'ಜಾನಿ ಜಾನಿ ಎಸ್ ಪಪ್ಪಾ' ಬಗ್ಗೆ ಭವಿಷ್ಯ ನುಡಿದ ಗಡ್ಡಪ್ಪ
ದುನಿಯಾ ವಿಜಯ್ ಮತ್ತು ರಚಿತಾ ರಾಮ್ ಒಟ್ಟಿಗೆ ಅಭಿನಯಿಸುತ್ತಿರುವ 'ಜಾನಿ ಜಾನಿ ಎಸ್ ಪಪ್ಪಾ ಚಿತ್ರದ ಹೊಸ ಟೀಸರ್ ಬಿಡುಗಡೆಯಾಗಿದೆ. ವಿಜಿ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರದ ಮೊದಲ ಟೀಸರ್ ರಿಲೀಸ್ ಆಗಿತ್ತು. ಈಗ 2ನೇ ಟೀಸರ್ ಬಿಡುಗಡೆಯಾಗಿದೆ.
ಈ ಟೀಸರ್ ನ ವಿಶೇಷ ಏನಪ್ಪಾ ಅಂದ್ರೆ, ತಿಥಿ ಖ್ಯಾತಿಯ ಗಡ್ಡಪ್ಪ. ನಿರ್ದೇಶಕ ಪ್ರೀತಂ ಗುಬ್ಬಿ ಮತ್ತು ಗಡ್ಡಪ್ಪನ ನಡುವೆ ಸಂಭಾಷಣೆ ಈ ಟೀಸರ್ ನ ಹೈಲೈಟ್. ಚಿತ್ರದ ಹೀರೋ, ಹೀರೋಯಿನ್ ಬಗ್ಗೆ ಕೇಳುವ ಗಡ್ಡಪ್ಪ, ಈ ಸಿನಿಮಾಗೆ ಒಳ್ಳೆದಾಗುತ್ತೇ ಎಂದು ಭವಿಷ್ಯ ನುಡಿದಿದ್ದಾರೆ.
2011ರಲ್ಲಿ ತೆರೆಕಂಡಿದ್ದ 'ಜಾನಿ' ಮೇರಾ ನಾಮ್ ಪ್ರೀತಿ ಮೇರಾ ಕಾಮ್ ಚಿತ್ರದ ಮುಂದುವರೆದ ಭಾಗ ಜಾನಿ ಜಾನಿ ಎಸ್ ಪಪ್ಪಾ. ಮೊದಲ ಚಿತ್ರವನ್ನ ನಿರ್ದೇಶನ ಮಾಡಿದ್ದ ಪ್ರೀತಂ ಗುಬ್ಬಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಅಂದ್ಹಾಗೆ, ಈ ಚಿತ್ರವನ್ನ ಸ್ವತಃ ದುನಿಯಾ ವಿಜಯ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಆದಷ್ಟೂ ಬೇಗ ತೆರೆಗೆ ಬರುವ ಹಾದಿಯಲ್ಲಿದೆ.
English summary
Watch Teaser 2 from the Movie Jhonny Jhonny Yes Papa. Starring Duniya Vijay, Rachitha Ram, Rangayana Raghu.


Click it and Unblock the Notifications