»   » ಪಡ್ಡೆಗಳ ಗಮನಸೆಳೆದ 'ಗಂಡ ಊರಿಗ್ ಹೋದಾಗ' ಟ್ರೈಲರ್!

ಪಡ್ಡೆಗಳ ಗಮನಸೆಳೆದ 'ಗಂಡ ಊರಿಗ್ ಹೋದಾಗ' ಟ್ರೈಲರ್!

Posted By:
Subscribe to Filmibeat Kannada

ಚಿತ್ರ ಟೈಟಲ್ ಕೇಳಿಯೇ ನಿಮಗೆಲ್ಲಾ ತಲೆಯೊಳಗೆ ಏನೇನೋ ಆಲೋಚನೆ ಮೂಡುವುದರಲ್ಲಿ ಸಂಶಯವಿಲ್ಲ. ಆದರೆ ಟ್ರೈಲರ್ ಮಾತ್ರ ಚಿತ್ರದ ಟೈಟಲ್ ಗಿಂತ ವಿಭಿನ್ನವಾಗಿದೆ.

'ಗಂಡ ಊರಿಗ್ ಹೋದಾಗ' ಸ್ಯಾಂಡಲ್ ವುಡ್ ನಲ್ಲಿ ಸಾಯಿ ಕೃಷ್ಣ ರವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾ. ಈ ಹಿಂದೆಯೇ ಚಿತ್ರದ ಆಡಿಯೋ ರೆಕಾರ್ಡಿಂಗ್ ಸಂದರ್ಭದ ವಿಡಿಯೋಗಳನ್ನು ಬಿಡುಗಡೆ ಮಾಡಿ ಕುತೂಹಲ ಕೆರಳಿಸಿದ್ದ ಚಿತ್ರತಂಡ ಈಗ ಟ್ರೈಲರ್ ಬಿಡುಗಡೆ ಮಾಡಿ ಪಡ್ಡೆ ಹುಡುಗರ ಗಮನಸೆಳೆದಿದೆ.

watch Kannada Movie 'Ganda Oorig Hodaaga' trailer

ಅಂದಹಾಗೆ ಚಿತ್ರ ಹೆಸರಿಗೆ ತಕ್ಕಂತೆ ಟ್ರೈಲರ್ ನಲ್ಲಿ ಡಬಲ್ ಮೀನಿಂಗ್ ಡೈಲಾಗ್ ಗಳು ನುಸುಳಿದ್ದರು ಸಹ, ಮೇಕಿಂಗ್ ದೃಷ್ಟಿಯಿಂದ ಚಿತ್ರ ಸಂಪೂರ್ಣ ಹಾರರ್ ಥ್ರಿಲ್ಲಿಂಗ್ ಎಂಬುದನ್ನು ಸ್ಪಷ್ಟಪಡಿಸಿದೆ. ಅಲ್ಲದೇ ಆಕ್ಷನ್ ದೃಶ್ಯಗಳಲ್ಲಿಯೂ ಚಿತ್ರದ ನಾಯಕಿಯರೇ ಫೈಟ್ ಮಾಡಿದ್ದಾರೆ. ನಾಲ್ಕು ದಿನಗಳ ಹಿಂದಷ್ಟೆ ಯೂಟ್ಯೂಬ್ ನಲ್ಲಿ ಬಿಡುಗಡೆ ಆಗಿರುವ 'ಗಂಡ ಊರಿಗ್ ಹೋದಾಗ' ಚಿತ್ರದ ಟೈಲರ್ ಸಖತ್ ಸದ್ದು ಮಾಡುತ್ತಿದೆ.

ಚಿತ್ರದಲ್ಲಿ ಅನು ಗೌಡ, ಸಿಂಧು, ರಾಧಿಕ ಎಂಬುವವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಸಾಯಿ ಕೃಷ್ಣ ನಿರ್ದೇಶನದ ಈ ಚಿತ್ರವನ್ನು ಜಗದೀಶ್ ಪಿ ಎಂಬುವವರು ನಿರ್ಮಾಣ ಮಾಡಿದ್ದಾರೆ. ಅರುಣ್ ಆಂಡ್ರೂ ರವರ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

ಡಬಲ್ ಮೀನಿಂಗ್ ಡೈಲಾಗ್ ಗಳ ಮೂಲಕ ಗಮನ ಸೆಳೆಯುವ ಚಿತ್ರದ ಟ್ರೈಲರ್ ನಲ್ಲಿ ಆರೋಗ್ಯ ಸಲಹೆಗಳನ್ನು ಟೈಟಲ್ ಕಾರ್ಡ್ ನಲ್ಲಿ ನೀಡಲಾಗಿದೆ. 'ಗಂಡ ಊರಿಗ್ ಹೋದಾಗ' ಟ್ರೈಲರ್ ಈ ಕೆಳಗಿನಂತಿದೆ ನೋಡಿ..

English summary
Sai Krishna directorial new kannada movie 'Ganda Oorig Hodaaga' official trailer released. This movie is starrering Anu Gowda, Sindhu, Radhika in lead roles, Music Composed by Arun Andrew

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada