»   » 'ಚಕ್ರವ್ಯೂಹ' ಚಿತ್ರದ 'ಗೆಳೆಯಾ ಗೆಳೆಯಾ' ಹಾಡು ನೋಡಿದ್ರಾ?

'ಚಕ್ರವ್ಯೂಹ' ಚಿತ್ರದ 'ಗೆಳೆಯಾ ಗೆಳೆಯಾ' ಹಾಡು ನೋಡಿದ್ರಾ?

Posted By:
Subscribe to Filmibeat Kannada

ಬಹುನಿರೀಕ್ಷೆ ಹುಟ್ಟಿಸಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಚಕ್ರವ್ಯೂಹ' ಚಿತ್ರದ ಟಾಲಿವುಡ್ ಯಂಗ್ ಟೈಗರ್ ಜ್ಯೂನಿಯರ್ ಎನ್.ಟಿ.ಆರ್ ಹಾಡಿರುವ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ 'ಗೆಳೆಯಾ ಗೆಳೆಯಾ' ಹಾಡು ಬಿಡುಗಡೆ ಆಗಿದೆ.

ಸಂಗೀತ ನಿರ್ದೇಶಕ ಎಸ್.ಎಸ್ ತಮನ್ ಮ್ಯೂಸಿಕ್ ಕಂಪೋಸ್ ಮಾಡಿರುವ 'ಗೆಳೆಯಾ ಗೆಳೆಯಾ' ಹಾಡು ಎಲ್ಲರ ಮೆಚ್ಚುಗೆ ಗಳಿಸುತ್ತಿದೆ. ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರು 'ಗೆಳೆಯಾ ಗೆಳೆಯಾ' ಹಾಡಿನ ಮೂಲಕ ತೆರೆಯ ಮೇಲೆ ಎಂಟ್ರಿ ಪಡೆದುಕೊಳ್ಳಲಿದ್ದಾರೆ.[ಬಿಡುಗಡೆಗೆ ಮುನ್ನವೇ ಸದ್ದು ಮಾಡುತ್ತಿರುವ ಪವರ್ ಸ್ಟಾರ್ 'ಚಕ್ರವ್ಯೂಹ']


Watch Kannada Movie 'Chakravyuha', 'Geleya Geleya' song

ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್ ಅವರು ಹಾಡಿರುವ 'ಗೆಳೆಯಾ ಗೆಳೆಯಾ' ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬಹಳ ಮೆಚ್ಚಿಕೊಂಡಿದ್ದು, ಜ್ಯೂನಿಯರ್ ಎನ್.ಟಿ.ಆರ್ ಸಮೇತ ತುಂಬಾ ಇಷ್ಟಪಟ್ಟಿದ್ದಾರಂತೆ.[ಪವರ್ ಸ್ಟಾರ್-ಡಿಂಪಲ್ ಕ್ವೀನ್ ರಚಿತಾದು ಕ್ಯೂಟ್ ಜೋಡಿ ಅಲ್ವಾ]


ಮಾರ್ಚ್ 12 ರಂದು 'ಚಕ್ರವ್ಯೂಹ' ಚಿತ್ರದ ಆಡಿಯೊ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಅದಕ್ಕಿಂತ ಮುಂಚೆ 'ಗೆಳೆಯಾ ಗೆಳೆಯಾ' ಹಾಡನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದಾರೆ.


Watch Kannada Movie 'Chakravyuha', 'Geleya Geleya' song

ಬಿಡುಗಡೆ ಆದ ಕೆಲವೇ ಕ್ಷಣಗಳಲ್ಲಿ ಹಲವಾರು ವೀಕ್ಷಕರನ್ನು ಸಂಪಾದಿಸಿದ 'ಗೆಳೆಯಾ ಗೆಳೆಯಾ' ಹಾಡು ಈ ವರ್ಷದ ಬ್ಲಾಕ್ ಬಸ್ಟರ್ ಹಿಟ್ ಸಾಂಗ್ ಆಗಿ ಹೊರಹೊಮ್ಮಿದೆ.


Watch Kannada Movie 'Chakravyuha', 'Geleya Geleya' song

ಡಿಂಪಲ್ ಕ್ವೀನ್ ರಚಿತಾ ರಾಮ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ತಮಿಳು ನಟ ಅರುಣ್ ವಿಜಯ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಮಿಂಚಿರುವ 'ಚಕ್ರವ್ಯೂಹ' ಚಿತ್ರದ ಸೂಪರ್ ಹಿಟ್ ಹಾಡು 'ಗೆಳೆಯಾ ಗೆಳೆಯಾ' ಹಾಡು ನೋಡ್ಕೊಂಡು ಎಂಜಾಯ್ ಮಾಡಿ.

English summary
Watch Geleya Geleya Full Lyrical Video Song from Chakravyuha sung by Jr.Ntr, starring Puneeth Rajkumar, Rachita Ram and others. Music Composed by S.S.THaman. Directed by M.Saravanan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada