'RX ಸೂರಿ' ಟ್ರೈಲರ್ ; ಲಾಂಗು-ಮಚ್ಚುಗಳ ಅಬ್ಬರ

By Harshitha

ವರ್ಷದಿಂದ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿರುವ ಕನ್ನಡ ಸಿನಿಮಾ 'RX ಸೂರಿ'. 'ಜಾಕ್ಸನ್' ಚಿತ್ರದ ನಂತ್ರ ದುನಿಯಾ ವಿಜಯ್ ನಟಿಸುತ್ತಿರುವ ಚಿತ್ರ ಇದು.

ಟ್ರೂ ಲವ್ ಸ್ಟೋರಿ ಅಂತ ಟ್ಯಾಗ್ ಲೈನ್ ಇರುವ 'RX ಸೂರಿ' ಚಿತ್ರ 'ನೈಜಕಥೆ' ಆಧರಿಸಿರುವ ಸಿನಿಮಾ. ಆ ನೈಜಕಥೆ ರಾಯಲಸೀಮೆಯ ಪರಿಟಾಲ ಸೂರಿ ಅವರದ್ದು ಅನ್ನೋದು ಮೂಲಗಳ ಮಾಹಿತಿ. ಆದ್ರೆ, ಈ ಬಗ್ಗೆ ಚಿತ್ರತಂಡ ಎಲ್ಲೂ ಕ್ಲೂ ಬಿಟ್ಟುಕೊಟ್ಟಿಲ್ಲ. [ದುನಿಯಾ ವಿಜಿ ಹುಟ್ಟುಹಬ್ಬದ ಉಡುಗೊರೆ: RX ಸೂರಿ ಟೀಸರ್]

watch-duniya-vijay-starrer-kannada-movie-rx-soori-trailer

ಈಗ ರಿಲೀಸ್ ಆಗಿರುವ ಟ್ರೈಲರ್ ನೋಡಿದ್ರೆ, ಓರ್ವ ರೌಡಿಯ ನಿಜಬದುಕು 'RX ಸೂರಿ' ಮೂಲಕ ಅನಾವರಣ ಆಗಿರುವುದು ಗ್ಯಾರೆಂಟಿ. ವ್ರೂಮ್...ಅಂತ RX ಯಮಹಾ ಬೈಕ್ ನಲ್ಲಿ ಓಡಾಡುವ ರೌಡಿಯಾಗಿ ದುನಿಯಾ ವಿಜಯ್ ಮಿಂಚಿದ್ದಾರೆ.

ಬೈಕ್ ಮೇಲೆ ಲಾಂಗು-ಮಚ್ಚು ಹಿಡಿದುಕೊಂಡು ದುನಿಯಾ ವಿಜಯ್, ವೈರಿಗಳ ರುಂಡ ಚೆಂಡಾಡಿದ್ದಾರೆ. ಹಾಗಂತ ಸಿನಿಮಾದಲ್ಲಿ ಬರೀ ರಕ್ತ ಪಾತ ಮಾತ್ರ ಇಲ್ಲ. ನವಿರಾದ ಪ್ರೇಮ ಕಥೆ ಕೂಡ ಇದೆ. [ಗೆಳತಿಗಾಗಿ ಎಲ್ಲಾ ಬುಟ್ಬುಟ್ಟ 'ಕರಿಚಿರತೆ' ದುನಿಯಾ ವಿಜಿ]

ದುನಿಯಾ ವಿಜಯ್ ಗೆ ಜೋಡಿಯಾಗಿ ಆಕಾಂಕ್ಷ ಇದ್ದಾರೆ. RX ಸೂರಿ ವೈರಿ ಪಾಳಯದಲ್ಲಿ ರವಿಶಂಕರ್, ಆದಿ ಲೋಕೇಶ್ ಮಿಂಚಿದ್ದಾರೆ. ಗಲ್ಲಿಗಲ್ಲಿಗಳಲ್ಲಿ ಚಿತ್ರೀಕರಣಗೊಂಡಿರುವ 'RX ಸೂರಿ'ಗೆ ಆಕ್ಷನ್ ಕಟ್ ಹೇಳಿರುವುದು ಶ್ರೀ ಜೈ.

watch-duniya-vijay-starrer-kannada-movie-rx-soori-trailer

ಹೇಳಿ ಕೇಳಿ 'RX ಸೂರಿ' ದುನಿಯಾ ವಿಜಯ್ ಸಿನಿಮಾ. ಅಂದ್ಮೇಲೆ ಚಿತ್ರದಲ್ಲಿ ಭರ್ಜರಿ ಸ್ಟಂಟ್ಸ್ ಇರಲೇಬೇಕು. ಡಿಫರೆಂಟ್ ಡ್ಯಾನಿ ಮತ್ತು ವಿನೋದ್ 'RX ಸೂರಿ' ಚಿತ್ರಕ್ಕಾಗಿ ಮೈನವಿರೇಳಿಸುವ ಸಾಹಸ ಸಂಯೋಜಿಸಿದ್ದಾರೆ. ಅದ್ರ ಝಲಕ್ ಟ್ರೈಲರ್ ನಲ್ಲಿದೆ.

'ಗೋವಿಂದಾಯ ನಮಃ', 'ಶ್ರಾವಣಿ ಸುಬ್ರಮಣ್ಯ' ದಂತಹ ಹಿಟ್ ಸಿನಿಮಾಗಳನ್ನ ನೀಡಿದ್ದ ನಿರ್ಮಾಪಕ ಕೆ.ಎ.ಸುರೇಶ್, 'RX ಸೂರಿ' ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ 'RX ಸೂರಿ' ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ತೆರೆ ಮೇಲೆ ಸೂರಿ ಆರ್ಭಟಿಸಲಿದ್ದಾನೆ. ಅಲ್ಲಿವರೆಗೂ ಟ್ರೈಲರ್ ನೋಡ್ತಾಯಿರಿ...

More from Filmibeat

English summary
Kannada Actor Duniya Vijay starrer 'RX Soori' trailer is out. 'RX Soori' is directed by Shri Jai, features Akanksha, Ravishankar, Adi Lokesh and others. Watch the trailer here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X