»   » 'ಸಂತು Straight Forward' ಚಿತ್ರದ ಆಕರ್ಷಕ ಟೀಸರ್ ನೋಡಿ

'ಸಂತು Straight Forward' ಚಿತ್ರದ ಆಕರ್ಷಕ ಟೀಸರ್ ನೋಡಿ

Posted By:
Subscribe to Filmibeat Kannada

ಯಶ್ ಮತ್ತು ರಾಧಿಕಾ ಪಂಡಿತ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಸಂತು Straight Forward' ಅಕ್ಟೋಬರ್ 28, ದೀಪಾವಳಿಗೆ ಬಿಡುಗಡೆ ಆಗೋದು ಪಕ್ಕಾ ಆಗಿದೆ.

ಇಷ್ಟು ದಿನಗಳ ಕಾಲ ಚಿತ್ರದ ಬಗ್ಗೆ ಯಾವುದೇ ವಿಡಿಯೋ ಅಥವಾ ಸಣ್ಣ ಸುಳಿವನ್ನೂ ಕೂಡ ಬಿಡುಗಡೆ ಮಾಡದ ಚಿತ್ರತಂಡ, ಇದೀಗ ಸಿನಿಮಾ ರಿಲೀಸ್ ಗೆ ನಾಲ್ಕು ದಿನ ಅನ್ನುವಾಗ ಒಂದೊಂದೇ ಟೀಸರ್ ತುಣುಕುಗಳನ್ನು ಬಿಡುಗಡೆ ಮಾಡಿದೆ.[ಸೆನ್ಸಾರ್ ನಲ್ಲಿ 'ಸಂತು'ಗೆ ಕ್ಲೀನ್ ಚಿಟ್, ಅ.28ಕ್ಕೆ ಅಬ್ಬರ ಶುರು]


Watch Kannada Movie 'Santhu Straight Forward' Teaser

ಮೊದಲು ಯಶ್ ಅವರು ತಮ್ಮ ತಾಯಿಯ ಬಳಿ, ಸೊಸೆ ಆಗೋಳು ಹೇಗಿರಬೇಕು ಅನ್ನೋ ಪ್ರಶ್ನೆ ಮಾಡುತ್ತಾರೆ. ಈ ಟೀಸರ್ ನಲ್ಲಂತೂ ರಾಧಿಕಾ ಪಂಡಿತ್ ಅವರು ಸಖತ್ ಫನ್ನಿಯಾಗಿ ಕಾಣಿಸಿಕೊಂಡಿರೋದು ವಿಶೇಷ. ಈ ಟೀಸರ್ ನೋಡುತ್ತಿದ್ದರೆ ಯಶ್-ರಾಧಿಕಾ ಕ್ಯೂಟ್ ಲವ್ ಸ್ಟೋರಿ ನೋಡೋ ಭಾಗ್ಯ ಮತ್ತೊಮ್ಮೆ ಪ್ರೇಕ್ಷಕರಿಗೆ ಸಿಗಲಿದೆ ಅಂತ್ಹೆನಿಸುತ್ತದೆ.


Watch Kannada Movie 'Santhu Straight Forward' Teaser

ಎರಡನೇ ಟೀಸರ್ ನಲ್ಲಿ ಯಶ್ ಅವರ ಖಡಕ್ ಡೈಲಾಗ್ ನೋಡೋಕೆ ಸಿಗುತ್ತೆ. "ತಲ್ವಾರ್ ಹಿಡ್ಕೊಂಡು ತಲೆ ತೆಗಿತೀನಿ ಅಂತ ಬಂದೋರ್ ಬಗ್ಗೇನೇ ತಲೆ ಕೆಡಿಸಿಕೊಂಡಿಲ್ಲ. ಯಾವುದ್ರೋ ಇದೆಲ್ಲಾ ಚಿಕ್ಕ ಮಕ್ಕಳ ತರ ವಿಕೆಟ್ ಬ್ಯಾಟ್ ಹಿಡ್ಕೊಂಡು ಬಂದಿದ್ದೀರಾ' ಅಂತ ಖಡಕ್ ಡೈಲಾಗ್ ಜೊತೆಗೆ ಅಷ್ಟೇ ಜಬರ್ದಸ್ತ್ ಫೈಟ್ ಕೂಡ ಮಾಡಿದ್ದಾರೆ ಯಶ್ ಅವರು.['ಸಂತು' ಅಲಿಯಾಸ್ ಯಶ್ ಕಡೆಯಿಂದ ಅಭಿಮಾನಿಗಳಿಗೆ ಸರ್ ಪ್ರೈಸ್]


Watch Kannada Movie 'Santhu Straight Forward' Teaser

ಮೂರನೇ ಟೀಸರ್ ತುಣುಕಿನಲ್ಲೂ ಯಶ್ ಅವರ 'ನುಗ್ಗೋ ಬುಲೆಟ್ ಗೆ ಯಾವನಿದ್ರೆ ಏನೋ, ನುಗ್ತಾ ಇರೋದೇ ಎದೆ ಸೀಳ್ತಾ ಇರೋದೆ' ಅನ್ನೋ ಖಡಕ್ ಡೈಲಾಗ್ ನಿಮಗೆ ಮನರಂಜನೆ ನೀಡುತ್ತೆ.


ಒಟ್ನಲ್ಲಿ ಲವ್ ಸ್ಟೋರಿ, ರೋಮ್ಯಾನ್ಸ್, ಸಖತ್ ಫೈಟ್, ಖಡಕ್ ಡೈಲಾಗ್ ಮತ್ತು ಪಕ್ಕಾ ಫ್ಯಾಮಿಲಿ ಎಂರ್ಟಟೈನರ್ ಆಗಿರೋ 'ಸಂತು Straight Forward' ಅಭಿಮಾನಿಗಳಿಗೆ ಭರಪೂರ ಮನರಂಜನೆ ಕೊಡೋದು ಗ್ಯಾರೆಂಟಿ.


Watch Kannada Movie 'Santhu Straight Forward' Teaser

ಕೆ.ಮಂಜು ನಿರ್ಮಾಣದಲ್ಲಿ ಮೂಡಿಬಂದಿರೋ ಈ ಚಿತ್ರಕ್ಕೆ ಮಹೇಶ್ ರಾವ್ ನಿರ್ದೇಶನ ಮಾಡಿದ್ದಾರೆ. ನಟ ಶ್ಯಾಮ್ ಚಿತ್ರದಲ್ಲಿ ವಿಲನ್ ರೋಲ್ ಮಾಡಿದ್ದು, ದೇವರಾಜ್ ಮತ್ತಿತ್ತರರು ಪ್ರಮುಖ ಪಾತ್ರ ವಹಿಸಿದ್ದಾರೆ.


ಸದ್ಯಕ್ಕೆ ರಿಲೀಸ್ ಆಗಿರೋ 'ಸಂತು Straight Forward' ಚಿತ್ರದ ಟೀಸರ್ ಒಂದ್ಸಾರಿ ನೋಡ್ಕೊಂಡು ಬನ್ನಿ....


English summary
Watch Kannada Movie 'Santhu Straight Forward' Teaser. Kannada Actor Yash, Kannada Actress Radhika Pandit in the lead role. The Movie is directed by Mahesh Rao and Produced by K Manju.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada