For Quick Alerts
  ALLOW NOTIFICATIONS  
  For Daily Alerts

  ತುಂಡುಡುಗೆಯಲ್ಲಿ 'ಹಲೋ ಹಾಯ್' ಅಂತಿದ್ದಾರೆ ಹರಿಪ್ರಿಯಾ

  By Suneetha
  |

  ಸದಾ ಪಕ್ಕದ್ಮನೆ ಹುಡುಗಿ ಪಾತ್ರದಲ್ಲಿ ಮಿಂಚುತ್ತಿದ್ದ ನಟಿ ಹರಿಪ್ರಿಯಾ ಅವರು ಇದೀಗ ಐಟಂ ಸಾಂಗ್ ಗಳಲ್ಲಿ ಮಿಂಚಲು ಶುರು ಮಾಡಿದ್ದಾರೆ. ಅಲ್ಲದೇ ಇತ್ತೀಚೆಗೆ ಬಿಡುಗಡೆ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ರಕ್ಷಿತ್ ಶೆಟ್ಟಿ ಅವರ 'ರಿಕ್ಕಿ' ಸಿನಿಮಾದಲ್ಲೂ ಸಂಪ್ರದಾಯ ಪಾತ್ರದಲ್ಲಿ ಮಿಂಚಿ ಎಲ್ಲರ ಮನಗೆದ್ದಿದ್ದರು.

  ಇದೀಗ ಕಾಮಿಡಿ ಕಿಂಗ್ ಸಾಧು ಕೋಕಿಲಾ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ, ಸುಮಂತ್ ಶೈಲೇಂದ್ರ ಬಾಬು ಮತ್ತು 'ಮಾಸ್ಟರ್ ಪೀಸ್' ಬೆಡಗಿ ಶಾನ್ವಿ ಶ್ರೀವಾತ್ಸವ್ ಅವರು ಮಿಂಚಿರುವ 'ಭಲೇ ಜೋಡಿ' ಚಿತ್ರದ ಸೂಪರ್ ಐಟಂ ಸಾಂಗ್ 'ಹಲೋ ಹಲೋ ಹಾಯ್'ಗೆ ಸಕತ್ತಾಗಿ ಹೆಜ್ಜೆ ಹಾಕಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.. [ಸೆನ್ಸಾರ್ ಮಂಡಳಿ ವಿರುದ್ಧ ನಿರ್ಮಾಪಕ ಶೈಲೇಂದ್ರ ಬಾಬು ಗರಂ]

  ಬಂಗಾರದ ಬಣ್ಣದ ತುಂಡು ಡ್ರೆಸ್ಸ್ ನಲ್ಲಿ ಮುದ್ದಾಗಿ ಕಾಣಿಸಿಕೊಂಡಿರುವ ಹರಿಪ್ರಿಯಾ ಅವರು 'ಯುವ ಸಾಮ್ರಾಟ್' ಸುಮಂತ್ ಶೈಲೇಂದ್ರ ಅವರ ಜೊತೆ ಪಬ್ ಒಂದರಲ್ಲಿ ಪಡ್ಡೆ ಹುಡುಗರಿಗೆ ಕಿಚ್ಚು ಹಚ್ಚೋ ಹಾಗೆ ಸೊಂಟ ಬಳುಕಿಸಿದ್ದಾರೆ.

  ಸಾಧು ಮಹಾರಾಜ್ ಅವರ ಆಕ್ಷನ್-ಕಟ್ ನ ಚಿತ್ರಕ್ಕೆ ನಟ ಸುಮಂತ್ ಅವರ ತಂದೆ ಶೈಲೇಂದ್ರ ಬಾಬು ಅವರು ಬಂಡವಾಳ ಹೂಡಿದ್ದಾರೆ. ಸಂಗೀತ ನಿರ್ದೇಶನ ಕೂಡ ಸಾಧು ಅವರದೇ ಆಗಿದ್ದು, ಈಗಾಗಲೇ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಥಿಯೇಟರ್ ಸಮಸ್ಯೆಯಿಂದ ಬಿಡುಗಡೆ ತಡ ಆಗಿದೆ.['ಭಲೇ ಜೋಡಿ'ಯ ಜಬರ್ದಸ್ತ್ ಆಟ ನೋಡಲು ನೀವು ರೆಡಿಯಾಗಿ]

  ನಟ ಸುಮಂತ್ ಶೈಲೇಂದ್ರ, ನಟಿ ಶಾನ್ವಿ ಶ್ರೀವಾತ್ಸವ್ ಸೇರಿದಂತೆ ಚಿತ್ರದಲ್ಲಿ ನಟಿ ಹರ್ಷಿಕಾ ಪೂನಚ್ಚ, ಸಾಧು ಕೋಕಿಲಾ, ರವಿಶಂಕರ್, ಸುಮಲತಾ ಅಂಬರೀಶ್ ಮುಂತಾದವರು ಪ್ರಮುಖ ತಾರಾಗಣದಲ್ಲಿ ಮಿಂಚಿದ್ದಾರೆ.

  ಇದೇ ತಿಂಗಳು ಫೆಬ್ರವರಿ 19 ಕ್ಕೆ ಇಡೀ ಕರ್ನಾಟಕದಾದ್ಯಂತ ಈ ಸಿನಿಮಾ ಭರ್ಜರಿಯಾಗಿ ಬಿಡುಗಡೆ ಆಗಲಿದೆ. ಸದ್ಯಕ್ಕೆ ಬಿಡುಗಡೆ ಆಗಿರುವ ಚಿತ್ರದ ಸ್ಟೈಲಿಷ್ ಟ್ರೈಲರ್ ನೋಡಿ ಆನಂದಿಸಿ.(ಚಿತ್ರಕೃಪೆ: ಫೇಸ್ ಬುಕ್)

  English summary
  Watch Kannada Movie 'Bale Jodi' Theatrical Trailer. satrring Kannada Actor Sumanth Shailendra, Shanvi Srivastava and others. Music & Directed by Sadhu Kokila.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X