»   » ಹೊಸಬರ 'ಸೆಲ್ಫಿ' ಸಿನಿಮಾ ನೋಡಿ ಕ್ಯಾನ್ಸರ್ ರೋಗಿಗಳಿಗೆ ನೆರವಾಗಿ

ಹೊಸಬರ 'ಸೆಲ್ಫಿ' ಸಿನಿಮಾ ನೋಡಿ ಕ್ಯಾನ್ಸರ್ ರೋಗಿಗಳಿಗೆ ನೆರವಾಗಿ

Posted By:
Subscribe to Filmibeat Kannada

ಬರೀ ಸಾಫ್ಟ್ ವೇರ್ ಇಂಜಿನಿಯರ್ ಗಳು ಸೇರಿಕೊಂಡು ಮಾಡಿರುವ 'ಸೆಲ್ಫಿ ಕ್ಲಿಕ್ ಕ್ಲಿಕ್ ನಲ್ಲಿ ಕಿಕ್' ಇಂದು (ಸೆಪ್ಟೆಂಬರ್ 2) ಇಡೀ ಕರ್ನಾಟಕದಾದ್ಯಂತ ಭರ್ಜರಿಯಾಗಿ ತೆರೆ ಕಂಡಿದೆ. ಚಿತ್ರಕ್ಕೆ ಫಣಿ ಕೊಟಪ್ರೊಲು ಆಕ್ಷನ್-ಕಟ್ ಹೇಳಿದ್ದು, ಟೆಕ್ಕಿ ನವೀನ್ ಕೈಪು ಅವರು ಬಂಡವಾಳ ಹೂಡಿದ್ದಾರೆ.

ಅಂದಹಾಗೆ 'ಸೆಲ್ಫಿ' ಚಿತ್ರದ ಕಲೆಕ್ಷನ್ ನಲ್ಲಿ ಅರ್ಧ ಭಾಗವನ್ನು ಕ್ಯಾನ್ಸರ್ ಫೌಂಡೇಶನ್ ಗೆ ನೀಡಲು ನಿರ್ಮಾಪಕ ನವೀನ್ ತೀರ್ಮಾನ ಮಾಡಿದ್ದಾರೆ. ಎಷ್ಟು ಒಳ್ಳೆ ಮನಸು ಅಲ್ವಾ.? ನಿರ್ಮಾಪಕರದು.[ದಾಖಲೆ ನಿರ್ಮಿಸಲು ಸಜ್ಜಾದ ಶುಭ ಶುಕ್ರವಾರ, ಭರ್ಜರಿ 8 ಸಿನಿಮಾ ತೆರೆಗೆ]

Watch Kannada Movie 'Selfie' and you will help a Cancer Patient

ಇಡೀ ಚಿತ್ರತಂಡ ಒಂದೊಳ್ಳೆ ಕೆಲಸವನ್ನು ಮಾಡುತ್ತಿದ್ದು, ಎಲ್ಲರೂ ಸಿನಿಮಾ ನೋಡಿ, ಹೊಸಬರನ್ನು ಗೆಲ್ಲಿಸಿ.

ನಿಜ ಜೀವನಾಧರಿತ ಕಥೆಯಾದ 'ಸೆಲ್ಫಿ' ಚಿತ್ರದಲ್ಲಿ 'ಸೆಲ್ಫಿ' ತೆಗೆಯುವಾಗ ಮರಣ ಹೊಂದಿದ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರ ರಹಸ್ಯ ಸಾವಿನ ಕುರಿತು ಹೇಳಲಾಗಿದೆ. ಸುಮಾರು ಎರಡು ವರ್ಷದಿಂದ ಟೆಕ್ಕಿಗಳು ಪಟ್ಟ ಶ್ರಮ ಇಂದು ತೆರೆಯ ಮೇಲೆ ಗೊತ್ತಾಗಲಿದೆ.

ಇಡೀ ಚಿತ್ರತಂಡ ಸಾಫ್ಟ್ ವೇರ್ ಇಂಜಿನಿಯರ್ ಗಳಾದ ಕಾರಣ ವಾರಾಂತ್ಯದಲ್ಲಿ ಮಾತ್ರ ಶೂಟಿಂಗ್ ನಡೆಸುತ್ತಿದ್ದರು.

Watch Kannada Movie 'Selfie' and you will help a Cancer Patient

ನಿರ್ಮಾಪಕ ನವೀನ್ ಅವರ ತಂದೆ ಮತ್ತು ಭಾವ ಕ್ಯಾನ್ಸರ್ ಖಾಯಿಲೆಯಿಂದ ಮರಣ ಹೊಂದಿದರಂತೆ. ಜೊತೆಗೆ ಆ ಸಮಯದಲ್ಲಿ ಚಿಕಿತ್ಸೆಗೆ ವೆಚ್ಚ ದುಬಾರಿಯಾಗಿತ್ತು. ಆದ್ದರಿಂದ ಈಗಲೂ ಕೆಲವರಿಗೆ ದುಡ್ಡು ಹೊಂದಿಸಲು ಸಾಧ್ಯವಾಗದೇ ಕ್ಯಾನ್ಸರ್ ಚಿಕಿತ್ಸೆ ಕೊಡಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಿನಿಮಾದಿಂದ ಬಂದ ಸ್ವಲ್ಪ ಮೊತ್ತವನ್ನು ಕ್ಯಾನ್ಸರ್ ಫೌಂಡೇಶನ್ ಗೆ ನೀಡಲು ನವೀನ್ ಮತ್ತು ತಂಡದವರು ನಿರ್ಧರಿಸಿದ್ದಾರೆ.

ಈಗಾಗಲೇ ಹಲವಾರು ಐಟಿ ಕಂಪೆನಿಯಲ್ಲಿ ಕೆಲಸ ಮಾಡುವವರು ಟಿಕೆಟ್ ಕಾಯ್ದಿರಿಸಿದ್ದಾರೆ. ಆದ್ದರಿಂದ ಹೊಸಬರ ಪ್ರಯತ್ನಕ್ಕೆ ಕನ್ನಡಿಗರಾದ ನಾವು ಪ್ರೋತ್ಸಾಹ ನೀಡೋಣ, ನೀವೇನಂತೀರಾ.?

English summary
Kannada Movie 'Selfie' crew has decided to donate a part of the collection to a cancer foundation. 'Selfie Click Click Nalli Kick', directed by Phani Kotaprolu, Produced by Navin Kaipu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada