'ಕೇಡಿ ನಂಬರ್-1' ಯಶ್ 'ಮಾಸ್ಟರ್ ಪೀಸ್' ಟ್ರೈಲರ್ ಬೊಂಬಾಟ್!
ಅಂತೂ ಎಲ್ಲರ ಕುತೂಹಲಕ್ಕೆ ಕೊಂಚ ಬ್ರೇಕ್ ಸಿಕ್ಕಿದೆ. ಸ್ಯಾಂಡಲ್ ವುಡ್ ನ ಈ ವರ್ಷದ ಬಹುನಿರೀಕ್ಷಿತ ಸಿನಿಮಾ 'ಮಾಸ್ಟರ್ ಪೀಸ್' ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ.
ಈ ಹಿಂದೆ ಫೋಟೋ ಶೂಟ್ ನಲ್ಲಿ ಭಗತ್ ಸಿಂಗ್ ಲುಕ್ ನೋಡಿ, ರಾಕಿಂಗ್ ಸ್ಟಾರ್ ಯಶ್ 'ಮಾಸ್ಟರ್ ಪೀಸ್' ಸಿನಿಮಾದಲ್ಲಿ 'ಕಾಂತ್ರಿಕಾರಿ' ಅಂತ ನೀವ್ ಅಂದುಕೊಂಡಿದ್ರೆ, ಈಗಷ್ಟೆ ಬಿಡುಗಡೆ ಆಗಿರುವ ಟ್ರೈಲರ್ ನಲ್ಲಿ ನಿಮಗೆಲ್ಲಾ ಬೇರೆ ಸರ್ ಪ್ರೈಸ್ ಇದೆ.
ಆ ಸರ್ ಪ್ರೈಸ್ ಏನು ಅಂತ ನಾವ್ ಹೇಳೋಕ್ಕಿಂತ ನೀವೇ 'ಮಾಸ್ಟರ್ ಪೀಸ್' ಟ್ರೈಲರ್ ನೋಡಿ...ಎಂಜಾಯ್ ಮಾಡಿ.....
ಅಂದ್ಹಾಗೆ, 'ಮಾಸ್ಟರ್ ಪೀಸ್' ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಮಾಡಿರುವುದು ಮಂಜು ಮಾಂಡವ್ಯ. 'ನಿನ್ನಿಂದಲೇ' ಖ್ಯಾತಿಯ ವಿಜಯ್ ಕಿರಗಂದೂರ್ ಬಂಡವಾಳ ಹಾಕಿದ್ದಾರೆ.['ಮಾಸ್ಟರ್ ಪೀಸ್' ಸಿನಿಮಾದ ಮಸ್ತ್ ಸಾಂಗ್ ಔಟ್!]
'ಪಂಟರ್' ಯಶ್ ಎದೆಗೆ 'ಮಾಸ್ಟರ್ ಪೀಸ್' ಸಿನಿಮಾದಲ್ಲಿ ಪ್ರೀತಿಯ ಬಾಣ ಬಿಡುವ ಹುಡುಗಿ ಶಾನ್ವಿ. ಯಶ್ ತಾಯಿ ಪಾತ್ರದಲ್ಲಿ ಸುಹಾಸಿನಿ ಅಭಿನಯಿಸಿದ್ದಾರೆ. ಡಿಸೆಂಬರ್ 24 ರಂದು 'ಮಾಸ್ಟರ್ ಪೀಸ್' ಬಿಡುಗಡೆ ಆಗಲಿದೆ. [ಎಕ್ಸ್ ಕ್ಲೂಸಿವ್ ; 'ಮಾಸ್ಟರ್ ಪೀಸ್' ವಿತರಣಾ ಹಕ್ಕು ಅಬ್ಬಬ್ಬಾ! ಅಷ್ಟೊಂದಾ?!]


Click it and Unblock the Notifications











