»   » ಗಣೇಶ್ ಹುಟ್ಟುಹಬ್ಬಕ್ಕೆ 'ಆರೆಂಜ್' ಉಡುಗೊರೆ ಕೊಟ್ಟ ಪ್ರಶಾಂತ್ ರಾಜ್

ಗಣೇಶ್ ಹುಟ್ಟುಹಬ್ಬಕ್ಕೆ 'ಆರೆಂಜ್' ಉಡುಗೊರೆ ಕೊಟ್ಟ ಪ್ರಶಾಂತ್ ರಾಜ್

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬದ ಪ್ರಯುಕ್ತ 'ಚಮಕ್' ಟೀಸರ್ ಬಿಡುಗಡೆ ಆಗಿದೆ. 'ಮುಗುಳು ನಗೆ' ಚಿತ್ರತಂಡದ ಪರವಾಗಿ 'ಜಿ.ಎಸ್.ಟಿ' ಹಾಡು ರಿಲೀಸ್ ಆಗಿದೆ. ಇವುಗಳ ಜೊತೆಗೆ 'ಆರೆಂಜ್' ಟೈಟಲ್ ಟೀಸರ್ ಕೂಡ ನಿಮ್ಮ ಮುಂದೆ ಬಂದಿದೆ.

ಗಣೇಶ್ ಹುಟ್ಟುಹಬ್ಬಕ್ಕೆ ರಿಲೀಸ್ ಆಯ್ತು 'ಚಮಕ್' ಟೀಸರ್

ಹೌದು, 'Zooಮ್' ಸಿನಿಮಾ ನಂತರ ನಿರ್ದೇಶಕ ಪ್ರಶಾಂತ್ ರಾಜ್ ಹಾಗೂ ಗಣೇಶ್ ಒಂದಾಗಿರುವ ಸಿನಿಮಾ 'ಆರೆಂಜ್'. ಗಣೇಶ್ ಬರ್ತಡೇ ಪ್ರಯುಕ್ತ 'ಆರೆಂಜ್' ಚಿತ್ರದ ಟೈಟಲ್ ಟೀಸರ್ ಬಿಡುಗಡೆಗೊಳಿಸಿ, 'ಮಳೆ ಹುಡುಗ'ನಿಗೆ ಶುಭಾಶಯ ತಿಳಿಸಿದ್ದಾರೆ ನಿರ್ದೇಶಕ ಪ್ರಶಾಂತ್ ರಾಜ್.

Watch Ganesh starrer 'Orange' title teaser

'ಮುಗುಳು ನಗೆ' ಸಿನಿಮಾ ಮುಗಿದ ಬಳಿಕ 'ಆರೆಂಜ್' ಚಿತ್ರದ ಚಿತ್ರೀಕರಣದಲ್ಲಿ ಗಣೇಶ್ ಭಾಗಿಯಾಗಲಿದ್ದಾರೆ. ಮುಂದಿನ ವರ್ಷ ಸಂಕ್ರಾಂತಿ ಹಬ್ಬದ ಕೊಡುಗೆ ಆಗಿ 'ಆರೆಂಜ್' ಸಿನಿಮಾ ಬೆಳ್ಳಿತೆರೆಗೆ ಬರಲಿದೆ.

ಇಂದು ಬಿಡುಗಡೆ ಆಗಿರುವ 'ಆರೆಂಜ್' ಚಿತ್ರದ ಟೈಟಲ್ ಟೀಸರ್ ಇಲ್ಲಿದೆ ನೋಡಿರಿ...

English summary
Golden Star Ganesh starrer, Prashant Raj directorial 'Orange' title teaser is out. Watch video..

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada