»   » ರಕ್ಷಿತ್ ಶೆಟ್ಟಿ 'ರಿಕ್ಕಿ' ಅವತಾರ್ ಸಿನ್ಮಾ ಮ್ಯಾಷ್ ಅಪ್ ಸ್ಟೈಲ್

ರಕ್ಷಿತ್ ಶೆಟ್ಟಿ 'ರಿಕ್ಕಿ' ಅವತಾರ್ ಸಿನ್ಮಾ ಮ್ಯಾಷ್ ಅಪ್ ಸ್ಟೈಲ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ನಟ ಕಮ್ ನಿರ್ದೇಶಕ ರಕ್ಷಿತ್ ಶೆಟ್ಟಿ ಹಾಗು ಹರಿಪ್ರಿಯಾ ಪ್ರಮುಖ ಪಾತ್ರಧಾರಿಗಳಾಗಿರುವ ಬಹುನಿರೀಕ್ಷಿತ 'ರಿಕ್ಕಿ' ಚಿತ್ರದ ಭರ್ಜರಿ ಟ್ರೈಲರ್ ಬಿಡುಗಡೆಯಾಗಿ ಭರ್ಜರಿ ಜನಮನ್ನಣೆ ಗಳಿಸಿದೆ. ರಕ್ಷಿತ್ ಅವರು ನಟಿಸಿ, ನಿರ್ದೇಶಿಸಿದ 'ಉಳಿದವರು ಕಂಡಂತೆ' ಚಿತ್ರದಂತೆ ಈ ಚಿತ್ರದ ಬಗ್ಗೆ ಕೂಡಾ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಗಳಿವೆ.

ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಆಕ್ಷನ್-ಕಟ್ ಹೇಳಿರುವ ರಿಕ್ಕಿ ಟ್ರೈಲರ್ ಸಖತ್ ಆಗಿ ಮೂಡಿ ಬಂದಿರುವುದಂತೂ ನಿಜ. ಉಳಿದವರು ಕಂಡಂತೆ ಚಿತ್ರದ ಪೋಸ್ಟರ್ ಗಳನ್ನು ಬಳಸಿಕೊಂಡು ಮೀಮ್ಸ್, ಟ್ರಾಲ್ ಪೋಸ್ಟರ್ ಮಾಡಿ ಫ್ಯಾನ್ಸ್ ಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡಿದ್ದರು. ವಿಡಿಯೋಗಳಲ್ಲಿನ ಆಕರ್ಷಕ ಡೈಲಾಗ್ ಗಳು ಡಬ್ ಸ್ಮಾಶ್ ಆಗಿ ಜನಪ್ರಿಯಗೊಂಡಿದ್ದವು.ಈಗ ರಿಕ್ಕಿ ಸರದಿ.

Watch Ricky Mashup video by a fan in Avatar Style

'ಬರಡಾದ ಆಗಸಕೆ ಕಾಡಿರುವುದು ಒಂದು ನೆನಪು, ಹುಡುಕಾಟದ ನೆಪದಲ್ಲಿ ಭುವಿಗೆ ಬಂದಿಳಿದು' ಸುಂದರದ ಕವನದ ಸಾಲಿನೊಂದಿಗೆ ಆರಂಭವಾಗುವ ಟ್ರೈಲರ್ ಕೊನೆಯಲ್ಲಿ"ನೆತ್ತರ ಹನಿ ಮಣ್ಣಿಗೆ ಬಿದ್ದು ಆಕಾಶ ಕೆಂಪಾಗಿ ನೋವಿಗೆ ಹೊಸ ಅರ್ಥ ಬಂದು ಮನದಲ್ಲಿ ಈಗ ಕ್ರಾಂತಿಯ ಬೆಂಕಿ, ಸೂರಿನ ಸುಖವಿಲ್ಲ, ನಿದ್ದೆಯ ಕನಸಿಲ್ಲ,' ಈ ಕಾಡೇನು ನಿಮ್ಮ ಅಪ್ಪನ ಮನೆಯ ಆಸ್ತಿನಾ? ಎಂಬ ಪಂಚಿಂಗ್ ಡೈಲಾಗ್ ಕೇಳಿ ಬರುತ್ತದೆ.

ಈಗ ಹಾಲಿವುಡ್ ಚಿತ್ರ ಅವತಾರ್ ಶೈಲಿಯಲ್ಲಿ ಅಭಿಮಾನಿ ಅಕ್ಷಯ್ ಎಂಬುವರು ರಿಕ್ಕಿ ಟ್ರೈಲರ್ ಅನ್ನು ರೂಪಿಸಿದ್ದಾರೆ. ರಿಕ್ಕಿ ಚಿತ್ರದ ಡೈಲಾಗ್ ಗಳು ಅವತಾರ್ ಚಿತ್ರದ ಪಾತ್ರಧಾರಿಗಳಿಗೆ ಹೊಂದಿಕೆಯಾಗುವಂತಿದೆ.


ಅಂದ ಹಾಗೆ ರಿಕ್ಕಿ ಟ್ರೈಲರ್ ಈ ಸಮಯಕ್ಕೆ 3,38,187 ಬಾರಿ ವೀಕ್ಷಣೆಯಾಗಿದೆ. ಮ್ಯಾಷ್ ಅಪ್ ವಿಡಿಯೋದ ವೀಕ್ಷಣೆ ಸಾವಿರ ಹಿಟ್ಸ್ ದಾಟಿದೆ. ರಿಕ್ಕಿ ಟ್ರೈಲರ್ ಹಾಗೂ ಮ್ಯಾಷ್ ಅಪ್ ಸ್ಟೈಲ್ ನಲ್ಲಿರುವ ವಿಡಿಯೋ ನೋಡಿ
English summary
Kannada movie 'Ricky' Official Trailer has already got overwhelming response. Now, Here is a fan made Mashup video in which Avatar movie trailer is matched with Ricky. Kannada Actor Rakshit Shetty, Actress Haripriya in the lead role. The movie is directed by Rishab Shetty.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada