»   » ಪವರ್ ಸ್ಟಾರ್ 'ಚಕ್ರವ್ಯೂಹ'ದ ಪವರ್ ಫುಲ್ ಮೋಷನ್ ಪೋಸ್ಟರ್ ರಿಲೀಸ್

ಪವರ್ ಸ್ಟಾರ್ 'ಚಕ್ರವ್ಯೂಹ'ದ ಪವರ್ ಫುಲ್ ಮೋಷನ್ ಪೋಸ್ಟರ್ ರಿಲೀಸ್

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ 'ಚಕ್ರವ್ಯೂಹ' ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರದ ಬಗ್ಗೆ ಭಾರಿ ಕುತೂಹಲ ಮೂಡಿಸಿದ್ದ ಚಿತ್ರತಂಡ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳ ಕುತೂಹಲಕ್ಕೆ ಸ್ವಲ್ಪ ಬ್ರೇಕ್ ಹಾಕಿದ್ದರು.

ಇದೀಗ 'ಚಕ್ರವ್ಯೂಹ'ದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದು, ಪೋಸ್ಟರ್ ನಲ್ಲಿ ಪುನೀತ್ ರಾಜ್ ಕುಮಾರ್ ಅವರ ಲುಕ್ ಸಖತ್ ಖಡಕ್ ಆಗಿ ಮೂಡಿಬಂದಿದೆ.[ಅಪ್ಪುಗೆ, 'ಚಕ್ರವ್ಯೂಹ' 25ನೇ ಚಿತ್ರನಾ, ಅಥವಾ 'ದೊಡ್ಮನೆ ಹುಡುಗ'ನಾ?]

Watch Kannada Movie 'Chakravyuha' Motion Poster

ಸಂಗೀತ ನಿರ್ದೇಶಕ ತಮನ್ ಅವರ ಹುಟ್ಟುಹಬ್ಬದ ಸ್ಪೆಷಲ್ ಅಂತ 'ಚಕ್ರವ್ಯೂಹ' ಚಿತ್ರತಂಡ ಈ ಮೋಷನ್ ಪೋಸ್ಟರ್ ರಿಲೀಸ್ ಮಾಡಿದೆ.

ಇನ್ನು ಚಿತ್ರದ ಶೇ.90 ರಷ್ಟು ಭಾಗದ ಚಿತ್ರೀಕರಣ ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ಚಿತ್ರ ತೆರೆ ಕಾಣಲಿದೆ. ಎನ್.ಕೆ ಲೋಹಿತ್ ಅರ್ಪಿಸುವ 'ಚಕ್ರವ್ಯೂಹ' ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ಇಲ್ಲಿದೆ ನೋಡಿ.[ಪವರ್ ಸ್ಟಾರ್ 'ಚಕ್ರವ್ಯೂಹ'ದ ಜಬರ್ದಸ್ತ್ ಫಸ್ಟ್ ಲುಕ್ ಪೋಸ್ಟರ್ ಔಟ್]

Watch Kannada Movie 'Chakravyuha' Motion Poster

ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಂದಿಗೆ ಇದೇ ಮೊದಲ ಬಾರಿಗೆ ನಾಯಕಿ ನಟಿಯಾಗಿ 'ಬುಲ್ ಬುಲ್' ಬೆಡಗಿ ರಚಿತಾ ರಾಮ್ ಕಾಣಿಸಿಕೊಂಡಿದ್ದು, ತಮಿಳು ನಿರ್ದೇಶಕ ಎಮ್. ಸರವಣನ್ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ

ತಮಿಳು ನಟ ಅರುಣ್ ವಿಜಯ್ ಹಾಗು ಬಹುಭಾಷಾ ನಟ ಅಭಿಮನ್ಯು ಸಿಂಗ್ ಅವರು 'ಚಕ್ರವ್ಯೂಹ' ದಲ್ಲಿ ಪವರ್ ಸ್ಟಾರ್ ಗೆ ವಿಲನ್ ಗಳಾಗಿ ಕಾಡಲಿದ್ದಾರೆ. ಅದೇನೇ ಇರಲಿ ಪುನೀತ್ ಅವರ 'ದೊಡ್ಮನೆ ಹುಡುಗ' ಹಾಗು 'ಚಕ್ರವ್ಯೂಹ' ಎರಡು ಚಿತ್ರಗಳು ಗಾಂಧಿನಗರದ ಮಂದಿಗೆ ಭಾರಿ ಕುತೂಹಲ ಮೂಡಿಸಿದ್ದು, ಮೊದಲು ಯಾವ ಸಿನಿಮಾ ರಿಲೀಸ್ ಆಗಲಿದೆ ಎಂದು ಕಾದು ನೋಡಬೇಕಿದೆ.

English summary
Watch Puneeth Rajkumar's 'Chakravyuha' Motion Poster. The movie is directed by M. Saravanan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada