»   » 'ರಿಂಗ್ ರೋಡ್' ಚಿತ್ರದ ಅಸಲಿ ಕಥೆಯೇನು?

'ರಿಂಗ್ ರೋಡ್' ಚಿತ್ರದ ಅಸಲಿ ಕಥೆಯೇನು?

Posted By:
Subscribe to Filmibeat Kannada

ನೈಜ ಕಥೆ ಆಧಾರಿತ ಸ್ಯಾಂಡಲ್ ವುಡ್ ಚಿತ್ರ 'ರಿಂಗ್ ರೋಡ್' ಸುಮಾ(ಶುಭಾ) ಟೈಟಲ್ ಸಮಸ್ಯೆ ಗಳಿಂದ ಸೆನ್ಸಾರ್ ಬೋರ್ಡ್ ಕೆಂಗಣ್ಣಿಗೆ ಗುರಿಯಾಗಿತ್ತು. ಆನಂತರ ಅದು ಸರಿಯಾಗಿ ಕೇವಲ 'ರಿಂಗ್ ರೋಡ್' ಅಂತಾಗಿ ಎಲ್ಲಾ ವಿವಾದಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದು ಈಗ ಹಳೆ ಸುದ್ದಿ.

ಇದೀಗ ಪ್ರಿಯಾ ಬೆಳ್ಳಿಯಪ್ಪ ಆಕ್ಷನ್-ಕಟ್ ಹೇಳಿರುವ 'ರಿಂಗ್ ರೋಡ್' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಕೊನೆಗೂ ಈ ಚಿತ್ರಕ್ಕೆ ಈ ತಿಂಗಳಿನಲ್ಲಿಯೇ ಬಿಡುಗಡೆ ಭಾಗ್ಯ ದೊರಕಲಿದೆ.['ರಿಂಗ್ ರೋಡ್ ಸುಮ' ಆದ ರಿಂಗ್ ರೋಡ್ ಶುಭ]


ನಿರ್ದೇಶನ-ನಿರ್ಮಾಣ-ಛಾಯಾಗ್ರಹಣ-ಸಂಕಲನ ಸೇರಿದಂತೆ ಪ್ರೊಡಕ್ಷನ್ ನ ಪ್ರತಿ ಹಂತದಲ್ಲೂ ಹೆಣ್ಮಕ್ಕಳ್ಳೇ ದರ್ಬಾರ್ ಮಾಡಿರುವ ಸಿನಿಮಾ ಇದು. ಮುಖ್ಯ ಭೂಮಿಕೆಯಲ್ಲಿ ನವ ಪ್ರತಿಭೆ ಖುಷಿ ಅಭಿನಯಿಸಿರುವ ಈ ಚಿತ್ರದಲ್ಲಿ ದುನಿಯಾ ವಿಜಯ್, ನಿಖಿತಾ ತುಕ್ರಾಲ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ರಿಂಗ್ ರೋಡ್' ಚಿತ್ರದ ಟ್ರೈಲರ್ ಇಲ್ಲಿದೆ ನೋಡಿ...[ಟೈಟಲ್ ಟ್ರಬಲ್ ನಲ್ಲಿ ಮತ್ತೆ 'ರಿಂಗ್ ರೋಡ್' ಸುಮ]


Watch Kannada movie 'Ring Road' official trailer

'ಹೇಳಿದ್ದು ಸುಳ್ಳಾಗಬಹುದು', 'ಕೇಳಿದ್ದು ಸುಳ್ಳಾಗಬಹುದು', 'ನೋಡಿದ್ದು ಸುಳ್ಳಾಗಬಹುದು', 'ಕೆಲವು ಸತ್ಯಗಳು ಸುಳ್ಳಾಗೇ ಉಳಿದು ಬಿಡಬಹುದು'....ಹೀಗೆ ಸತ್ಯಾನ್ವೇಷನೆಯಲ್ಲಿ ತೊಡಗಿರುವ 'ರಿಂಗ್ ರೋಡ್' ಟ್ರೈಲರ್ ನೋಡ್ತಿದ್ರೆ, ಇದು ಹಂತಕಿಯೊಬ್ಬಳ ನಿಜ ಬದುಕಿನ ಕಥೆ ಅಂತ ಫೀಲ್ ಬರುವುದು ಖಂಡಿತ.[ಶುಭ ಅನ್ನಲ್ಲ, ಸುಮ ಇಲ್ಲ.! ಏನಿದ್ರು 'ರಿಂಗ್ ರೋಡ್' ಮಾತ್ರ]


ಆದ್ರೆ, ಚಿತ್ರದ ಪೂರ್ಣ ಕಥೆಯೇನು, 'ರಿಂಗ್ ರೋಡ್' ಚಿತ್ರಕ್ಕೂ 'ಲಾಯರ್ ಶುಭ' ಬದುಕಿನಲ್ಲಾದ ಘಟನೆಗೂ ಲಿಂಕ್ ಇದ್ಯಾ ಅನ್ನೋದನ್ನ ತಿಳಿದುಕೊಳ್ಳೋಕೆ ಚಿತ್ರ ಬಿಡುಗಡೆಯಾಗುವವರೆಗೂ ಸ್ವಲ್ಪ ವೇಯ್ಟ್ ಮಾಡಿ.

English summary
Kannada Movie 'Ring Road' official trailer is released. 'Ring Road' features Kannada actor Duniya Vijay, Kannada Actress Nikitha, Kushie in the lead role. The movie is directed by Priya Belliappa.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada