For Quick Alerts
  ALLOW NOTIFICATIONS  
  For Daily Alerts

  ಇನ್ಮುಂದೆ ಸ್ಕೂಲ್ ಗೆ ಚಕ್ಕರ್ ಹಾಕೋ ಹಾಗಿಲ್ಲ, ಯಾಕಂದ್ರೆ 'ಅನನ್ಯ' ಟೀಚರ್ ಬಂದವ್ರೇ!

  By Bharath Kumar
  |

  ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿಬರ್ತಿರುವ ನಿರೀಕ್ಷೆಯ ಚಿತ್ರ 'ಆಪರೇಷನ್ ಅಲಮೇಲಮ್ಮ'. ಚಿತ್ರದ ಮೊದಲ ಟೀಸರ್ ಮೂಲಕ ಈಗಾಗಲೇ ಸ್ಯಾಂಡಲ್ ವುಡ್ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

  ಇದೀಗ, ಚಿತ್ರದ ಎರಡನೇ ಟೀಸರ್ ಬಿಡುಗಡೆ ಮಾಡಿದ್ದು, ಮತ್ತಷ್ಟು ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ.[ಟೀಸರ್: ಎಲ್ಲೆಲ್ಲೂ 'ಪರ್ಮಿ' ಹವಾ: ಸೂಪರ್ರಾಗಿದೆ 'ಆಪರೇಷನ್ ಅಲಮೇಲಮ್ಮ' ]

  ಚಿತ್ರದ ಟೈಟಲ್, ಪೋಸ್ಟರ್, ಹಾಗೂ ಪಾತ್ರಗಳ ಆಯ್ಕೆಯಿಂದ ಗಮನ ಸೆಳೆದಿದ್ದ ನಿರ್ದೇಶಕರು, ಎಲ್ಲೆಡೆ 'ಪರ್ಮಿ' ಹವಾ ಸೃಷ್ಠಿಸಿದ್ದರು. ಈಗ ಎರಡನೇ ಟೀಸರ್ ಮೂಲಕ 'ಅನನ್ಯ' ಟೀಚರ್ ನ ಪರಿಚಯ ಮಾಡಿದ್ದಾರೆ. ಮುಂದೆ ಓದಿ....

  'ಆಪರೇಷನ್ ಅಲಮೇಲಮ್ಮ' 2ನೇ ಟೀಸರ್!

  'ಆಪರೇಷನ್ ಅಲಮೇಲಮ್ಮ' 2ನೇ ಟೀಸರ್!

  ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಆಪರೇಷನ್ ಅಲಮೇಲಮ್ಮ' ಚಿತ್ರದ 2ನೇ ಟೀಸರ್ ಬಿಡುಗಡೆಯಾಗಿದೆ.[ಸುನಿಯ 'ಆಪರೇಷನ್ ಅಲಮೇಲಮ್ಮ' ಪೋಸ್ಟರ್ ಹೇಗಿದೆ ಅಂದ್ರೆ.! ]

  'ಅನನ್ಯ' ಟೀಚರ್ ಪರಿಚಯ!

  'ಅನನ್ಯ' ಟೀಚರ್ ಪರಿಚಯ!

  ಮೊದಲ ಟೀಸರ್ ನಲ್ಲಿ ನಾಯಕ 'ಪರ್ಮಿ' ಪಾತ್ರವನ್ನ ಪರಿಚಯ ಮಾಡಿಸಿದ್ದ ನಿರ್ದೇಶಕರು, ಎರಡನೇ ಟೀಸರ್ ನಲ್ಲಿ ಚಿತ್ರದ ನಾಯಕಿ ಶ್ರದ್ಧಾ ಶ್ರೀನಾಥ್ ಅವರನ್ನ 'ಅನನ್ಯ' ಎಂಬ ಟೀಚರ್ ಆಗಿ ಪರಿಚಯಿಸಿದ್ದಾರೆ.[ಸುನಿಯ 'ಅಪರೇಷನ್ ಅಲಮೇಲಮ್ಮ'ನ ಬಗ್ಗೆ ಸೆಲೆಬ್ರಿಟಿಗಳು ಉಘೇ ಉಘೇ ]

  ಸ್ಕೂಲ್ ಗೆ ಚಕ್ಕರ್ ಸಿನಿಮಾಗೆ ಹಾಜರ್!

  ಸ್ಕೂಲ್ ಗೆ ಚಕ್ಕರ್ ಸಿನಿಮಾಗೆ ಹಾಜರ್!

  ಸಾಮಾನ್ಯವಾಗಿ ಸ್ಕೂಲ್ ಗೆ ಮಕ್ಕಳು ಚಕ್ಕರ್ ಹಾಕಿ, ಸಿನಿಮಾ ಹೋಗ್ತಾರೆ. ಆದ್ರೆ, ಇಲ್ಲಿ ಅನನ್ಯ ಟೀಚರ್ ಚಕ್ಕರ್ ಹಾಕಿ, ಸಿನಿಮಾ ಹೋಗಿದ್ದಾರೆ.

  'ಅನನ್ಯ' ಟೀಚರ್ ತುಂಬಾ ಒಳ್ಳೆಯವರು!

  'ಅನನ್ಯ' ಟೀಚರ್ ತುಂಬಾ ಒಳ್ಳೆಯವರು!

  ಅನನ್ಯ ಟೀಚರ್ 'ವ್ಯಾಲೆಂಟೀನ್ಸ್ ಡೇ' ಆಚರಣೆ ಮಾಡ್ತಾರಂತೆ. ಆದ್ರೆ, ಅವರು ಸೆಲೆಬ್ರೇಟ್ ಮಾಡುವ ಸ್ಟೈಲ್ ಕೇಳಿದ್ರೆ, ನೀವು ಕೂಡ ಶಾಕ್ ಆಗ್ಬಿಡ್ತೀರಾ.

  ಇವರು 'ಅರೇಂಜ್ ಮ್ಯಾರೇಜ್' ಮಾತ್ರ ಆಗೋದಂತೆ!

  ಇವರು 'ಅರೇಂಜ್ ಮ್ಯಾರೇಜ್' ಮಾತ್ರ ಆಗೋದಂತೆ!

  ಅಂದ್ಹಾಗೆ, ಅನನ್ಯ ಅವರು ಸೈನ್ಸ್ ಟೀಚರ್. ಬಿ.ಎಸ್.ಸಿ, ಬಿಎಡ್ ಮುಗಿಸಿದ್ದಾರೆ. ಮದುವೆ ವಿಚಾರದಲ್ಲಿ ಇವರು ತುಂಬಾ ಸ್ಟ್ರಿಟ್. ಇವರು ಅರೇಂಜ್ ಮ್ಯಾರೇಜ್ ಮಾತ್ರ ಆಗೋದಂತೆ.

  'ಪರ್ಮಿ' ಪಾತ್ರದಲ್ಲಿ ರಿಷಿ!

  'ಪರ್ಮಿ' ಪಾತ್ರದಲ್ಲಿ ರಿಷಿ!

  ಇದೇ ಮೊದಲ ಬಾರಿಗೆ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿರುವ ರಿಷಿ ಚೊಚ್ಚಲ ಚಿತ್ರದಲ್ಲಿಯೇ ಮೋಡಿ ಮಾಡುತ್ತಿದ್ದಾರೆ. ಚಿತ್ರದಲ್ಲಿ 'ಪರ್ಮಿ' ಆಗಿ ಕಾಣಿಸಿಕೊಂಡಿರುವ ರಿಷಿ, ತರಕಾರಿ ಮಾರುವ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

  ಹಾಡುಗಳನ್ನ ನಿರೀಕ್ಷಿಸಿ...

  ಹಾಡುಗಳನ್ನ ನಿರೀಕ್ಷಿಸಿ...

  ಟೀಸರ್ ಗಳ ಮೂಲಕ ಇಂಟ್ರಸ್ಟಿಂಗ್ ಎನಿಸಿರುವ 'ಆಪರೇಷನ್ ಅಲಮೇಲಮ್ಮ' ಸದ್ಯದಲ್ಲೇ ಆಡಿಯೋ ಬಿಡುಗಡೆ ಮಾಡಲಿದೆಯಂತೆ. ಸುನಿ ನಿರ್ದೇಶನದ ಈ ಚಿತ್ರಕ್ಕೆ ಬಿ.ಜೆ ಭರತ್ ಸಂಗೀತ ಸಂಯೋಜನೆ ಮಾಡಿದ್ದಾರೆ.['ಅನನ್ಯ' ಟೀಚರ್ ಪರಿಚಯದ ಟೀಸರ್ ಇಲ್ಲಿದೆ ನೋಡಿ]

  English summary
  Kannada Director Simple Suni directorial 'Operation Alamellamma' 2nd teaser is out. Watch the teaser here.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X