»   » ವಿಡಿಯೋ: ಗೋಲ್ಡನ್ ಸ್ಟಾರ್ 'ಬಾಹುಬಲ'ಕ್ಕೆ ಉಘೇ.!

ವಿಡಿಯೋ: ಗೋಲ್ಡನ್ ಸ್ಟಾರ್ 'ಬಾಹುಬಲ'ಕ್ಕೆ ಉಘೇ.!

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಕನ್ನಡ ಚಿತ್ರರಂಗದ ರೊಮ್ಯಾಂಟಿಕ್ ಹೀರೋ. ರೊಮ್ಯಾನ್ಸ್, ಆಕ್ಷನ್, ಕಾಮಿಡಿ ಎಲ್ಲವನ್ನು ಬ್ಯಾಲೆನ್ಸ್ ಮಾಡುವ ಕಲಾತ್ಮಕ ನಟ. ಸದ್ಯ, 'ಮುಗುಳುನಗೆ' ಚಿತ್ರದ ಯಶಸ್ಸಿನಲ್ಲಿರುವ ಗಣೇಶ್ ಈಗ ತಮ್ಮ ಮುಂದಿನ ಚಿತ್ರಕ್ಕೆ ತಯಾರಾಗುತ್ತಿದ್ದಾರೆ.

ಹೌದು, ಗಣೇಶ್ ತಮ್ಮ ಮುಂದಿನ ಚಿತ್ರದಲ್ಲಿ ಅಭಿನಯಿಸಲು ದೈಹಿಕವಾಗಿ ಫಿಟ್ ಆಗುತ್ತಿದ್ದಾರೆ. ಅದಕ್ಕಾಗಿ ಜಿಮ್ ಗೆ ಹೋಗಿ ವರ್ಕೌಟ್ ಮಾಡುತ್ತಿಲ್ಲ. ತಮ್ಮ ಮನೆಯ ಬಳಿಯೇ ಹೊಸ ರೀತಿಯ ಕಸರತ್ತುಗಳನ್ನ ಮಾಡುತ್ತಿದ್ದಾರೆ.

ಅಟ್ಲಾಂಟಾದಲ್ಲಿ 'ಮುಗುಳುನಗು' ಬೀರಿದ ಭಟ್-ಗಣಿ ಜೋಡಿ

Watch Ganesh Work out Video

ತಮ್ಮ ದೇಹವನ್ನ ದಂಡಿಸುತ್ತಿರುವ ಗಣೇಶ್, ಭಾರೀ ವಾಹನದ (ಬಸ್ ಅಥವಾ ಲಾರಿ) ಚಕ್ರವನ್ನ ಹೊತ್ತು ವಾಕಿಂಗ್ ಮಾಡುತ್ತಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿರುವ ತಮ್ಮ ನಿವಾಸದ ಎದುರೇ ರಸ್ತೆಯಲ್ಲಿ ಇಂತಹ ಸಾಹಸ ಮಾಡುತ್ತಿದ್ದಾರೆ.

ಈ ವಿಡಿಯೋ ಸ್ವತಃ ಗಣೇಶ್ ಅವರೇ ಪೋಸ್ಟ್ ಮಾಡಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಂದ್ಹಾಗೆ, ಗೋಲ್ಡನ್ ಸ್ಟಾರ್ ಅಭಿನಯಿಸಲಿರುವ ಮುಂದಿನ ಚಿತ್ರ 'ಆರೆಂಜ್'. ಈ ಚಿತ್ರವನ್ನ ಪ್ರಶಾಂತ್ ರಾಜ್ ನಿರ್ದೇಶನ ಮಾಡುತ್ತಿದ್ದಾರೆ.

ಗಣೇಶ್ ವರ್ಕೌಟ್ ಮಾಡುತ್ತಿರುವ ವಿಡಿಯೋ ಇಲ್ಲಿದೆ ನೋಡಿ

English summary
Watch Video: Golden Star Ganesh Workout For Next Movie Orange.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada