ದುನಿಯಾ ವಿಜಿ 'ಆರ್ ಎಕ್ಸ್' ಸೂರಿ ಜಬರ್ದಸ್ತ್ ಟ್ರೈಲರ್ ಔಟ್

By Suneetha

ದುನಿಯಾ ವಿಜಯ್ ಅವರ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ಆರ್.ಎಕ್ಸ್' ಸೂರಿ ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡ್ತಾ ಇದೆ. ಇದೀಗ ಶ್ರೀ ಜೈ ಆಕ್ಷನ್-ಕಟ್ ಹೇಳಿರುವ ನಿಜ ಘಟನೆಯಾಧರಿತ 'ಆರ್.ಎಕ್ಸ್.ಸೂರಿ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

ದುನಿಯಾ ವಿಜಯ್, ಆಕಾಂಕ್ಷ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ 'ಆರ್.ಎಕ್ಸ್ ಸೂರಿ' ಚಿತ್ರದ ಜಬರ್ದಸ್ತ್ ಟ್ರೈಲರ್ ಇಲ್ಲಿದೆ ನೊಡಿ......

ಸುರೇಶ್ ಆರ್ಟ್ ಅರ್ಪಿಸುವ ಆರ್.ಎಕ್ಸ್.ಸೂರಿ' ಚಿತ್ರದಲ್ಲಿ ವಿಜಯ್ ಸಖತ್ ಮಾಸ್ ಲುಕ್ ನಲ್ಲಿ ಮಿಂಚಿದ್ದಾರೆ. 'ಖದರ್ ತಾಕತ್ತು ,ಕರಾಬ್ ಮೀಟ್ರು, ಪಂಚಿಂಗ್ ಫೈಟ್ರು', 'ಈ ಸೂರಿ ಮನಸ್ಸು ಮಾಡಿದ್ರೆ, ಚಿತ್ತಾಗಿ ಚಟ್ಟದ ಮೇಲೆ ಹೂವಿನ ಹಾರ ಹಾಕಿಬಿಡ್ತಿನಿ', ಹೀಗೆ ಖಡಕ್ ಡೈಲಾಗ್ಸ್ ಇರುವ 'ಆರ್.ಎಕ್ಸ್.ಸೂರಿ' ಚಿತ್ರದ ಟ್ರೈಲರ್ ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ.

ಕೆ.ಎ.ಸುರೇಶ್ ಬಂಡವಾಳ ಹಾಕಿರುವ 'ಆರ್ ಎಕ್ಸ್ ಸೂರಿ', ವೈಲ್ಡ್ ಅಂಡ್ ಮೈಲ್ಡ್ ಸ್ಟೋರಿಯಲ್ಲಿ ದುನಿಯಾ ವಿಜಿ ನಟಿ ಆಕಾಂಕ್ಷ ಜೊತೆ ರೋಮಾನ್ಸ್ ಮಾಡಿದ್ದಾರೆ. ಜೊತೆಗೆ ಅರ್ಜುನ್ ಜನ್ಯಾ ಮ್ಯೂಸಿಕ್ ಕಂಪೋಸಿಷನ್ ನಲ್ಲಿ 'ಆರ್.ಎಕ್ಸ್ ಸೂರಿ' ಹಾಡುಗಳು ಚೆನ್ನಾಗಿ ಮೂಡಿಬಂದಿವೆ.

ಒಟ್ಟಾರೆ ಹೇಳಬೇಕೆಂದರೆ ಚಿತ್ರದಲ್ಲಿ ಜಾಸ್ತಿ ಫೈಟ್, ಮಚ್ಚು, ಲಾಂಗು ಚಾಕು, ಚೂರಿಗಳೇ ಕಂಡುಬರುತ್ತಿದ್ದು, ದುನಿಯಾ ವಿಜಿ ಮತ್ತೊಮ್ಮೆ 'ದುನಿಯಾ' ಚಿತ್ರವನ್ನು ಪ್ರೇಕ್ಷಕರಿಗೆ ತೋರಿಸಿದಂತಿದೆ.

ವಿಶೇಷವಾಗಿ ಖಳನಾಯಕ ರವಿಶಂಕರ್ ಅವರ ಅದ್ಭುತ ನಟನೆ ಟ್ರೈಲರ್ ನ ಇನ್ನೊಂದು ಹೈಲೈಟ್. ಅಂತೂ ಇಂತೂ ಸ್ವಲ್ಪ ರೋಮಾನ್ಸ್, ಜಾಸ್ತಿ ಫೈಟ್ ಇರುವ 'ಆರ್.ಎಕ್ಸ್.ಸೂರಿ' ದುನಿಯಾ ವಿಜಿ ಅಭಿಮಾನಿಗಳಿಗೆ ಇಷ್ಟವಾಗಬಹುದು.

ಚಿತ್ರದಲ್ಲಿ ಶೋಭರಾಜ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಮಿಂಚಿದ್ದು, 'ಬಿಡ್ಡಾ' ಆದಿ ಲೋಕೇಶ್, ವಿನಯಾ ಪ್ರಸಾದ್ ಮುಂತಾದವರ ತಾರಾಗಣವಿದೆ. ಡಿಫರೆಂಟ್ ಡ್ಯಾನಿ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿದ್ದಾರೆ.

More from Filmibeat

English summary
Kannada Movie 'RX Soori' official trailer is released. 'RX Soori' features Kannada actor Duniya vijay, Actress Akanksha in the lead role. The movie is directed by Shri Jai
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X