»   » ಭಂಡಾರಿ ಸಹೋದರರ 'ರಾಜರಥ' ಸ್ಪೆಷಲ್ ಟೀಸರ್ ನೋಡಿ

ಭಂಡಾರಿ ಸಹೋದರರ 'ರಾಜರಥ' ಸ್ಪೆಷಲ್ ಟೀಸರ್ ನೋಡಿ

Posted By:
Subscribe to Filmibeat Kannada

ಅದ್ಭುತ ನಿರ್ದೇಶಕ ಅನುಪ್ ಭಂಡಾರಿ ಅವರು 'ರಂಗಿತರಂಗ' ಎಂಬ ಹೊಸ ಕೋಲ್ಮಿಂಚನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದ ನಂತರ ಮತ್ತೆ ಎರಡನೇ ಪ್ರಾಜೆಕ್ಟ್ 'ರಾಜರಥ'ಕ್ಕೆ ಕೈ ಹಾಕಿರೋದು ತಿಳಿದ ವಿಚಾರ.

ಈಗಾಗಲೇ ಅರ್ಧದಷ್ಟು ಚಿತ್ರೀಕರಣ ಮುಗಿಸಿರುವ ನಿರ್ದೇಶಕ ಅನುಪ್ ಭಂಡಾರಿ ಅವರು, ಈ ಚಿತ್ರದ ಸಣ್ಣ ಝಲಕ್ ಅನ್ನು ಸಹೋದರ, ನಟ ನಿರುಪ್ ಭಂಡಾರಿ ಅವರ ಹುಟ್ಟುಹಬ್ಬಕ್ಕೆ ರಿಲೀಸ್ ಮಾಡುವುದಾಗಿ ಈ ಮೊದಲೇ ಘೋಷಣೆ ಮಾಡಿದ್ದರು.[ನಿರುಪ್ ಹುಟ್ಟುಹಬ್ಬಕ್ಕೆ ಅನುಪ್ ನಿಮಗೆ ಉಡುಗೊರೆ ಕೊಡ್ತಾರಂತೆ.!]


Watch Kannada Movie 'Rajaratha' special teaser

ಅದರಂತೆ ನಟ ನಿರುಪ್ ಭಂಡಾರಿ ಅವರ ಹುಟ್ಟುಹಬ್ಬವಾದ ಇಂದು (ಆಗಸ್ಟ್ 13) 'ರಾಜರಥ' ಚಿತ್ರದ ಸಣ್ಣ ತುಣುಕೊಂದನ್ನು ಅನುಪ್ ಅವರು ರಿಲೀಸ್ ಮಾಡಿದ್ದಾರೆ. ಸಿಂಪಲ್ ಆಗಿ ಮೋಷನ್ ಪೋಸ್ಟರ್ ನಂತಿರುವ ಈ ವಿಡಿಯೋದಲ್ಲಿ ನಟ ನಿರುಪ್ ಅವರನ್ನು ಫನ್ನಿ-ಫನ್ನಿಯಾಗಿ ಪರಿಚಯ ಮಾಡಿ ಕೊಡಲಾಗಿದೆ.[ಅನುಪ್ ಭಂಡಾರಿ 'ರಾಜರಥ' ಏರಿದ ರಾಣಿ ಅವಂತಿಕಾ ಶೆಟ್ಟಿ]


Watch Kannada Movie 'Rajaratha' special teaser

ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟ ನಿರುಪ್ ಭಂಡಾರಿ ಅವರಿಗೆ 'ರಾಜರಥ' ಚಿತ್ರತಂಡದಿಂದ ಶುಭಾಶಯ ಹೇಳುವ ನೆಪದಲ್ಲಿ ಈ ಸಣ್ಣ ಟೀಸರ್ ಬಿಡುಗಡೆ ಮಾಡಲಾಗಿದೆ. 'ರಾಜರಥ'ದ ಕಲರ್ ಫುಲ್ ವಿಡಿಯೋ ಇಲ್ಲಿದೆ ನೋಡಿ.....ಅಂದಹಾಗೆ ಈ ಚಿತ್ರದಲ್ಲಿ ನಟಿ ಅವಂತಿಕಾ ಶೆಟ್ಟಿ ಅವರೇ ಮತ್ತೆ ನಿರುಪ್ ಭಂಡಾರಿ ಅವರ ಜೊತೆ ಡ್ಯುಯೆಟ್ ಹಾಡಿದ್ದಾರೆ. 'ರಂಗಿತರಂಗ'ದಲ್ಲಿ ಕಳೆದುಕೊಂಡ ಇನಿಯನನ್ನು ಮತ್ತೆ 'ರಾಜರಥ'ದಲ್ಲಿ ಪಡೆಯಲು ಅವಂತಿಕಾ ಅವರು ಪಣ ತೊಟ್ಟಿದ್ದಾರೆ.[ಚಿತ್ರ ವಿಮರ್ಶೆ : 'ರಂಗಿತರಂಗ' ಬಲು ರೋಚಕ]

English summary
Watch Kannada Movie 'Rajaratha' Happy Birthday Nirup special teaser. Kannada Actor Nirup Bhandari, Kannada Actress Avanthika Shetty in the lead role. The movie is directed by Anup Bhandari.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada