರಿಸಲಾಗಿದೆ. 'ಫಿಲ್ಮಿಬೀಟ್ ಕನ್ನಡ' ಜೊತೆ ದುನಿಯಾ ವಿಜಯ್ ಮತ್ತು ಶ್ರೀ ಜೈ ಮಾತನಾಡಿರುವ ವಿಡಿಯೋ ಇಲ್ಲಿದೆ ನೋಡಿ.....

More from Filmibeat

English summary
In an Interview with Filmibeat Kannada, Kannada Actor Duniya Vijay and Director Shri Jai has revealed the real characters of Kannada Film 'Rx Suri'. Watch the interview here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X