»   » 'ಗಜಪಡೆ' ಅಬ್ಬರ ಶುರುವಾಯ್ತು ನೋಡಿ...

'ಗಜಪಡೆ' ಅಬ್ಬರ ಶುರುವಾಯ್ತು ನೋಡಿ...

Posted By:
Subscribe to Filmibeat Kannada

'ಅಬ್ಬರಿಸಿ ಬೊಬ್ಬಿರಿದರಿಲ್ಲಾರಿಗೂ ಭಯವಿಲ್ಲ'! ನಟಸಾರ್ವಭೌಮ ಡಾ.ರಾಜ್ ಕುಮಾರ್ ಅಭಿಮಾನಿಗಳು ಎಂದು ಮರೆಯದ ಸಾಲುಗಳಿವು. ದಶಕಗಳ ಹಿಂದೆ ತೆರೆಕಂಡು ಪ್ರೇಕ್ಷಕರ ಮನಗೆದ್ದ 'ಬಬ್ರುವಾಹನ' ಚಿತ್ರದ ಹಾಡಿನ ಈ ಜನಪ್ರಿಯ ಸಾಲುಗಳು ಈಗ ಮತ್ತೆ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ.

ಅದಕ್ಕೆಲ್ಲಾ ಕಾರಣ 'ಗಜಪಡೆ' ಚಿತ್ರ. ಹೊಸಬರ ತಂಡ ರೆಡಿಮಾಡಿರುವ 'ಗಜಪಡೆ' ಚಿತ್ರದ ಕ್ಯಾಪ್ಷನ್ 'ಅಬ್ಬರಿಸಿ ಬೊಬ್ಬಿರಿದರಿಲ್ ಯಾರಿಗೂ ಭಯವಿಲ್ಲ'. ಚಿತ್ರದ ಅಡಿಬರಹಕ್ಕೆ ತಕ್ಕಂತೆ ತಯಾರಾಗಿದೆ 'ಗಜಪಡೆ'. ಲಾಂಗ್-ಮಚ್ಚು-ಬುಲ್ಲೆಟ್ ಸೌಂಡುಗಳೇ 'ಗಜಪಡೆ' ಚಿತ್ರದಲ್ಲಿ ಅಬ್ಬರಿಸಿದೆ. ಅದಕ್ಕೆ ಸಾಕ್ಷಿ ಈಗ ರಿಲೀಸ್ ಆಗಿರುವ ಚಿತ್ರದ ಟ್ರೇಲರ್.

Watch Kannada movie Gajapade trailer

'ರಾಜಾಹುಲಿ' ಚಿತ್ರದಲ್ಲಿ ಯಶ್ 'ಅಣ್ತಮ್ಮ'ನಾಗಿ ಕಾಣಿಸಿಕೊಂಡಿದ್ದ ಹರ್ಷ 'ಗಜಪಡೆ' ಚಿತ್ರದ ನಾಯಕ. ಮೊದಲ ನೋಟಕ್ಕೆ ಸಖತ್ ವೈಲೆಂಟ್ ಆಗಿ ಕಾಣುವ ಹರ್ಷ ಎರಡು ಶೇಡ್ ಗಳಲ್ಲಿ ಮಿಂಚಿದ್ದಾರೆ. ಭರ್ಜರಿ ಸ್ಟಂಟ್ಸ್ ಕೂಡ ಮಾಡಿದ್ದಾರೆ. ['ರಾಜಾ ಹುಲಿ'ಯ ಅಣ್ತಮ್ಮ ಹರ್ಷ ವಿಶೇಷ ಸಂದರ್ಶನ]

ಹರ್ಷ ಜೊತೆ ಜೋಡಿಯಾಗಿರುವ ನಾಯಕಿಯ ಚಹರೆ 'ಗಜಪಡೆ' ಟ್ರೇಲರ್ ನಲ್ಲಿಲ್ಲ. ಸ್ನೇಹ ಮತ್ತು ಪ್ರೀತಿ ಬಗ್ಗೆ ಸಂದೇಶ ಸಾರುವ ಸಿನಿಮಾ 'ಗಜಪಡೆ'. [ಗಜಪಡೆ ಚಿತ್ರದ ಫೋಟೋ ಗ್ಯಾಲರಿ]

ಶಿವರಾಜ್ ಕುಮಾರ್ ಅಭಿನಯದ 'ಭಜರಂಗಿ' ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿದ್ದ ಸೀನು 'ಗಜಪಡೆ' ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆಗೆ ಸಿದ್ಧವಾಗಿರುವ 'ಗಜಪಡೆ' ಸದ್ಯದಲ್ಲೇ ತೆರೆಗೆ ಬರಲಿದೆ. (ಫಿಲ್ಮಿಬೀಟ್ ಕನ್ನಡ)

English summary
Kannada Actor Harsha of 'Rajahuli' fame starrer 'Gajapade' trailer is out. 'Gajapade' is directed by Seenu. Watch the trailer here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada