ಟೀಸರ್: ಎಲ್ಲೆಲ್ಲೂ 'ಪರ್ಮಿ' ಹವಾ: ಸೂಪರ್ರಾಗಿದೆ 'ಆಪರೇಷನ್ ಅಲಮೇಲಮ್ಮ'

By ರಾಘವೇಂದ್ರ.ಸಿ.ವಿ

'ಸಿಂಪಲ್ ಆಗಿ ಇನ್ನೊಂದ್ ಲವ್ ಸ್ಟೋರಿ' ಹೇಳಿ ಎಲ್ಲೋ ಕಳೆದುಹೋಗಿದ್ದ ನಿರ್ದೇಶಕ ಸುನಿ ಸದ್ದಿಲ್ಲದೇ ಒಂದು ಸಿನಿಮಾ ಶೂಟಿಂಗ್ ಮುಗಿಸಿ ಹೀರೋ ಪರಿಚಯದ ಒಂದು ಸಣ್ಣ ಟೀಸರ್ ಬಿಡುಗಡೆ ಮಾಡಿದ್ದಾರೆ. ಆ ಸಿನಿಮಾದ ಹೆಸರೇ 'ಆಪರೇಷನ್ ಅಲಮೇಲಮ್ಮ'.

ಸಿನಿಮಾ ಬಿಡುಗಡೆಗೂ ಮುನ್ನ ಶೀರ್ಷಿಕೆ, ಟೀಸರ್, ಟ್ರೈಲರ್ ಮೂಲಕ ಎಲ್ಲರ ಗಮನ ಸೆಳೆಯುವುದು ನಿರ್ದೇಶಕ 'ಸಿಂಪಲ್' ಸುನಿ ಅವರ ಸ್ಪೆಷಾಲಿಟಿ. ಇಲ್ಲೂ ಕೂಡ ತಮ್ಮ ಎಂದಿನ ಶೈಲಿಯಲ್ಲಿ ಸಂಭಾಷಣೆಗಳ ಮೂಲಕ ಪ್ರೇಕ್ಷಕರಿಗೆ ಕಚಗುಳಿ ಇಡೋ ಪ್ರಯತ್ನ ಮಾಡಿದ್ದಾರೆ.

ಸದ್ಯ ಈ ಚಿತ್ರದ ಟೀಸರ್ ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಜೋರು ಸದ್ದು ಮಾಡುತ್ತಿದ್ದು 2 ಲಕ್ಷಕ್ಕೂ ಅಧಿಕ ಜನ ನೋಡಿದ್ದು ಎಲ್ಲೆಡೆ 'ಪರ್ಮಿ' ಫುಲ್ ಮಿಂಚುತ್ತಿದ್ದಾರೆ.[ಅಲಮೇಲಮ್ಮನಿಗೆ ಆಪರೇಶನ್ ಮಾಡಲು ಹೊರಟ ಸಿಂಪಲ್ ಸುನಿ]

ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ 'ಯೂಟರ್ನ್' ನಾಯಕಿ ಶ್ರದ್ಧಾ ಶ್ರೀನಾಥ್ ಕಾಣಿಸಿಕೊಂಡಿದ್ದಾರೆ. 'ಅಲಮೇಲಮ್ಮ' ಎಂದಾಕ್ಷಣ ಇದು ನಾಯಕಿ ಪ್ರಧಾನ ಚಿತ್ರ, ನಾಯಕಿಗೆ ಹೆಚ್ಚು ಪ್ರಾಮುಖ್ಯತೆ ನೀಡಿರುತ್ತಾರೆ ಎಂದು ನೀವೂ ಊಹಿಸಬಹುದು. ಆದರೆ ಇದು ನಿಮ್ಮ ಊಹೆಗೆ ವಿರುದ್ಧದ ಟೀಸರ್ ಆಗಿದ್ದು ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹೊಸ ಪ್ರತಿಭೆ 'ಪರ್ಮಿ' ಪಾತ್ರಧಾರಿ 'ರಿಷಿ' ಅವರು ತಮ್ಮ ಸಹಜ ನಟನೆಯ ಮೂಲಕ ಎಲ್ಲರನ್ನೂ ಆಕರ್ಷಿಸುತ್ತಿದ್ದಾರೆ ಎನ್ನುವುದು ವಿಶೇಷ.

Watch Kannada Movie 'Operation Alamellamma' teaser

ಈಗಾಗಲೇ 'ಯೂಟರ್ನ್' ಚಿತ್ರದ ಮೂಲಕ ನೋಡುಗರ ಗಮನ ಸೆಳೆದಿರುವ ಶ್ರದ್ಧಾ ಅವರು ಶಾಲಾ ಶಿಕ್ಷಕಿಯಂತಹ ಗಂಭೀರ ಪಾತ್ರದಲ್ಲಿ ನಟಿಸಿರುವುದು ಕುತೂಹಲ ಮೂಡಿಸಿದೆ. ತರಕಾರಿ ಮಾರುಕಟ್ಟೆಯಲ್ಲಿನ ದಲ್ಲಾಳಿ ಪಾತ್ರದಲ್ಲಿ ನಟ ರಿಷಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.[ಸುನಿಯ 'ಆಪರೇಷನ್ ಅಲಮೇಲಮ್ಮ' ಪೋಸ್ಟರ್ ಹೇಗಿದೆ ಅಂದ್ರೆ.!]

ತಮ್ಮ ಪ್ರತಿ ಸಿನಿಮಾದಲ್ಲೂ ಹೊಸ ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸುವ ಸುನಿ ಈ ಬಾರಿ 'ರಿಷಿ'ಯನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಮೂಲತಃ ರಂಗಭೂಮಿ ನಂಟಿರುವ ಇವರು ಕೆಲವು ಧಾರಾವಾಹಿಗಳಲ್ಲೂ ಕೂಡ ನಟಿಸಿದ ಅನುಭವ ಹೊಂದಿದ್ದಾರೆ. ಉತ್ತಮ ನಟನೆಯ ಮೂಲಕ ಪ್ರೇಕ್ಷಕರ ಮತ್ತು ಚಿತ್ರರಂಗದವರ ಗಮನ ಸೆಳೆದಿರುವ ರಿಷಿ ನೋಡುಗರ ಮನದಲ್ಲಿ ಖಾಯಂ ನೆಲೆಯೂರುವ ಭರವಸೆ ನೀಡಿದ್ದಾರೆ.

ಅತಿ ಶೀಘ್ರದಲ್ಲಿ ಚಿತ್ರದ ಹಾಡುಗಳು ಬಿಡುಗಡೆಯಾಗಲಿದ್ದು ಆದಷ್ಟು ಬೇಗ ಚಿತ್ರವನ್ನು ತೆರೆಗೆ ತರುವ ಯೋಜನೆ ರೂಪಿಸಿದೆ ಚಿತ್ರ ತಂಡ.

ಆಲ್ ದಿ ಬೆಸ್ಟ್ 'ಆಪರೇಷನ್ ಅಲಮೇಲಮ್ಮ'

More from Filmibeat

English summary
Kannada Director Simple Suni directorial 'Operation Alamellamma' teaser is out. Watch the teaser here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X