»   » 'ಬದ್ಮಾಶ್' ಟ್ರೈಲರ್ ನೋಡಿ...ಒಂದ್ ಗೇಮ್ ಆಡಿ.!

'ಬದ್ಮಾಶ್' ಟ್ರೈಲರ್ ನೋಡಿ...ಒಂದ್ ಗೇಮ್ ಆಡಿ.!

Posted By:
Subscribe to Filmibeat Kannada

'Director's Special' ಸಿನಿಮಾ ಮೂಲಕ ಎಂಟ್ರಿ ಕೊಟ್ಟು, ಗಾಂಧಿನಗರದಲ್ಲಿ ಭರವಸೆ ಮೂಡಿಸಿರುವ ನಾಯಕ ನಟ ಧನಂಜಯ್. 'ರಾಟೆ' ಹುಡುಗ ಧನಂಜಯ್ ಗಿಂದು ಹುಟ್ಟುಹಬ್ಬದ ಸಂಭ್ರಮ.

ಜನ್ಮದಿನದ ಪ್ರಯುಕ್ತ ಧನಂಜಯ್ ಅಭಿನಯದ ಹೊಚ್ಚ ಹೊಸ ಚಲನಚಿತ್ರ 'ಬದ್ಮಾಶ್' ಟ್ರೈಲರ್ ರಿಲೀಸ್ ಆಗಿದೆ. 'ಬದ್ಮಾಶ್' ಆಗಿ ಧನಂಜಯ್ ಹೇಗೆ ಮಿಂಚಿದ್ದಾರೆ ಅಂತ ನೀವೇ ನೋಡಿ....

ಖಾಕಿ ತೊಟ್ಟು ಖಡಕ್ ಪೊಲೀಸ್ ಆಫೀಸರ್ ಆಗಿ, ಕ್ರಿಕೆಟರ್ ಆಗಿ, ಶ್ರೀರಾಮನಾಗಿ ಮತ್ತು ಪಕ್ಕಾ ಟಪೋರಿ ಆಗಿ ತರಹೇವಾರಿ ಗೆಟಪ್ ಗಳಲ್ಲಿ ಧನಂಜಯ್ ಮಿಂಚಿದ್ದಾರೆ. [ಮಾತುಕತೆ ಮುಗಿಸಿದ 'ಬದ್ಮಾಶ್' ಹುಡುಗ ಧನಂಜಯ್]

badmaash

ಧನಂಜಯ್ ಜೊತೆ ಸಂಚಿತಾ ಶೆಟ್ಟಿ ಹೆಜ್ಜೆ ಹಾಕಿದ್ದಾರೆ. ಅಚ್ಯುತ್ ಕುಮಾರ್, ಜಹಾಂಗೀರ್, ಪ್ರಕಾಶ್ ಬೆಳವಾಡಿ, ಬಿ.ಸುರೇಶ್ ಸೇರಿದಂತೆ ದೊಡ್ಡ ತಾರಾಬಳಗ ಇರುವ ಈ ಚಿತ್ರಕ್ಕೆ ಆಕಾಶ್ ಶ್ರೀವತ್ಸ ಆಕ್ಷನ್ ಕಟ್ ಹೇಳಿದ್ದಾರೆ. [ಒಂದ್ಕಾಲದಲ್ಲಿ ಕೇಳೋರಿಲ್ಲದ ಈಕೆಗೆ, ಇಂದು ರತ್ನಗಂಬಳಿ..!]

'ಒಂದ್ ಗೇಮ್ ಆಡೋಣ' ಅಂತ ಹೇಳ್ತಾ ಖೇಡಿಗಳಿಗೆ ಬಿಸಿ ಮುಟ್ಟಿಸುವ ಧನಂಜಯ್ 'ಬದ್ಮಾಶ್' ಮೂಲಕ ಎಲ್ಲರಿಗೂ ಇಷ್ಟವಾಗುವುದರಲ್ಲಿ ಡೌಟೇ ಇಲ್ಲ. ಈಗಷ್ಟೇ ರಿಲೀಸ್ ಆಗಿರುವ 'ಬದ್ಮಾಶ್' ಟ್ರೈಲರ್ ನೋಡಿ, ಒಂದ್ ಗೇಮ್ ಅಡುವ ಬದಲು ಬರ್ತಡೆ ಬಾಯ್ ಧನಂಜಯ್ ಗೆ ವಿಶ್ ಮಾಡಿ.

English summary
Kannada Actor Dhananjay and Sanchitha Shetty starrer Kannada Movie 'Badmaash' trailer is out. Watch the video here.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada