»   » 'ಗೋಧಿ ಬಣ್ಣ' ಇರುವವರು ಕಳೆದು ಹೋಗಿದ್ದಾರೆ ಹುಡುಕಿ ಕೊಡಿ ಪ್ಲೀಸ್...

'ಗೋಧಿ ಬಣ್ಣ' ಇರುವವರು ಕಳೆದು ಹೋಗಿದ್ದಾರೆ ಹುಡುಕಿ ಕೊಡಿ ಪ್ಲೀಸ್...

Posted By:
Subscribe to Filmibeat Kannada

'ಉಳಿದವರು ಕಂಡಂತೆ' ಖ್ಯಾತಿಯ ನಟ ರಕ್ಷಿತ್ ಶೆಟ್ಟಿ ಮತ್ತು ಅನಂತ್ ನಾಗ್ ಒಂದಾಗಿ ಕಾಣಿಸಿಕೊಳ್ಳುತ್ತಿರುವ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ಶೂಟಿಂಗ್ ಈಗಾಗಲೇ ಕಂಪ್ಲೀಟ್ ಆಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಇಡೀ ರಾಜ್ಯಾದ್ಯಂತ ತೆರೆ ಕಾಣಲಿದೆ.

'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಎಂಬ ವಿಭಿನ್ನ ಹೆಸರಿನಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ಬಗ್ಗೆ ಸಿನಿರಸಿಕರು ಭಾರಿ ಕುತೂಹಲ ಇಟ್ಟುಕೊಂಡಿದ್ದಾರೆ. ಆಕಾಶವಾಣಿಯಲ್ಲಿ ಕಳೆದು ಹೋದವರ ಬಗ್ಗೆ ಪ್ರಕಟಣೆ ನೀಡುವ ಹಾಗೆ ಚಿತ್ರದ ಟೈಟಲ್ ಇದ್ದು, ಚಿತ್ರದಲ್ಲಿ ನಟ ರಕ್ಷಿತ್ ಶೆಟ್ಟಿ ಅವರ ತಂದೆ ವೆಂಕೋಬ್ ರಾವ್ (ಅನಂತ್ ನಾಗ್) ಕಳೆದು ಹೋಗಿರುತ್ತಾರೆ.['ಗೋಧಿ ಬಣ್ಣ ಸಾಧರಣ ಮೈ ಕಟ್ಟು' ಪತ್ತೆ ಹಚ್ಚಲಾದ ಪಾತ್ರಗಳು]


Watch Kannada movie 'Godhi Banna Sadharna Mykattu' Official Trailer

ವಯಸ್ಸಾದ ತಂದೆಗೆ ಮರೆವಿನ ಖಾಯಿಲೆ ಇದ್ದು, ಅವರಿಗೆ ಚಿಕಿತ್ಸೆ ನೀಡುತ್ತಿರುವ ಡಾಕ್ಟರ್ ಸಹನಾ (ಶ್ರುತಿ ಹರಿಹರನ್) ಮತ್ತು ರಕ್ಷಿತ್ ಶೆಟ್ಟಿ ಅವರು ಅನಂತ್ ನಾಗ್ ಅವರನ್ನು ಹುಡುಕುವುದೇ ಇಡೀ 'ಗೋಧಿ ಬಣ್ಣ ಸಾದಾರಣ ಮೈಕಟ್ಟು' ಚಿತ್ರದ ಕಥೆ.[ಡಬ್ಬಿಂಗ್ ನಲ್ಲಿ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಬಿಜಿ]


Watch Kannada movie 'Godhi Banna Sadharna Mykattu' Official Trailer

ಇದೀಗ ನಿರ್ದೇಶಕ ಹೇಮಂತ್ ಎಮ್ ರಾವ್ ಆಕ್ಷನ್-ಕಟ್ ಹೇಳಿರುವ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ಕುತೂಹಲ ಕೆರಳಿಸುವ ಟ್ರೈಲರ್ ರಿಲೀಸ್ ಆಗಿದ್ದು, ಎಲ್ಲಾ ಕಡೆ ಬಹಳಷ್ಟು ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ. ಚಿತ್ರದ ಟ್ರೈಲರ್ ಇಲ್ಲಿದೆ ನೋಡಿ...


ಈಗಾಗಲೇ ಚಿತ್ರದ ಹಾಡುಗಳು ಬಿಡುಗಡೆ ಆಗಿದ್ದು, ಎಲ್ಲಾ ಕಡೆ ಸೂಪರ್ ಹಿಟ್ ಆಗಿ ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ಇದೀಗ ಬಿಡುಗಡೆ ಆಗಿರುವ ಚಿತ್ರದ ಟ್ರೈಲರ್ ನೋಡುತ್ತಿದ್ದರೆ, ಕಳೆದು ಹೋದವರ ಹುಡುಕಾಟದ ನಡುವೆ ಕೆಲವೊಂದು ಅನಿರೀಕ್ಷಿತ ಘಟನೆಗಳು ನಡೆದು ರಕ್ಷಿತ್ ಅವರ ಬಾಳಲ್ಲಿ ವಿಚಿತ್ರ ಅನುಭವಗಳು ಆಗುತ್ತವೆ ಎಂದೆನಿಸುತ್ತದೆ.[ಗೋಧಿ ಬಣ್ಣ ಸಾಧಾರಣ ಮೈಕಟ್ಟು ಅನಂತ್ ನಾಪತ್ತೆ ವಿಡಿಯೋ]


Watch Kannada movie 'Godhi Banna Sadharna Mykattu' Official Trailer

ಅದೇನೇ ಇರಲಿ ಚಿತ್ರದ ಟ್ರೈಲರ್ ಅಂತೂ ತುಂಬಾನೇ ವಿಭಿನ್ನವಾಗಿದ್ದು, ಜೊತೆಗೆ ಕುತೂಹಲ ಕೂಡ ಕೆರಳಿಸುತ್ತಿದೆ. ಇದೇ ತಿಂಗಳು ಮೇ 27ಕ್ಕೆ ಈ ಸಿನಿಮಾ ಬಿಡುಗಡೆ ಆಗುತ್ತಿದ್ದು, ಸದ್ಯಕ್ಕೆ ಈಗ ಬಿಡುಗಡೆ ಆಗಿರುವ ಟ್ರೈಲರ್ ನೋಡಿ ಎಂಜಾಯ್ ಮಾಡಿ...

English summary
Watch Kannada movie 'Godhi Banna Sadharna Mykattu' Official Trailer, starring Anant Nag, Rakshit Shetty, Achyuta Kumar, Sruthi Hariharan, Vasishta N Simha and others. Writer & Directed by Hemanth M Rao.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada