Don't Miss!
- News
ಬಿಬಿಎಂಪಿ ವಾರ್ಡ್ ರಚನೆ ವಿವಾದ: ಮೀಸಲು ನಿಗದಿ ಅಂತಿಮಗೊಳಿಸದಂತೆ ಹೈಕೋರ್ಟ್ ತಾಕೀತು
- Lifestyle
Today Rashi Bhavishya: ಗುರುವಾರದ ದಿನ ಭವಿಷ್ಯ: ಮೇಷ, ಮೀನ ರಾಶಿಯವರು ವಾದಗಳಿಂದ ದೂರವಿರಿ
- Sports
ನ್ಯೂಜಿಲೆಂಡ್ ಕೇಂದ್ರೀಯ ಒಪ್ಪಂದದಿಂದ ಹೊರ ನಡೆದ ಟ್ರೆಂಟ್ ಬೌಲ್ಟ್! ಏಕೆ ಈ ನಿರ್ಧಾರ?
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ Z ಫೋಲ್ಡ್ 4 ಮತ್ತು ಗ್ಯಾಲಕ್ಸಿ Z ಫ್ಲಿಪ್ 4 ಫೋನ್ ಬಿಡುಗಡೆ!
- Automobiles
ನಮ್ಮ ಬೆಂಗಳೂರಿನಲ್ಲಿ ಬ್ಯಾಟರಿ ವಿನಿಮಯ ಕೇಂದ್ರಕ್ಕೆ ಚಾಲನೆ ನೀಡಿದ ಹೋಂಡಾ
- Finance
ಸೆನ್ಸೆಕ್ಸ್ ಕುಸಿತ, ನಿಫ್ಟಿ ಏರಿಕೆ: ಬುಧವಾರ ವಹಿವಾಟಿನ ಅಂತ್ಯ ಹೀಗಿದೆ
- Travel
ಭಾರತದಲ್ಲಿಯ 10 ಪ್ರಸಿದ್ದ ಹನುಮಂತ ದೇವರ ದೇವಾಲಯಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಟ್ರೈಲರ್: 'ರಥಾವರ'ದಲ್ಲಿ ಉಗ್ರರೂಪ ತಾಳಿದ ರೋರಿಂಗ್ ಸ್ಟಾರ್
'ಉಗ್ರಂ' ಚಿತ್ರದ ಭರ್ಜರಿ ಯಶಸ್ಸಿನ ನಂತರ 'ರಥಾವರ' ಚಿತ್ರದ ಮೂಲಕ ಮತ್ತೆ ಗಾಂಧಿನಗರಕ್ಕೆ ಹಿಂತಿರುಗಿರುವ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ಈ ವರ್ಷದ ಬಹುನಿರೀಕ್ಷಿತ 'ರಥಾವರ' ಚಿತ್ರದ ಖಡಕ್ ಟ್ರೈಲರ್ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ.
ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ಆಕ್ಷನ್-ಕಟ್ ಹೇಳಿರುವ ಭರ್ಜರಿ 'ರಥಾವರ' ಚಿತ್ರದ ಖಡಕ್ ಟ್ರೈಲರ್ ನಲ್ಲಿ 'ಉಗ್ರಂ' ನಟ ಶ್ರೀಮುರಳಿ ಅವರು ಮತ್ತೊಮ್ಮೆ ಉಗ್ರಪ್ರತಾಪಿಯಾಗಿ ಮಿಂಚಿದ್ದು, ನಟನೆಯಲ್ಲಿ ಮತ್ತದೇ ಹಳೇ ಖದರ್ ತೋರಿದ್ದಾರೆ.
'ಉಗ್ರಂ' ದೊಡ್ಡ ಬ್ರೇಕ್ ಕೊಟ್ಟ ಮೇಲೆ ನಟ ಶ್ರೀಮುರಳಿ ಅವರು ಸ್ಯಾಂಡಲ್ ವುಡ್ ನಲ್ಲಿ ಸಖತ್ ಶೈನ್ ಆಗಿ 'ಉಗ್ರಂ' ಶ್ರೀಮುರಳೀ ಎಂದೇ ಖ್ಯಾತಿ ಗಳಿಸಿದ್ದು, ಇದೀಗ ಅದೇ ಸ್ಟೈಲ್ ನಲ್ಲಿ 'ರಥಾವರ' ಕೂಡ ಮೂಡಿಬಂದಿದೆ.[ಡಿಸೆಂಬರ್ 4ಕ್ಕೆ ನಿಮ್ಮ ಮುಂದೆ 'ರಥಾವರ'ನ ದರ್ಶನ..!]
ಆಕ್ಷನ್-ಥ್ರಿಲ್ಲರ್ 'ರಥಾವರ' ಚಿತ್ರ ಡಿಸೆಂಬರ್ 4 ರಂದು ರಾಜ್ಯಾದ್ಯಂತ ಭರ್ಜರಿಯಾಗಿ ತೆರೆ ಕಾಣುತ್ತಿದೆ. ಇದೇ ಮೊದಲ ಬಾರಿಗೆ ರೋರಿಂಗ್ ಸ್ಟಾರ್ ಶ್ರೀಮುರಳಿ ಜೊತೆ ಗುಳಿಕೆನ್ನೆ ಬೆಡಗಿ ರಚಿತಾ ರಾಮ್ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಖಳನಟನಾಗಿ ಖ್ಯಾತಿ ಗಳಿಸಿರುವ 'ಆರ್ಮುಗಂ' ರವಿಶಂಕರ್ ಹಾಗೂ 'ಉಗ್ರಂ' ನಟ ಶ್ರೀಮುರಳಿ ಅವರ ಜುಗಲ್ ಬಂದಿಗೆ ಪ್ರೇಕ್ಷಕರು ಹಾಗೂ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಇನ್ನು ನಟಿ ರಚಿತಾ ರಾಮ್ ಅವರ ಬಬ್ಲಿ ಆಕ್ಟ್ ಗೆ ಪ್ರೇಕ್ಷಕರು ಫಿದಾ ಆದರೆ, ನಟ ಶ್ರಿಮುರಳಿ ಅವರ ಸಖತ್ ಸ್ಟಂಟ್ಸ್ ಹಾಗೂ ಖಡಕ್ ಡೈಲಾಗ್, ಹಾಗೂ ಡಿಪರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನದಲ್ಲಿ ಮುರಳಿ ಅವರ ಭರ್ಜರಿ ಫೈಟ್ ನೋಡಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
"ಯಾರಾದ್ರು ಸರಿನೇ ಟಾರ್ ಡ್ರಮ್ ಗೆ ಹಾಕಿ ಮುಚ್ತಾ ಇರೋದೇ', ಅನ್ನೋ ಮುರಳಿ ಅವರ ಖಡಕ್ ಡೈಲಾಗ್ ಟ್ರೈಲರ್ ನ ಹೈಲೈಟ್. ಇನ್ನು ಖಳನಟನಾಗಿ ಮಿಂಚಿರುವ ರವಿಶಂಕರ್ ಅವರ 'ಆ ಶಬರಿಮಲೆ ಮಣಿಕಂಠ ಹುಲಿ ಮೇಲೆ ಬರ್ತಾನೆ, ಈ ಎಮ್ ಎಲ್ ಎ ಮಣಿಕಂಠ ಎಮ್ಮೆ ಮೇಲ್ ಬರ್ತಾನೆ', ಎಲ್ಲೋ ನನ್ 'ರಥಾವರ' ಎಂಬ ಆರ್ಭಟದ ಡೈಲಾಗ್ ಗೆ ಪ್ರೇಕ್ಷಕರು ವಿಶಲ್ ಹೊಡೆಯೋದು ಪಕ್ಕಾ.[ವಾವ್! 'ರಥಾವರ' ಶ್ರೀಮುರಳಿ ವಾಯ್ಸ್ ನಲ್ಲಿ, ಈ ಹಾಡು ಕೇಳಿದ್ರಾ?]
ಇನ್ನುಳಿದಂತೆ ಕಾಮಿಡಿ ನಟ ಸಾಧುಕೋಕಿಲ ಹಾಗೂ ಚಿಕ್ಕಣ್ಣ ಅವರ ಕಾಮಿಡಿ ಜೊತೆಗೆ ಶ್ರೀಮುರಳಿ ಹಾಗೂ ನಟಿ ರಚಿತಾ ರಾಮ್ ಅವರ ರೊಮ್ಯಾನ್ಸ್ ಸೇರಿದಂತೆ ಒಟ್ಟಾರೆ 'ರಥಾವರ' ಫುಲ್ ಫ್ಯಾಮಿಲಿ ಪ್ಯಾಕೇಜ್.
ನಾಗಚಂದ್ರ ಅರ್ಪಿಸುವ, ಧರ್ಮಶ್ರೀ ಎಂಟರ್ ಪ್ರೈಸಸ್ ಅಡಿಯಲ್ಲಿ ಮೂಡಿಬಂದಿರುವ, ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ಆಕ್ಷನ್-ಕಟ್ ಹೇಳಿರುವ ರೋರಿಂಗ್ ಸ್ಟಾರ್ 'ರಥಾವರ'ನ ಜಬರ್ದಸ್ತ್ ಟ್ರೈಲರ್ ಇಲ್ಲಿದೆ ನೋಡಿ..