»   » ಧ್ರುವ ಸರ್ಜಾ ಜನ್ಮದಿನಕ್ಕೆ ಸಿಕ್ಕ 'ಭರ್ಜರಿ' ಉಡುಗೊರೆ ಇದು.!

ಧ್ರುವ ಸರ್ಜಾ ಜನ್ಮದಿನಕ್ಕೆ ಸಿಕ್ಕ 'ಭರ್ಜರಿ' ಉಡುಗೊರೆ ಇದು.!

Posted By:
Subscribe to Filmibeat Kannada

ಕಳೆದ ವಾರವಷ್ಟೇ ನಟ ಧ್ರುವ ಸರ್ಜಾ ಅನಾರೋಗ್ಯಕ್ಕೀಡಾಗಿದ್ದರು. ವೈರಲ್ ಫೀವರ್ ಬಂದ ಕಾರಣ, ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದು, ಒಂದು ವಾರ ಕಂಪ್ಲೀಟ್ ರೆಸ್ಟ್ ತೆಗೆದುಕೊಂಡ ಬಳಿಕ ಧ್ರುವ ಸರ್ಜಾ ಈಗ ಆರೋಗ್ಯವಾಗಿದ್ದಾರೆ.

ಕಂಪ್ಲೀಟ್ ಫಿಟ್ ಅಂಡ್ ಫೈನ್ ಆಗಿರುವ ನಟ ಧ್ರುವ ಸರ್ಜಾ ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳೆಲ್ಲಾ ಸೇರಿ 'ಆಕ್ಷನ್ ಪ್ರಿನ್ಸ್' ಜನ್ಮದಿನವನ್ನ ಅದ್ಧೂರಿ ಆಗಿ ಆಚರಿಸುತ್ತಿದ್ದಾರೆ. ಹೀಗಾಗಿ, ಇಂದು ಧ್ರುವ ಸರ್ಜಾ ಮನೆಯಲ್ಲಿ ಅಕ್ಷರಶಃ ಹಬ್ಬದ ವಾತಾವರಣ. [ಕಟ್ಟುಮಸ್ತಾಗಿದ್ದ ನಟ ಧ್ರುವ ಸರ್ಜಾ ಆರೋಗ್ಯಕ್ಕೆ ಇದ್ದಕ್ಕಿದ್ದಂತೆ ಏನಾಯ್ತು?]


ಜನ್ಮದಿನದ ಸಡಗರಕ್ಕೆ ಇನ್ನಷ್ಟು ಮೆರಗು ನೀಡಲು ಧ್ರುವ ಸರ್ಜಾ ನಟಿಸಿರುವ 'ಭರ್ಜರಿ' ಚಿತ್ರದ ಟೀಸರ್ ಬಿಡುಗಡೆ ಮಾಡಿದೆ ಚಿತ್ರತಂಡ. ಮುಂದೆ ಓದಿ...


'ಭರ್ಜರಿ'ಯಾಗಿದೆ ಟೀಸರ್

ಹೇಳಿ ಕೇಳಿ ಧ್ರುವ ಸರ್ಜಾ 'ಆಕ್ಷನ್ ಪ್ರಿನ್ಸ್'. ಅಂದ್ಮೇಲೆ, ಧ್ರುವ ಸರ್ಜಾ ಆಕ್ಷನ್ 'ಭರ್ಜರಿ' ಆಗಿ ಇರಲೇಬೇಕು. 'ಭರ್ಜರಿ' ಚಿತ್ರದಲ್ಲೂ ಧ್ರುವ ಸರ್ಜಾ ಸ್ಟಂಟ್ಸ್ ಸೂಪರ್ ಆಗಿ ಮಾಡಿದ್ದಾರೆ ಎಂಬುದಕ್ಕೆ ಇಂದು ಬಿಡುಗಡೆ ಆಗಿರುವ ಚಿತ್ರದ ಟೀಸರ್ ಸಾಕ್ಷಿ. [ಇಬ್ಬಿಬ್ಬರು 'ಡೈಲಾಗ್ ಕಿಂಗ್' ಮಧ್ಯೆ ಸುಂದರ ಸುಧಾರಾಣಿಗೆ ಏನು ಕೆಲಸ.?]


ಖಡಕ್ ಡೈಲಾಗ್

'ಭರ್ಜರಿ' ಚಿತ್ರದ ಡೈಲಾಗ್ ಗಳೂ ಕೂಡ 'ಭರ್ಜರಿ' ಆಗಿವೆ ಎಂಬುದಕ್ಕೆ ಸದ್ಯಕ್ಕೆ ಸಿಕ್ಕಿರುವ ಸ್ಯಾಂಪಲ್ ಇದು - ''ಚಿರತೆ ಬಂದ್ರೆ ವೇಗ ಇರುತ್ತೆ...ಹುಲಿ ಬಂದ್ರೆ ಗಾಂಭೀರ್ಯ ಇರುತ್ತೆ...ಸಿಂಹ ಬಂದ್ರೆ ಘರ್ಜನೆ ಇರುತ್ತೆ...ಈ ಸೂರ್ಯ ಬಂದ್ರೆ ಈ ಮೂರೂ ಇರುತ್ತೆ...'' [ಧ್ರುವ ಸರ್ಜಾರನ್ನು ಡೈಲಾಗ್ ಕಿಂಗ್ ಮಾಡ್ತಿದ್ದಾರೆ ಚೇತನ್]


ರಚಿತಾ ರಾಮ್ ಮಿಸ್ಸಿಂಗ್.!

ಧ್ರುವ ಸರ್ಜಾ ಹುಟ್ಟುಹಬ್ಬಕ್ಕಂತೆ ಸ್ಪೆಷಲ್ ಆಗಿ ಈ ಟೀಸರ್ ಬಿಡುಗಡೆ ಮಾಡಿರುವುದರಿಂದ ನಾಯಕಿ ರಚಿತಾ ರಾಮ್ ಮಿಸ್ ಆಗಿದ್ದಾರೆ ಅಷ್ಟೆ.


ಚಿತ್ರೀಕರಣ ಇನ್ನೂ ನಡೆಯುತ್ತಿದೆ.!

ಲೇಟ್ ಆಗಿ ಬಂದರೂ ಲೇಟೆಸ್ಟ್ ಆಗಿ ಬರುವ ಧ್ರುವ ಸರ್ಜಾ ರವರ 'ಭರ್ಜರಿ' ಚಿತ್ರದ ಶೂಟಿಂಗ್ ಇನ್ನೂ ನಡೆಯುತ್ತಿದೆ. ಈ ವರ್ಷಾಂತ್ಯಕ್ಕೆ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ.


ಟೀಸರ್ ನೋಡಿ....

'ಧ್ರುವ ಸರ್ಜಾ' ಬರ್ತ್ ಡೇ ಗೆ ಶುಭ ಕೋರುತ್ತಾ, 'ಭರ್ಜರಿ' ಚಿತ್ರದ ಟೀಸರ್ ನ ನೋಡ್ಕೊಂಡ್ ಬನ್ನಿ...ಲಿಂಕ್ ಇಲ್ಲಿದೆ.


English summary
Kannada Actor Dhruva Sarja is celebrating his birthday today (October 6th). On this occasion, 'Bharjari' teaser is out. Watch Action-packed 'Bharjari' teaser here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada