»   » 'ಊಜಾ': ಇದು ಆತ್ಮಗಳ ಜೊತೆ ಆಡುವ ಆಟ

'ಊಜಾ': ಇದು ಆತ್ಮಗಳ ಜೊತೆ ಆಡುವ ಆಟ

Posted By:
Subscribe to Filmibeat Kannada

ನಾವೆಲ್ಲರೂ ಸಣ್ಣವರಿದ್ದಾಗ ಒಂದಾಟ ಆಡ್ತಾ ಇದ್ವಿ ನೆನಪಿದ್ಯಾ ನಿಮಗೆ. ಅದೇ ರೀ ಎಲ್ಲರೂ ಸುತ್ತ ಕುಳಿತು ಮಧ್ಯದಲ್ಲಿ ಒಂದು ಕಾಯಿನ್ ಇರಿಸಿ ಸ್ಪಿರಿಟ್ ಕರೀತಾ ಇದ್ವಲ್ವಾ. 'ಸ್ಪಿರಿಟ್ ಕಮ್ ಸ್ಪಿರಿಟ್ ಕಮ್' ಅಂತ, ಅದೇ ಕಥೆಯನ್ನು ಸದ್ಯಕ್ಕೆ ನಿರ್ದೇಶಕ ರಾಜ್ ಕುಮಾರ್ ರೆಡ್ಡಿ ಅವರು ತೆರೆ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ.

ಗಾಂಧಿನಗರದಲ್ಲಿ ಇದೀಗ ಹೊಸಬರ ಹವಾ ಜಾಸ್ತಿಯಾಗುತ್ತಿದೆ. ಇದಕ್ಕೆ ಜೀವಂತ ಉದಾಹರಣೆ ಅಂದ್ರೆ ಇತ್ತೀಚೆಗೆ ಬ್ಲಾಕ್ ಬಾಸ್ಟರ್ ಹಿಟ್ ಕಂಡ 'ರಂಗಿತರಂಗ' ಚಿತ್ರ. ಇದೀಗ ಮತ್ತೊಂದು ಹೊಸಬರ ತಂಡ 'ಊಜಾ' ಎಂಬ ವಿಚಿತ್ರ ಟೈಟಲ್ ಇಟ್ಟುಕೊಂಡು ಟ್ರೈಲರ್ ಬಿಡುಗಡೆ ಮಾಡಿದೆ.

Watch Kannada movie 'Ouija' Theatrical trailer

ಇಲ್ಲಿ 'ಊಜಾ' ಅಂದರೆ ಆತ್ಮಗಳ ಜೊತೆ ಮಾತಾಡಲು ಬಳಸುವಂತದ್ದಾಗಿದೆ. ಆದರೆ ನಿಜವಾಗ್ಲೂ ಆತ್ಮಗಳು ಇರುತ್ತಾ ಇಲ್ವೋ ಅನ್ನೊದಕ್ಕೆ ಇವರೆಗೆ ಯಾರಿಗೂ ಉತ್ತರ ದೊರೆತಿಲ್ಲ. ಅದೇನೇ ಇರಲಿ ಸದ್ಯಕ್ಕೆ ಈಗಾಗಲೇ ಬಿಡುಗಡೆಯಾಗಿರುವ 'ಊಜಾ' ಚಿತ್ರದ ಟ್ರೈಲರ್ ಒಮ್ಮೆ ನೀವು ನೋಡಿ ಅಮೇಲೆ ಡಿಸೈಡ್ ಮಾಡಿ....

'ಪಾಸಿಂಗ್ ಸ್ಪಿರಿಟ್ ಪ್ಲೀಸ್ ಕಮ್, ಪಾಸಿಂಗ್ ಸ್ಪಿರಿಟ್ ಪ್ಲೀಸ್ ಕಮ್' ಅಂತಾ ಸ್ಪಿರಿಟ್ ಕರೆಯುವ 'ಊಜಾ' ಚಿತ್ರದ ಟ್ರೈಲರ್ ನೋಡುತ್ತಿದ್ದಂತೆ ಇದೊಂದು ಥರ ಹಾರರ್-ಥ್ರಿಲ್ಲರ್ ಕಥೆಯೆನಿಸುತ್ತದೆ. ವಿ.ರವಿಕುಮಾರ್ ಸಿನೆಮಾಟೋಗ್ರಫಿಯಲ್ಲಿ ಮೂಡಿಬಂದಿರುವ 'ಊಜಾ' ಚಿತ್ರ ಹಾರರ್ ಪ್ರೀಯರಿಗೆ ಮನೋರಂಜನೆ ನೀಡಬಹುದು.

Watch Kannada movie 'Ouija' Theatrical trailer

ಹರಿಣಿಕೇಶ್ ಮ್ಯೂಸಿಕ್ ಕಂಪೋಸ್ ಮಾಡಿರುವ 'ಊಜಾ' ಚಿತ್ರದಲ್ಲಿ ಅವಿನಾಶ್ ಹಾಗೂ ಸಯಾಜಿ ಶಿಂಧೆ ಇಬ್ಬರನ್ನು ಬಿಟ್ಟರೆ ಉಳಿದವರೆಲ್ಲರದು ಹೊಸ ಮುಖ. ಶ್ರದ್ಧಾ ದಾಸ್, ಭರತ್, ಗಾಯತ್ರಿ ವೆಂಕಟಗಿರಿ, ಮಾಧುರಿ ಇಟಗಿ, ಕಾದಂಬರಿ, ರಾಜ ರವೀಂದ್ರ, ರಘು ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

6-5=2 ಚಿತ್ರ ಸದ್ದಿಲ್ಲದೆ ಸುದ್ದಿ ಮಾಡಿದಂತೆ 'ಊಜಾ' ಚಿತ್ರ ಕೂಡ ಸ್ಯಾಂಡಲ್ ವುಡ್ ನಲ್ಲಿ ಕಮಾಲ್ ಮಾಡುತ್ತ ಅಂತ ತೆರೆಗೆ ಬಂದ ಮೇಲೆ ಹೇಳಬೇಕಷ್ಟೆ.

English summary
Kannada Movie 'Ouija' Theatrical trailer released, 'Ouija' features Kannada actor Bharath, Raja Ravindra, Kannada Actress Shraddha Das, Gayathri Venkitagiri, Madhuri Itagi in lead roles. The movie is directed by Raj Kumar Reddy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada