For Quick Alerts
  ALLOW NOTIFICATIONS  
  For Daily Alerts

  ಪ್ರಧಾನಿ ಮೋದಿ ಅಮೃತ ಹಸ್ತದಲ್ಲಿ ರಿಲೀಸ್ ಆದ ಟ್ರೈಲರ್ ನೀವೂ ನೋಡಿ...

  By Suneetha
  |

  ರಾಷ್ಟ್ರಧ್ವಜ, ರಾಷ್ಟ್ರಪ್ರೇಮದ ಕುರಿತು ಸಂದೇಶ ಸಾರುವ '22 ಜುಲೈ 1947' ಎಂಬ ಕನ್ನಡ ಚಿತ್ರದ ಟ್ರೈಲರ್ ಲಾಂಚ್ ಮಾಡಿರುವ ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಚಿತ್ರತಂಡದ ವಿಭಿನ್ನ ಪ್ರಯತ್ನಕ್ಕೆ ಭೇಷ್ ಎಂದಿರುವ ವಿಚಾರವನ್ನು ನಾವೇ ನಿಮಗೆ ತಿಳಿಸಿದ್ವಿ.

  ಹುಬ್ಬಳ್ಳಿಯ ಸತ್ಯಪ್ಪ ಎಂಬ ವ್ಯಕ್ತಿಯೊಬ್ಬರ ನಿಜ ಜೀವನ ಕಥೆಯಾಧರಿತ ಈ ಚಿತ್ರ ಬೆಳಗಾಂ ಇಂಡಿಯನ್ ಎಕ್ಸ್ ಪ್ರೆಸ್ ಎಡಿಟರ್ ಸರಾಜೂ ಕಾಟ್ಕರ್ ಅವರ ಕಾದಂಬರಿಯನ್ನು ಆಧರಿಸಿದೆ.[ಸ್ಯಾಂಡಲ್ ವುಡ್ ಹೊಸ ಇತಿಹಾಸ: ಕನ್ನಡ ಟ್ರೈಲರ್ ಲಾಂಚ್ ಮಾಡಿದ ಪ್ರಧಾನಿ ಮೋದಿ]

  'ಇಂಗಳೆ ಮಾರ್ಗ' ಚಿತ್ರದ ಖ್ಯಾತಿಯ ನಿರ್ದೇಶಕ ವಿಶಾಲ್ ರಾಜ್ ಅವರು ಆಕ್ಷನ್-ಕಟ್ ಹೇಳಿರುವ '22 ಜುಲೈ 1947' ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ.

  ಸಂಪೂರ್ಣ ದೇಶ ಪ್ರೇಮವನ್ನು ಆಧರಿಸಿರುವ ಈ ಚಿತ್ರದ ಟ್ರೈಲರ್ ನೋಡುತ್ತಿದ್ದರೆ, ರೋಮಾಂಚನವಾಗುತ್ತಿದ್ದು, ದೇಶಪ್ರೇಮ ಉಕ್ಕಿ ಹರಿಯುತ್ತಿದೆ. ಈ ಚಿತ್ರದಲ್ಲಿ ಸತ್ಯಪ್ಪ ಅವರ ಪಾತ್ರವನ್ನು ನಟ ಸುಚೇಂದ್ರ ಪ್ರಸಾದ್ ಅವರು ಮಾಡಿದ್ದು, ನಟಿ ಸುಧಾರಾಣಿ ಅವರು ಸತ್ಯಪ್ಪನ ಹೆಂಡತಿ ಪಾತ್ರದಲ್ಲಿ ಮಿಂಚಿದ್ದಾರೆ.[ಪ್ರಧಾನಿ ಮೋದಿ ಜೊತೆಗೆ ರಿಕ್ಕಿ ಕೇಜ್ ದಂಪತಿ ಸೆಲ್ಫಿ ಚಿತ್ರ]

  Watch Kannada Movie '22 July 1947' official trailer

  'ಬೆಳಗಾಂನ ಡಿಸಿ ಕಛೇರಿಯಲ್ಲಿ ಸತ್ಯಪ್ಪ ಎನ್ನುವವರು ಬೆಳಗ್ಗೆ ಸೂರ್ಯೋದಯ ಆಗೋ ಮುಂಚೆ ಧ್ವಜ ಹಾರಿಸಿ, ಸಂಜೆ ಸೂರ್ಯಾಸ್ತ ಆಗೋ ಸಮಯದಲ್ಲಿ ಧ್ವಜ ಇಳಿಸ್ತಾ ಇದ್ರು'. ಆ ವ್ಯಕ್ತಿಯ ರಾಷ್ಟ್ರಪ್ರೇಮವನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ವಿಶೇಷ ಚಿತ್ರದ ಅದ್ಭುತ ಟ್ರೈಲರ್ ಇಲ್ಲಿದೆ ನೋಡಿ...

  '22 ಜುಲೈ 1947' ಎಂಬ ಅಪರೂಪದ ಚಿತ್ರಕ್ಕೆ ನಂಜೇಗೌಡ ಬಂಡವಾಳ ಹೂಡಿದ್ದು, ಇದೇ ಮೊದಲ ಬಾರಿಗೆ ಸಂಗೀತ ಕಟ್ಟಿ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಅಂದಹಾಗೆ ಈ ಸಿನಿಮಾ ಆಗಸ್ಟ್ 15, ಸ್ವಾತಂತ್ರ ದಿನಾಚರಣೆಯಂದೇ ತೆರೆಗೆ ಬಂದ್ರೆ ತುಂಬಾ ಚೆನ್ನಾಗಿರುತ್ತದೆ ಅನ್ನೋದು ನಮ್ಮ ಅಭಿಪ್ರಾಯ ನೀವೇನಂತೀರಾ?.

  English summary
  Watch Kannada Movie '22 July 1947' official trailer. Kannada Actor Suchendra Prasad, Actor Achuth Kumar, Actress Sudharani in the lead role. The movie is directed by Vishal Raj.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X