»   » 'ಸಂತು' ಟ್ರೈಲರ್: ರೋಮ್ಯಾನ್ಸ್, ಡ್ಯುಯೆಟ್, ಫೈಟ್ ಎಲ್ಲವೂ ಭರ್ಜರಿಯಾಗಿದೆ

'ಸಂತು' ಟ್ರೈಲರ್: ರೋಮ್ಯಾನ್ಸ್, ಡ್ಯುಯೆಟ್, ಫೈಟ್ ಎಲ್ಲವೂ ಭರ್ಜರಿಯಾಗಿದೆ

Posted By:
Subscribe to Filmibeat Kannada

ಕಾತರದಿಂದ ಕಾಯುತ್ತಿದ್ದ ಯಶ್ ಅಭಿಮಾನಿಗಳ ಕಾಯುವಿಕೆಗೆ ಫುಲ್ ಸ್ಟಾಪ್ ಬಿದ್ದಿದೆ. ಬಹು ನಿರೀಕ್ಷಿತ 'ಸಂತು Straight Forward' ಚಿತ್ರದ ಅದ್ಧೂರಿ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದೆ.

ಚಿತ್ರದ ಟ್ರೈಲರ್ ನೋಡುತ್ತಿದ್ದರೆ, ಫೈಟ್ ನಲ್ಲಿ ಎಂದಿನಂತೆ ರಾಕಿಂಗ್ ಸ್ಟಾರ್ ಯಶ್ ಅವರು ರಾಕ್ ಆಗಿದ್ದಾರೆ. ಡ್ಯಾನ್ಸ್ ಮತ್ತು ತಮ್ಮ ಮುಖ ಭಾವದಲ್ಲಿ ಯಶ್ ಅವರು ಎಂದಿಗಿಂತ ಕೊಂಚ ಜಾಸ್ತಿ ಕ್ಯೂಟ್-ಕ್ಯೂಟ್ ಎನಿಸಿಕೊಳ್ಳುತ್ತಾರೆ.[ಯಾರಪ್ಪಾ ಹೇಳಿದ್ದು 'ಸಂತು Straight Forward' ರೀಮೇಕ್ ಸಿನಿಮಾ ಅಂತ?]


Watch Kannada Movie 'Santhu Straight Forward' Official Trailer

ಇನ್ನು ಯಶ್ ಅವರ ಭಾವಿ ಪತ್ನಿ ಪ್ರಿನ್ಸಸ್ ರಾಧಿಕಾ ಪಂಡಿತ್ ಅವರ ಬಗ್ಗೆ ಹೇಳೋದೇ ಬೇಡ, ಸಖತ್ ಫನ್ನಿಯಾಗಿ ಯಶ್ ಅವರ ತಂದೆ-ತಾಯಿಯನ್ನು ಕಾಡುತ್ತಾರೆ. ಮುದ್ದಾದ ಈ ಜೋಡಿಯ ರೋಮ್ಯಾನ್ಸ್ ಅಭಿಮಾನಿಗಳ ಮನಸ್ಸಿಗೆ ಖಂಡಿತ ಮುದ ನೀಡುತ್ತೆ.


ಸ್ಟೈಲಿಷ್ ವಿಲನ್ ಆಗಿ ಬಹುಭಾಷಾ ನಟ ಶ್ಯಾಮ್ ಅವರು ಯಶ್ ಗಿಂತ ತಾವೇನೂ ಕಡಿಮೆ ಇಲ್ಲ ಎನ್ನುವ ರೇಂಜಿಗೆ ಮಿಂಚಿದ್ದಾರೆ. ಜೊತೆಗೆ ಯಶ್ ಅವರ ಇಂಟ್ರೊಡಕ್ಷನ್ ಹಾಡಂತೂ ಚಿಂದಿ. ಸ್ಯಾಂಡಲ್ ವುಡ್ ನ ಟಾಪ್ ವಿಲನ್ ಗಳ ಜೊತೆ ಯಶ್ ಅವರನ್ನು ನಿರ್ದೇಶಕರು ಪರಿಚಯ ಮಾಡಿ ಕೊಡುತ್ತಾರೆ.['ಸಂತು' ಚಿತ್ರದ ಕಡೆಯಿಂದ ಬಂದ ಇನ್ನೊಂದು ದಾಖಲೆ ಸುದ್ದಿ]


Watch Kannada Movie 'Santhu Straight Forward' Official Trailer

ಒಟ್ನಲ್ಲಿ ಯಶ್ ಅವರ ಇಮೇಜ್ ಗೆ ತಕ್ಕಂತೆ, ಬಿಲ್ಡಪ್, ರೋಮ್ಯಾನ್ಸ್, ಕಾಮಿಡಿ, ಫ್ಯಾಮಿಲಿ ಸೆಂಟಿಮೆಂಟ್ ಎಲ್ಲವನ್ನೂ ಹದವಾಗಿ ಬೆರೆಸಿರುವ ನಿರ್ದೇಶಕ ಮಹೇಶ್ ರಾವ್, ಪಕ್ಕಾ ಎಂರ್ಟಟೈನರ್ ಸಿನಿಮಾ ಕೊಟ್ಟಿದ್ದಾರೆ ಅನ್ನೋ ಸುಳಿವು 'ಸಂತು Straight Forward' ಚಿತ್ರದ ಟ್ರೈಲರ್ ಮೂಲಕ ಸಿಗುತ್ತಿದೆ.[ಸೆನ್ಸಾರ್ ನಲ್ಲಿ 'ಸಂತು'ಗೆ ಕ್ಲೀನ್ ಚಿಟ್, ಅ.28ಕ್ಕೆ ಅಬ್ಬರ ಶುರು]


ಕೆ.ಮಂಜು ನಿರ್ಮಾಣದ ಈ ಸಿನಿಮಾ ಇದೇ ಶುಕ್ರವಾರ (ಅಕ್ಟೋಬರ್ 28) ದೀಪಾವಳಿ ಹಬ್ಬದ ದಿನದ ತೆರೆ ಕಾಣುತ್ತಿದೆ. ಅಂತೂ-ಇಂತೂ ಯಶ್ ಅಭಿಮಾನಿಗಳು ಈ ಬಾರಿ ಭರ್ಜರಿಯಾಗಿ 'ಸಂತು' ಪಟಾಕಿ ಸಿಡಿಸಲಿದ್ದಾರೆ. ಸದ್ಯಕ್ಕೆ ಬಿಡುಗಡೆ ಆಗಿರೋ ಚಿತ್ರದ ಟ್ರೈಲರ್ ನೋಡಿ ಬಿಡಿ....


Watch Kannada Movie 'Santhu Straight Forward' Official Trailer

English summary
Watch Kannada Movie 'Santhu Straight Forward' Official Trailer. 'Santhu Straight Forward' starring Kannada Actor Yash, Kannada Actress Radhika Pandit, Actor Shaam and others. Music composed by V. Harikrishna. Directed by Mahesh Rao.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada