For Quick Alerts
  ALLOW NOTIFICATIONS  
  For Daily Alerts

  ಕೋಮಲ್ ಅಭಿನಯದ 'ಪುಟ್ಟಣ್ಣ' ಸಿನಿಮಾದಲ್ಲಿ ಅಂತದ್ದೇನಿದೆ?

  By Harshitha
  |

  ವಿವಾದಗಳಲ್ಲಿ ಅಷ್ಟಾಗಿ ಗುರುತಿಸಿಕೊಳ್ಳದ ನಟ ಕೋಮಲ್ ಕುಮಾರ್ ಈಗ ಕಾಂಟ್ರವರ್ಸಿಯಲ್ಲಿ ಸಿಲುಕಿದ್ದಾರೆ. ಅದಕ್ಕೆ ಕಾರಣ 'ಕಥೆ-ಚಿತ್ರಕಥೆ-ನಿರ್ದೇಶನ-ಪುಟ್ಟಣ್ಣ' ಸಿನಿಮಾ.!

  ಶೀರ್ಷಿಕೆ ಕೇಳಿದ ಕೂಡಲೆ, ನಿಮಗೆ ಕನ್ನಡ ಚಿತ್ರರಂಗದ ಉತ್ಕೃಷ್ಟ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನೆನಪಿಗೆ ಬರುವುದು ಖಂಡಿತ. ಹಾಗಾದ್ರೆ, ಈ ಸಿನಿಮಾಗೂ ಪುಟ್ಟಣ್ಣ ರವರ ನಿಜ ಬದುಕಿಗೂ ನಂಟಿದ್ಯಾ? ಎನ್ನುವ ಡೌಟ್ ಹಲವರಲ್ಲಿ ಕಾಡಬಹುದು.[ಕಥೆ-ಚಿತ್ರಕಥೆ-ನಿರ್ದೇಶನ 'ಪುಟ್ಟಣ್ಣ' ಸುತ್ತ ಹೊಸ ವಿವಾದ!]

  ನಿಮಗೆ ಕ್ಲಾರಿಟಿ ಸಿಗಬೇಕಾದರೆ, ಒಮ್ಮೆ 'ಕಥೆ-ಚಿತ್ರಕಥೆ-ನಿರ್ದೇಶನ-ಪುಟ್ಟಣ್ಣ' ಚಿತ್ರದ ಟ್ರೈಲರ್ ನೋಡ್ಕೊಂಡ್ ಬನ್ನಿ....

  'ಕಥೆ-ಚಿತ್ರಕಥೆ-ನಿರ್ದೇಶನ-ಪುಟ್ಟಣ್ಣ' ಚಿತ್ರದ ಟ್ರೈಲರ್ ನೋಡಿದ್ರೆ, ಇದು ಹಾರರ್ ಕಾಮಿಡಿ ಸಿನಿಮಾ ಅನ್ನೋದರಲ್ಲಿ ಎರಡು ಮಾತಿಲ್ಲ. ಡೈರೆಕ್ಟರ್ ಕುರ್ಚಿಯಲ್ಲಿ ಕೂರುವ ಪಾತ್ರ ನಟ ಕೋಮಲ್ ಕುಮಾರ್ ರದ್ದು.['ಪುಟ್ಟಣ್ಣ' ನ ಅವತಾರ ಎತ್ತಿದ ಕಾಮಿಡಿ ಕಿಂಗ್ ಕೋಮಲ್!]

  ನಟಿಯರಾಗಿ ಪ್ರಿಯಾಮಣಿ, ಪೂಜಾ ಗಾಂಧಿ ಕಾಣಿಸಿಕೊಂಡಿದ್ದರೆ, ರವಿಶಂಕರ್, ಕುರಿ ಪ್ರತಾಪ್ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಮೇಲ್ನೋಟಕ್ಕೆ ಇದು ಪುಟ್ಟಣ್ಣ ಕಣಗಾಲ್ ರವರ ನಿಜ ಬದುಕಿನ ಕಥೆ ಅಲ್ಲ ಅಂತ ಹೇಳ್ಬಹುದು.

  ಆದ್ರೂ, ಶೀರ್ಷಿಕೆ ಇರುವ ಕಾರಣ ಬಿಡುಗಡೆಗೂ ಮುನ್ನ ಚಿತ್ರವನ್ನ ವೀಕ್ಷಿಸಬೇಕು ಅಂತ ಪುಟ್ಟಣ್ಣ ಕಣಗಾಲ್ ಪತ್ನಿ ಪಟ್ಟು ಹಿಡಿದಿದ್ದಾರೆ. ಮುಂದೇನಾಗುತ್ತೋ ಕಾದು ನೋಡ್ಬೇಕಷ್ಟೆ.....

  English summary
  Komal Kumar starrer Kannada Movie 'Kathe Chitrakathe Nirdheshana Puttanna' is in trouble. Kannada Director Late Puttanna Kanagal family wants to watch the film prior the film release. Watch the trailer here.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X