For Quick Alerts
  ALLOW NOTIFICATIONS  
  For Daily Alerts

  ಟ್ರೈಲರ್: ಡೈರೆಕ್ಟರ್ ಸ್ಪೆಷಲ್ ಹುಡುಗನಿಗೆ 'ಬಾಕ್ಸರ್' ಆಗೋ ಕನಸು!

  By Suneetha
  |

  ಡೈರೆಕ್ಟರ್ ಸ್ಪೆಷಲ್ ಹುಡುಗ ಧನಂಜಯ್ ಅವರ ಅಭಿನಯದ ಬಹುನಿರೀಕ್ಷಿತ 'ಬಾಕ್ಸರ್' ಚಿತ್ರದ ಜಬರ್ದಸ್ತ್ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ನಟ ಧನಂಜಯ್ ಅವರು ಸಖತ್ ರಫ್ ಅಂಡ್ ಟಫ್ ಆಗಿ ಕಾಣಿಸಿಕೊಂಡಿದ್ದಾರೆ.

  ನವೆಂಬರ್ 20 ರಂದು ಮುಖ್ಯ ಚಿತ್ರಮಂದಿರ ಸಂತೋಷ್ ಥಿಯೇಟರ್ ನಲ್ಲಿ ಈ ಚಿತ್ರ ಬಿಡುಗಡೆಯಾಗಲಿದ್ದು, ಚಿತ್ರದಲ್ಲಿ ನಾಯಕಿ ನಟಿಯಾಗಿ ಕೃತಿಕಾ ಜಯಕುಮಾರ್ ಮಿಂಚಿದ್ದಾರೆ.

  ನಿರ್ದೇಶಕ ಪ್ರೀತಂ ಗುಬ್ಬಿ ಆಕ್ಷನ್-ಕಟ್ ಹೇಳಿರುವ 'ಬಾಕ್ಸರ್' ಚಿತ್ರದ ಬಗ್ಗೆ ಗಾಂಧಿನಗರದ ಮಂದಿ ಭಾರಿ ಕುತೂಹಲ ಇಟ್ಟುಕೊಂಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು ಎಲ್ಲೆಡೆ ಒಳ್ಳೆ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ.[ಡೈರೆಕ್ಟರ್ ಸ್ಪೆಷಲ್ ಹುಡುಗ 'ಬಾಕ್ಸರ್' ಹೇಗಾದ? ವಿಡಿಯೋ ನೋಡಿ!]

  ಜಯಣ್ಣ ಕಂಬೈನ್ಸ್ ಅಡಿಯಲ್ಲಿ ಮೂಡಿಬಂದಿರುವ 'ಬಾಕ್ಸರ್' ಚಿತ್ರದ ಟ್ರೈಲರ್ ಸಖತ್ ಆಗಿದ್ದು, ಧನಂಜಯ್ ಅವರಿಗೆ ಬ್ರೇಕ್ ನೀಡುವಲ್ಲಿ ಯಶಸ್ವಿಯಾಗಬಹುದೇ ಅನ್ನೋದು ಚಿತ್ರಬಿಡುಗಡೆಯಾದ ಮೇಲೆ ತಿಳಿಯಲಿದೆ.

  ರೊಮ್ಯಾಂಟಿಕ್ ಕಮ್ ಆಕ್ಷನ್- ಡ್ರಾಮಾ ಕಥೆಯನ್ನಾಧರಿಸಿದ 'ಬಾಕ್ಸರ್' ಪ್ರೇಕ್ಷಕರನ್ನು ಮೆಚ್ಚಿಸಬಹುದು ಅನ್ನೋದು ಈ ಟ್ರೈಲರ್ ನಲ್ಲಿ ತಿಳಿದು ಬರುತ್ತದೆ.['ಬಾಕ್ಸರ್' ಆದ ಧನಂಜಯ್ ಜಬರ್ದಸ್ತ್ ಸ್ಟಂಟ್ಸ್]

  ಸಖತ್ ಫೈಟ್, ಪ್ರೀತಿ-ರೊಮ್ಯಾಂಟಿಕ್ ಎಲ್ಲವೂ ಮಿಳಿತವಾಗಿರುವ ಪ್ರೀತಂ ಗುಬ್ಬಿ ಅವರ ಕಿಕ್ 'ಬಾಕ್ಸರ್' ಚಿತ್ರದ ಟ್ರೈಲರ್ ನ ಸಣ್ಣ ಝಲಕ್ ಇಲ್ಲಿದೆ ನೋಡಿ..

  ವಿದೇಶದಲ್ಲಿ ಹಾಡುಗಳ ಚಿತ್ರೀಕರಣ ನಡೆದಿದ್ದು. ಅದರಲ್ಲೂ 'ತುಂಟ ತಾಟಕಿಯೇ, ಒಂಟಿ ಶೂರ್ಪನಕಿಯೇ' ಹಾಡು ಈಗಾಗಲೇ ಯುವ ಪ್ರೇಮಿಗಳ ಫೇವರೆಟ್ ಆಗಿದೆ. ಧನಂಜಯ್ ಅವರ ಖಡಕ್ ಡೈಲಾಗ್ ಈ ಟ್ರೈಲರ್ ನ ಹೈಲೈಟ್.

  ಒಟ್ನಲ್ಲಿ 'ರಾಟೆ' ಚಿತ್ರದ ನಂತರ ಮತ್ತೊಮ್ಮೆ ತಮ್ಮ ಮುಗ್ದ ಅಭಿನಯದಿಂದ ಪ್ರೇಕ್ಷಕರ ಮನಗೆಲ್ಲಲು ಡೈರೆಕ್ಟರ್ ಸ್ಪೆಷಲ್ ಹುಡುಗ ನವೆಂಬರ್ 20 ರಂದು ಭರ್ಜರಿ ಎಂಟ್ರಿ ಕೊಡುತ್ತಿದ್ದಾರೆ. ಅಲ್ಲಿಯವರೆಗೆ ಚಿತ್ರದ ಟ್ರೈಲರ್ ನೋಡಿ..

  English summary
  Watch Kannada movie 'Boxer' trailer. Featuring Actor Dhananjaya K.A, Actress Kruthika Jayakumar. Music composer V Harikrishna has scored music for the movie. The movie is directed by Preetham Gubbi. The movie is all set to release on November 20th.
  Friday, November 13, 2015, 12:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X