»   » 'ಚಕ್ರವ್ಯೂಹ' ಟ್ರೈಲರ್ ನಲ್ಲಿರುವ 10 ಕುತೂಹಲಕಾರಿ ಅಂಶಗಳು

'ಚಕ್ರವ್ಯೂಹ' ಟ್ರೈಲರ್ ನಲ್ಲಿರುವ 10 ಕುತೂಹಲಕಾರಿ ಅಂಶಗಳು

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳ ಕಾಯುವಿಕೆಗೆ ಇದೀಗ ಫುಲ್ ಸ್ಟಾಪ್ ಬಿದ್ದಿದೆ. ನಿನ್ನೆ ತಾನೆ ಪುನೀತ್ ಅವರು ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡು ಅಭಿಮಾನಿಗಳಿಗೂ ಭರ್ಜರಿ ಗಿಫ್ಟ್ ನೀಡಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರ ಈ ವರ್ಷದ ಬಹುನಿರೀಕ್ಷಿತ 24ನೇ ಸಿನಿಮಾ 'ಚಕ್ರವ್ಯೂಹ'ದ ಟ್ರೈಲರ್ ಮತ್ತು ಆಡಿಯೋ ಬಿಡುಗಡೆ ಸಮಾರಂಭ ನಿನ್ನೆ (ಮಾರ್ಚ್ 17) ಅರಮನೆ ರಸ್ತೆಯಲ್ಲಿರುವ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಅದ್ದೂರಿಯಾಗಿ ನೆರವೇರಿದೆ.[ಪುನೀತ್ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಕಾದಿದೆ ಬಿಗ್ ಸರ್ ಪ್ರೈಸ್]


'ಚಕ್ರವ್ಯೂಹ' ಟ್ರೈಲರ್ ಬಿಡುಗಡೆ ಆಗಿ ಇವತ್ತಿಗೆ ಸುಮಾರು 28 ಸಾವಿರ ಜನ ವೀಕ್ಷಿಸಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಚಿತ್ರದ ಟ್ರೈಲರ್ ಎಲ್ಲೆಡೆ ಸಾಕಷ್ಟು ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ.[41ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಪವರ್ ಸ್ಟಾರ್ ಪುನೀತ್]


ಸುಮಾರು 2 ನಿಮಿಷಗಳಿರುವ 'ಚಕ್ರವ್ಯೂಹ' ಚಿತ್ರದ ಟ್ರೈಲರ್ ನಲ್ಲಿ ಅಷ್ಟಕ್ಕೂ ಅಂತಹ ವಿಶೇಷತೆ ಏನಿದೆ? ಅನ್ನೋದನ್ನ ನಾವು ನಿಮಗೆ ಹೇಳ್ತೀವಿ ನೋಡೋಕೆ ಸ್ಲೈಡ್ಸ್ ಕ್ಲಿಕ್ ಮಾಡಿ...


ಪವರ್ ಸ್ಟಾರ್ ಪರ್ಫೆಕ್ಟ್ ಆಕ್ಷನ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತುಂಬಾ ದಿನಗಳ ನಂತರ ಪರ್ಫೆಕ್ಟ್ ಆಕ್ಷನ್ ಜೊತೆ 'ಚಕ್ರವ್ಯೂಹ'ದ ಮೂಲಕ ಮತ್ತೆ ಗಾಂಧಿನಗರಕ್ಕೆ ವಾಪಸಾಗಿದ್ದಾರೆ.[ಪುನೀತ್ ಡ್ಯುಯೆಟ್ ಗೆ ಕಾಜಲ್ ಅಗರ್ ವಾಲ್ ಚಮಕ್]


ಜಬರ್ದಸ್ತ್ ಡೈಲಾಗ್

ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರ ಪವರ್ ಫುಲ್ ಡೈಲಾಗ್ ಗಳು ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ. 'ಒಬ್ಬ ಪಬ್ಲಿಕ್ ಗೆ ಸಮಸ್ಯೆ ಆದ್ರೆ ಇನ್ನೊಬ್ಬ ಪಬ್ಲಿಕ್ ಬರ್ತಾನೆ ಅಂತ ನಿಮ್ಮಂತವರಿಗೆ ಚೆನ್ನಾಗಿ ಗೊತ್ತಾಗಬೇಕು' ಅನ್ನೋ ಡೈಲಾಗ್ ಗಳು ಚಿತ್ರದಲ್ಲಿದ್ದು, ಪವರ್ ಸ್ಟಾರ್ ಡೈಲಾಗ್ ಡೆಲಿವರಿ ಕೂಡ ಪ್ರೇಕ್ಷಕರಿಗೆ ರೋಮಾಂಚನ ಉಂಟು ಮಾಡೋದು ಖಂಡಿತ.[ಅಪ್ಪು ಹುಟ್ಟುಹಬ್ಬಕ್ಕೆ ಇದಕ್ಕಿಂತ ಉಡುಗೊರೆ ಬೇಕಾ?]


ಪಬ್ಲಿಕ್ ಗೆ ಪ್ರಾಧಾನ್ಯತೆ

ಯಾವಾಗಲೂ ಪೊಲೀಸ್ ಆಫೀಸರ್, ಕೆಲವೊಮ್ಮೆ ಲವರ್ ಬಾಯ್ ಹೀಗೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಈ ಬಾರಿ ಕೊಂಚ ಡಿಫರೆಂಟ್ ಆಗಿ 'ಚಕ್ರವ್ಯೂಹ' ಚಿತ್ರದಲ್ಲಿ ಪಬ್ಲಿಕ್ ಸಮಸ್ಯೆಗೆ ಓಗೊಟ್ಟಿದ್ದಾರೆ.[ಚಿತ್ರಗಳು ; ಕಿಚ್ಚ ಸುದೀಪ್ - ಪುನೀತ್ ಒಂದಾಗೇಬಿಟ್ಟರು ನೋಡಿ.!]


ರಚಿತಾ ರಾಮ್

ಇದೇ ಮೊದಲ ಬಾರಿಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆ ಡ್ಯುಯೆಟ್ ಹಾಡಿದ್ದು, ಈ ಚಿತ್ರದಲ್ಲಿ ಪುನೀತ್ ಅವರ ಹಿಂದೆ ಲವ್ ಲವ್ ಅಂತ ಸುತ್ತಾಡೋ ಪಾತ್ರ ವಹಿಸಿದ್ದಾರೆ.


ತಮಿಳು ನಿರ್ದೇಶಕ ಆಕ್ಷನ್-ಕಟ್

ತಮಿಳು 'ಎಂಗೇಯುಮ್ ಎಪ್ಪೋದುಮು' ಚಿತ್ರವನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ಎಮ್.ಸರವಣನ್ ಅವರು ಇದೇ ಮೊದಲ ಬಾರಿಗೆ ಕನ್ನಡ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದು, ಅಭಿಮಾನಿಗಳಿಗೆ ಕೊಂಚ 'ಚಕ್ರವ್ಯೂಹ' ಚಿತ್ರದ ಬಗ್ಗೆ ಕುತೂಹಲ ಜಾಸ್ತಿ ಇದೆ.


ನಿರ್ಮಾಪಕ ಎನ್.ಕೆ ಲೋಹಿತ್

ತೆಲುಗು-ತಮಿಳು ನಿರ್ಮಾಪಕ ಎನ್.ಕೆ ಲೋಹಿತ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುವ ಜೊತೆಗೆ ದಕ್ಷಿಣ ಭಾರತದ ಖ್ಯಾತ ನಟ ಜ್ಯೂನಿಯರ್ ಎನ್ ಟಿ ಆರ್ ಹಾಗೂ ನಟಿ ಕಾಜಲ್ ಅಗರ್ ವಾಲ್ ಅವರಿಂದ ಚಿತ್ರದ ಹಾಡುಗಳಿಗೆ ಧ್ವನಿ ಕೊಡಿಸಿದ್ದಾರೆ.


ಖಳ ನಟನಾಗಿ ಅರುಣ್ ವಿಜಯ್

'ಎನ್ನೈ ಅರಿಂದಾಲ್' ಚಿತ್ರದ ಖ್ಯಾತಿಯ ತಮಿಳು ನಟ ಅರುಣ್ ವಿಜಯ್ ಅವರು ಖಳ ನಟನಾಗಿ ಮಿಂಚಿದ್ದು, ಸಖತ್ತಾಗಿರೋ ಅಭಿನಯ ನೀಡಿದ್ದಾರೆ.


ಟ್ರೈಲರ್ ಸೂಪರ್

ಒಟ್ನಲ್ಲಿ ಅಭಿಮಾನಿಗಳು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಟ್ರೈಲರ್ ಮೂಡಿಬಂದಿದ್ದು ಅದ್ಭುತವಾಗಿದೆ. ಅಂತೂ ಅಭಿಮಾನಿಗಳ ನಿರೀಕ್ಷೆಯನ್ನು 'ಚಕ್ರವ್ಯೂಹ' ಚಿತ್ರತಂಡ ಹುಸಿ ಮಾಡಲಿಲ್ಲ.


ಸಖತ್ ರೆಸ್ಪಾನ್ಸ್

ಸುಮಾರು 2 ನಿಮಿಷ ಇರುವ ಚಿತ್ರದ ಟ್ರೈಲರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು 28 ಸಾವಿರ ಜನರ ವೀಕ್ಷಣೆಗೆ ಒಳಪಟ್ಟಿದೆ.


ಟ್ರೈಲರ್ ನೋಡಿ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಡಿಂಪಲ್ ಕ್ವೀನ್ ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ಮಿಂಚಿರುವ 'ಚಕ್ರವ್ಯೂಹ' ಚಿತ್ರದ ಟ್ರೈಲರ್ ಇಲ್ಲಿದೆ ನೋಡಿ...[ಟ್ರೈಲರ್ ನೋಡಿ]


English summary
Watch Chakravyuha Official Trailer, starring Puneeth Rajkumar, Rachita Ram and others. Music Composed by S.S.THaman. Directed by M.Saravanan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada