»   » ಹೀಗೂ ಉಂಟು.! 'ಕರ್ವ' ಟ್ರೈಲರ್ ನೋಡಿ, ಬೆಚ್ಚಿಬೀಳುವುದು ಖಾತ್ರಿ.!

ಹೀಗೂ ಉಂಟು.! 'ಕರ್ವ' ಟ್ರೈಲರ್ ನೋಡಿ, ಬೆಚ್ಚಿಬೀಳುವುದು ಖಾತ್ರಿ.!

Posted By:
Subscribe to Filmibeat Kannada

ಒಂದು ಟಿಫನ್ ಬಾಕ್ಸ್, ಅದರಿಂದ ಬರುವ 'ಢಮ್' ಎಂಬ ಶಬ್ಧ. ಇಷ್ಟು ಮಾತ್ರದಿಂದಲೇ '6-5=2' ಸಿನಿಮಾ ಕನ್ನಡ ಪ್ರೇಕ್ಷಕರನ್ನು ಥಿಯೇಟರ್ ಬಳಿ ಆಕರ್ಷಿಸಿತ್ತು. ನೋಡನೋಡುತ್ತಲೇ ಕೋಟಿ ಕೋಟಿ ಕಲೆಕ್ಷನ್ ಮಾಡಿ 'ಸೂಪರ್ ಹಿಟ್' ಆಯ್ತು.

ಈಗ ಅದೇ '6-5=2' ಚಿತ್ರದ ನಿರ್ಮಾಪಕ ಕೃಷ್ಣ ಚೈತನ್ಯ ಬಂಡವಾಳ ಹಾಕಿರುವ ಹೊಸ ಚಿತ್ರವೇ 'ಕರ್ವ'. '6-5=2'ದಂತೆ, 'ಕರ್ವ' ಚಿತ್ರವೂ ನಿಮ್ಮನ್ನ ಬೆಚ್ಚಿಬೀಳಿಸಲಿದೆ. ಬೇಕಾದ್ರೆ, ಈಗಷ್ಟೇ ರಿಲೀಸ್ ಆಗಿರುವ 'ಕರ್ವ' ಚಿತ್ರದ ಟ್ರೈಲರ್ ನೋಡ್ಕೊಂಡ್ ಬನ್ನಿ....

watch-kannada-movie-karva-trailer

'ಕರ್ವ' ಟ್ರೈಲರ್ ನೋಡ್ತಿದ್ರೆ, ಮೇಲ್ನೋಟಕ್ಕೆ ಚಿತ್ರಕಥೆಯಲ್ಲಿ ಎರಡು ಟ್ರ್ಯಾಕ್ ಇರುವುದು ಕನ್ಫರ್ಮ್. ಶ್ರೀಮಂತ ಉದ್ಯಮಿ ರಘುವರ್ಧನ್ ಪುತ್ರಿ ಕಿಡ್ನ್ಯಾಪ್ ಒಂದ್ಕಡೆ ಆದರೆ, ರಾಜ ಬಂಗಲೆಗೆ ಕಾಡುವ ಪ್ರೇತದ ಕಾಟ ಇನ್ನೊಂದೆಡೆ. [ಬ್ರೇಕಿಂಗ್ ನ್ಯೂಸ್; 'ಕರ್ವ' ಚಿತ್ರದಲ್ಲಿ 'ಹೀಗೂ ಉಂಟೇ.!']

ಟಿವಿ 9 ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಹೀಗೂ ಉಂಟೇ.!' ಕಾರ್ಯಕ್ರಮದಂತೆ 'ರಾಜ ಬಂಗಲೆ'ಯಲ್ಲಿರುವ ಅಗೋಚರ ಶಕ್ತಿ ಅನಾವರಣ ಮಾಡಲು ವೈ.ಎ.ನಾರಾಯಣಸ್ವಾಮಿ ಕೂಡ 'ಕರ್ವ' ಚಿತ್ರದ ಪಾತ್ರಧಾರಿ ಆಗಿದ್ದಾರೆ. [ಮೀಟರ್ ಇರುವವರಿಗೆ ಮತ್ತೊಂದು ಕೊಡುಗೆ 'ಕರ್ವ'.!]

ಇನ್ನೂ ಉದ್ಯಮಿ ಪಾತ್ರದಲ್ಲಿ ದೇವರಾಜ್ ನಟಿಸಿದ್ದರೆ, ಆರ್.ಜೆ ರೋಹಿತ್, ತಿಲಕ್, ನೆ.ಲ.ನರೇಂದ್ರ ಬಾಬು ಪ್ರಮುಖ ಪಾತ್ರದಲ್ಲಿದ್ದಾರೆ. ಸಸ್ಪೆನ್ಸ್, ಥ್ರಿಲ್ಲರ್, ಹಾರರ್...ಮೂರು ಅಂಶಗಳು ಬೆರೆತಿರುವ 'ಕರ್ವ' ಪ್ರೇಕ್ಷಕರನ್ನು ಎದೆ ನಡುಗಿಸುವುದರಲ್ಲಿ ಡೌಟ್ ಬೇಡ. [ರಾಕ್ ಸ್ಟಾರ್ ರೋಹಿತ್ 'ಕರ್ವ' ಹೀರೋ ಗುರು]

ಅಂದ್ಹಾಗೆ, 'ಕರ್ವ' ಚಿತ್ರಕ್ಕೆ ನವನೀತ್ ನಿರ್ದೇಶಕ. ಇದೇ ತಿಂಗಳ ಅಂತ್ಯಕ್ಕೆ 'ಕರ್ವ' ಬಿಡುಗಡೆ ಆಗಲಿದೆ.

English summary
One more Suspense-thriller film from the makers of '6-5=2', 'Karva' trailer is out. 'Karva' features Kannada Actor Devaraj, Tilak, Rohit in the prominent role. The movie is directed by Navneeth. Watch the trailer here.
Please Wait while comments are loading...