»   » ದರ್ಶನ್ ಅಭಿಮಾನಿಗಳಿಗೆ 'ಜಗ್ಗುದಾದ' ಟೀಸರ್ ಗಿಫ್ಟ್

ದರ್ಶನ್ ಅಭಿಮಾನಿಗಳಿಗೆ 'ಜಗ್ಗುದಾದ' ಟೀಸರ್ ಗಿಫ್ಟ್

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇಂದು 39ನೇ ಹುಟ್ಟುಹಬ್ಬದ ಸಂಭ್ರಮ. ಈಗಾಗಲೇ ದರ್ಶನ್ ಅವರು ತಮ್ಮ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ.

ಅಲ್ಲದೇ ಅಭಿಮಾನಿ ಸಂಘದವರು ದರ್ಶನ್ ಅವರ ಹುಟ್ಟುಹಬ್ಬದ ಅಂಗವಾಗಿ ರಕ್ತದಾನ, ಅನ್ನದಾನ ಹಾಗೂ ಅನಾಥಾಶ್ರಮಗಳಿಗೆ ಭೇಟಿ ಅಂತ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ.[ಫ್ಯಾನ್ಸ್ ಜೊತೆ ಮಧ್ಯರಾತ್ರಿ ಬರ್ತ್ ಡೇ ಆಚರಿಸಿಕೊಂಡ ದರ್ಶನ್ ]

Watch Kannada Movie 'Jaggu Dada' Official Motion Poster

ತಮ್ಮ ಪ್ರೀತಿಯ ಅಭಿಮಾನಿಗಳು ಇಷ್ಟೆಲ್ಲಾ ಮಾಡುವಾಗ ತಾವು ಅವರಿಗಾಗಿ ಏನಾದರು ಒಂದು ಉಡುಗೊರೆ ನೀಡಬೇಕು ಎಂದು ನಿರ್ಧರಿಸಿ ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರ 'ಜಗ್ಗುದಾದ'ನ ಖಡಕ್ ಮೋಷನ್ ಪೋಸ್ಟರ್ ರಿಲೀಸ್ ಮಾಡಿ ಅಭಿಮಾನಿಗಳ ಸಂಭ್ರಮವನ್ನು ದರ್ಶನ್ ಇಮ್ಮಡಿಗೊಳಿಸಿದ್ದಾರೆ.

ಸದಾ ಆಕ್ಷನ್ ಕಿಂಗ್ ಆಗಿ ಮಿಂಚುತ್ತಿದ್ದ ನಟ ದರ್ಶನ್ ಅವರು ಈ ಬಾರಿ ಸ್ವಲ್ಪ ಚೇಂಜ್ ಇರಲಿ ಅಂತ 'ಜಗ್ಗುದಾದ' ಸಿನಿಮಾದ ಮೂಲಕ ಕಾಮಿಡಿ ಕಮ್ ಆಕ್ಷನ್ ಸ್ಟಾರ್ ಆಗಿ ಮಿಂಚಿದ್ದಾರೆ.

ಚಿತ್ರದಲ್ಲಿ ನಟ ದರ್ಶನ್ ಅವರು ಮುಂಬೈನ ಲೋಕಲ್ ಡಾನ್ ಆಗಿ ಮಿಂಚಿದ್ದು, ಆ ಪಾತ್ರವನ್ನು ಎಷ್ಟು ಕಾಮಿಡಿಯಾಗಿ ಪ್ರೆಸೆಂಟ್ ಮಾಡಲು ಸಾಧ್ಯವೋ ಅಷ್ಟು ಕಾಮಿಡಿಯಾಗಿ ಪ್ರದರ್ಶಿಸಲು ನಿರ್ದೇಶಕ ಕಮ್ ನಿರ್ಮಾಪಕ ರಾಘವೇಂದ್ರ ಹೆಗಡೆ ಪ್ರಯತ್ನಪಟ್ಟಿದ್ದಾರೆ.[ದರ್ಶನ್ ಹುಟ್ಟುಹಬ್ಬಕ್ಕೆ ನಡೆಯುತ್ತಿದೆ ಭರ್ಜರಿ ಸಿದ್ಧತೆ ]

Watch Kannada Movie 'Jaggu Dada' Official Motion Poster

ದರ್ಶನ್ ಅವರ ಸ್ನೇಹಿತನ ಪಾತ್ರದಲ್ಲಿ ನಟ ಸೃಜನ್ ಲೋಕೇಶ್ ಮಿಂಚಿದ್ದು, ಇವರಿಬ್ಬರು ನಿಜ ಜೀವನದಲ್ಲೂ ಜಿಗರಿ ದೋಸ್ತ್ ಗಳು. ಇನ್ನುಳಿದಂತೆ ಕರ್ನಾಟಕ, ಮುಂಬೈ ಮತ್ತು ಗೋವಾಗಳಲ್ಲಿ ಚಿತ್ರದ ಶೂಟಿಂಗ್ ನಡೆಸಲಾಗುತ್ತಿದೆ.

ಒಟ್ನಲ್ಲಿ ಹುಟ್ಟುಹಬ್ಬದ ದಿನ ಬರ್ತ್ ಡೇ ಸ್ಪೆಷಲ್ ಅಂತ ದರ್ಶನ್ ಅವರು ಅಭಿಮಾನಿಗಳಿಗಾಗಿ 'ಜಗ್ಗುದಾದ' ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದು, ಇದರಿಂದ ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಖುಷ್ ಆಗಿದ್ದಾರೆ. ಮೋಷನ್ ಪೋಸ್ಟರ್ ನೋಡಲು ಈ ವಿಡಿಯೋ ನೋಡಿ...

English summary
Watch Kannada Movie 'Jaggu Dada' Official Motion Poster. Starring Kannada Actor Darshan Thoogudeep, Kannada Actor Srujan Lokesh, Actress Deeksha Seth, Urvashi and others. The movie is directed by Ragavendra Hegde.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada