ಪುನೀತ್ ಡ್ಯುಯೆಟ್ ಗೆ ಕಾಜಲ್ ಅಗರ್ ವಾಲ್ ಚಮಕ್

By Suneetha

ದಿನದಿಂದ ದಿನಕ್ಕೆ ಬಿಗ್ ಬಜೆಟ್ ನ 'ಚಕ್ರವ್ಯೂಹ' ಸಿನಿಮಾ ಪವರ್ ಸ್ಟಾರ್ ಪುನೀತ್ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದ್ದು, ಈಗಾಗಲೇ ಬಿಡುಗಡೆ ಆಗಿರುವ ಚಿತ್ರದ ಒಂದು ಹಾಡು ಮಾರ್ಕೆಟ್ ನಲ್ಲಿ ಸೂಪರ್ ಹಿಟ್ ಆಗಿರೋ ವಿಚಾರ ನಿಮಗೆ ತಿಳಿದೇ ಇದೆ.

ತೆಲುಗು ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್ ಹಾಡಿದ್ದ 'ಗೆಳೆಯಾ ಗೆಳೆಯಾ' ಹಾಡು ಸಂಗೀತ ಲೋಕದಲ್ಲಿ ಒಂದು ಟ್ರೆಂಡ್ ಹುಟ್ಟುಹಾಕಿ ಸುದ್ದಿಯಾದ ಬೆನ್ನಲ್ಲೇ ಇದೀಗ ಅದೇ ಚಿತ್ರದ ಮತ್ತೊಂದು ಹಾಡು ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ.['ಚಕ್ರವ್ಯೂಹ' ಚಿತ್ರದ 'ಗೆಳೆಯಾ ಗೆಳೆಯಾ' ಹಾಡು ನೋಡಿದ್ರಾ?]

Watch Kannada Movie 'Chakravyuha', 'Yenaithu' Song

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಕಾಣಿಸಿಕೊಂಡಿರುವ 'ಚಕ್ರವ್ಯೂಹ' ಚಿತ್ರದ ಮತ್ತೊಂದು ರೋಮ್ಯಾಂಟಿಕ್ ಸಾಂಗ್ ಬಿಡುಗಡೆ ಆಗಿದ್ದು, ಯೂಟ್ಯೂಬ್ ನಲ್ಲಿ ಸಖತ್ ಹವಾ ಸೃಷ್ಟಿಸುತ್ತಿದೆ. ಚಿತ್ರದ ಸುಂದರ ಹಾಡುಗಳಿಗೆ ಸಂಗೀತ ನಿರ್ದೇಶಕ ಎಸ್.ಎಸ್ ತಮನ್ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.[ಚಿತ್ರಗಳು ; ಕಿಚ್ಚ ಸುದೀಪ್ - ಪುನೀತ್ ಒಂದಾಗೇಬಿಟ್ಟರು ನೋಡಿ.!]

ಹೌದು ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ ವಾಲಾ ಅವರು ಇದೇ ಮೊದಲ ಬಾರಿಗೆ ಹಾಡೊಂದಕ್ಕೆ ತಮ್ಮ ವಾಯ್ಸ್ ಕೊಟ್ಟಿದ್ದು, 'ಅರೆ ಅರೇ ಏನಾಯಿತು' ಎಂಬ ರೋಮ್ಯಾಂಟಿಕ್ ಡ್ಯುಯೆಟ್ ಹಾಡನ್ನು ಪುನೀತ್ ಅವರ ಜೊತೆ ಹಾಡಿದ್ದಾರೆ. ಇದೀಗ ಆ ಹಾಡು ರಿಲೀಸ್ ಆಗಿದ್ದು, ತುಂಬಾ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ. ಕಾಜಲ್ ಅವರ ಧ್ವನಿಯಲ್ಲಿ ರೋಮ್ಯಾಂಟಿಕ್ ಹಾಡು ನೋಡಲು ಈ ವಿಡಿಯೋ ನೋಡಿ..[ಪುನೀತ್ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಕಾದಿದೆ ಬಿಗ್ ಸರ್ ಪ್ರೈಸ್]

ತಮಿಳು ನಿರ್ದೇಶಕ ಎಮ್.ಸರವಣನ್ ಆಕ್ಷನ್-ಕಟ್ ಹೇಳಿರುವ ಚಕ್ರವ್ಯೂಹ ಚಿತ್ರದ ಆಡಿಯೋ ಹಾಗೂ ಟ್ರೈಲರ್ ಬಿಡುಗಡೆ ಸಮಾರಂಭ ಮಾರ್ಚ್ 17 ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದಂದು ಅದ್ದೂರಿಯಾಗಿ ನೆರವೇರಲಿದೆ.

More from Filmibeat

English summary
Listen to Yenaithu Full Lyrical Video Song from Chakravyuha sung by Kajal Aggarwal & Puneeth, starring Puneeth Rajkumar, Rachita Ram and others. Music Composed by S.S.Thaman. Directed by M.Saravanan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X