For Quick Alerts
  ALLOW NOTIFICATIONS  
  For Daily Alerts

  ರಾಧಿಕಾ ಚೇತನ್ ಅವರ 'ನೆವರ್ ಎಂಡ್' ಟ್ರೈಲರ್ ನೋಡಿದ್ರಾ?

  By Suneetha
  |

  'ರಂಗಿತರಂಗ' ಚಿತ್ರದ ನಟಿ ರಾಧಿಕಾ ಚೇತನ್ ಅವರು 'ಯು-ಟರ್ನ್' ಚಿತ್ರದ ಬಿಡುಗಡೆಗೆ ಕಾಯುತ್ತಿರುವ ಬೆನ್ನಲ್ಲೇ 'ನೆವರ್ ಎಂಡ್' ಎಂಬ ಹೊಸ ಕಿರು ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ ಎಂಬುದನ್ನು ನೀವು ಇದೇ ಫಿಲ್ಮಿಬೀಟಲ್ಲಿ ಓದಿದ್ರಿ ತಾನೆ.

  ಸಸ್ಪೆನ್ಸ್-ಥ್ರಿಲ್ಲರ್ ಕಥೆಯಾಧರಿತ ಕಿರುಚಿತ್ರ 'ನೆವರ್ ಎಂಡ್' ಗೆ ನವ ನಿರ್ದೇಶಕ ಧೀರಜ್ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ರಾಧಿಕಾ ಚೇತನ್ ಅವರು ವಿಶೇಷವಾಗಿ ಸಿ.ಬಿ.ಐ ಪಾತ್ರದಲ್ಲಿ ಮಿಂಚುತ್ತಿದ್ದು, ಇವರಿಗೆ ನವನಟ ಪ್ರಾಣ್ ಉದಿಯನ್ ಎಂಬುವವರು ಸಾಥ್ ನೀಡುತ್ತಿದ್ದಾರೆ.[ಸಿಬಿಐ ಆಫೀಸರ್ ಆದ 'ರಂಗಿ' ಬೆಡಗಿ ರಾಧಿಕಾ ಚೇತನ್]

  ಇದೀಗ 'ನೆವರ್ ಎಂಡ್' ಕಿರುಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು ಸಾಕಷ್ಟು ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ. ಚರಣ್ ರಾಜ್ ಮ್ಯೂಸಿಕ್ ಕಂಪೋಸ್ ಮಾಡಿರುವ, 'ಐಸ್ ಎನ್ವಿ ಮೀಡಿಯಾ' ಅರ್ಪಿಸುವ 'ನೆವರ್ ಎಂಡ್' ಚಿತ್ರದ ಸಸ್ಪೆನ್ಸ್ ಟ್ರೈಲರ್ ಇಲ್ಲಿದೆ ನೋಡಿ...

  ಸಸ್ಪೆನ್ಸ್ ಕಥೆಯಾಧರಿತ ಸಿನಿಮಾಗಳನ್ನು ಇಷ್ಟಪಡುವ ರಂಗಿ ಬೆಡಗಿ ರಾಧಿಕಾ ಚೇತನ್ ಅವರು ಈ ಬಾರಿ ಒಂದು ಕೊಲೆಯ ರಹಸ್ಯ ಬಯಲು ಮಾಡಲು ಹೊರಟಿರುವ ಖಡಕ್ ಸಿಬಿಐ ಆಫೀಸರ್ ಆಗಿದ್ದಾರೆ.['ರಂಗಿ' ಆಯ್ತು ಇದೀಗ 'ಯೂ-ಟರ್ನ್' ತೆಗೆದುಕೊಂಡ ರಾಧಿಕಾ ಚೇತನ್.!]

  ಚಿತ್ರದ ಹೊಚ್ಚ ಹೊಸ ಪೋಸ್ಟರ್ ಗಳು ಹಾಗೂ ರಾಧಿಕಾ ಚೇತನ್ ಅವರ ಆಕರ್ಷಕ ಚಿತ್ರಗಳನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

  English summary
  Watch Kannada Movie 'Never End' Official Trailer. Kannada Actress Radhika Chetan, Actor Pran in the lead role. The movie is directed by Deeraj.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X