ಅರುಣ್ ಸಾಗರ್ 'ಭಂಗಿರಂಗ' ಭಯಂಕರ ಅವತಾರ
'ಬಿಗ್ ಬಾಸ್' ರಿಯಾಲಿಟಿ ಶೋ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ಅರುಣ್ ಸಾಗರ್ ಇದೀಗ ಗಾಂಧಿನಗರದ ಬಹುಬೇಡಿಕೆಯ ಪ್ರತಿಭೆ. 'ಬಿಗ್ ಬಾಸ್' ನಂತ್ರ ಬೆಳ್ಳಿತೆರೆಯಲ್ಲೇ ಬಿಜಿಯಾಗಿರುವ ನಟ ಅರುಣ್ ಸಾಗರ್ ಅಭಿನಯಿಸಿರುವ ಹೊಚ್ಚ ಹೊಸ ಸಿನಿಮಾ 'ರಿಂಗ್ ಮಾಸ್ಟರ್'.
ಮೊದಲು 'ಭಂಗಿರಂಗ' ಶೀರ್ಷಿಕೆ ಅಡಿ ಅನೌನ್ಸ್ ಆಗಿದ್ದ ಈ ಚಿತ್ರಕ್ಕೆ 'ರಿಂಗ್ ಮಾಸ್ಟರ್' ಅಂತ ಈಗ ಟೈಟಲ್ ಫೈನಲ್ ಆಗಿದೆ. ಸದ್ದಿಲ್ಲದೇ ಶೂಟಿಂಗ್ ಪ್ಯಾಕಪ್ ಮಾಡಿರುವ ಚಿತ್ರತಂಡ ಇದೀಗ ಚಿತ್ರದ ಮೊದಲ ನೋಟದ ಝಲಕ್ ಬಿಡುಗಡೆ ಮಾಡಿದೆ. ಆ ಟ್ರೈಲರ್ ಇಲ್ಲಿದೆ ನೋಡಿ.....
'ಬೆಂಕಿಪಟ್ಣ' ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿದ್ದ 'ಬಿಗ್ ಬಾಸ್' ಖ್ಯಾತಿಯ ಅರುಣ್ ಸಾಗರ್ ಮತ್ತು ಅನುಶ್ರೀ, 'ರಿಂಗ್ ಮಾಸ್ಟರ್' ನಲ್ಲೂ ಇದ್ದಾರೆ. ಮೊದಲ ನೋಟಕ್ಕೆ ಕಂಪ್ಲೀಟ್ ಥ್ರಿಲ್ಲರ್ ಚಿತ್ರದಂತೆ ಕಾಣುವ 'ರಿಂಗ್ ಮಾಸ್ಟರ್'ಗೆ ನವಪ್ರತಿಭೆ ವಿಶ್ರುತ್ ನಾಯಕ್ ಆಕ್ಷನ್ ಕಟ್ ಹೇಳಿದ್ದಾರೆ. [ಅರುಣ್ ಸಾಗರ್ ಈಗ 'ರಿಂಗ್ ಮಾಸ್ಟರ್']
ಒಂದು ಇಡೀ ರಾತ್ರಿ ನಡೆಯುವ ಕಥೆ ಇದಾಗಿದ್ದು, ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ನೀಡಿದ್ದಾರೆ. 'ರಿಂಗ್ ಮಾಸ್ಟರ್' ತೆರೆಗೆ ಬರುವುದಕ್ಕೆ ಇನ್ನೂ ಸಮಯ ಇದೆ. ಅಲ್ಲಿವರೆಗೂ ಟ್ರೈಲರ್ ನೋಡುತ್ತಿರಿ.
English summary
Kannada Actor Arun Sagar and Anushree starrer 'Ring Master' movie trailer is out. Watch the video here.


Click it and Unblock the Notifications
