»   » ವೇಗಕ್ಕೆ ವಾಯು, ಕೋಪಕ್ಕೆ ಅಗ್ನಿ, ನೋಡಿ 'ಶಿವಲಿಂಗ'

ವೇಗಕ್ಕೆ ವಾಯು, ಕೋಪಕ್ಕೆ ಅಗ್ನಿ, ನೋಡಿ 'ಶಿವಲಿಂಗ'

Posted By:
Subscribe to Filmibeat Kannada

ನಿನ್ನೆ ತಾನೇ ಹುಟ್ಟುಹಬ್ಬ ಆಚರಿಸಿಕೊಂಡ ಅಣ್ಣಾವ್ರ ಮಗ ಶಿವರಾಜ್ ಕುಮಾರ್ ಜನುಮದಿನದ ಸ್ಪೆಷಲ್, ಮತ್ತೊಂದು ಟೀಸರ್ ಬಿಡುಗಡೆಯಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ವೇದಿಕಾ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ 'ಶಿವಲಿಂಗ' ಚಿತ್ರದ ಟೀಸರ್ ನಿನ್ನೆ ಬಿಡುಗಡೆಯಾಗಿದೆ.

ನಿರ್ದೇಶಕ ಪಿ.ವಾಸು ಆಕ್ಷನ್-ಕಟ್ ಹೇಳಿರುವ 'ಶಿವಲಿಂಗ' ಚಿತ್ರದ ಟೀಸರ್ ನೀವೇ ನೋಡಿ..

Watch Kannada movie 'Shivalinga' official Teaser

'ಇನ್ ದಿ ಸೈಲೆನ್ಸ್ ಆಫ್ ದಿ ನೈಟ್', 'ಯೂ ಫೀಲ್ ದೆರ್ ಇಸ್ ಸಂಮ್ತಿಂಗ್', 'ವೆನ್ ಯೂ ಲುಕ್ ಬ್ಯಾಕ್' ಹೀಗೆ ಸಿಂಪಲ್ ಲೈನ್ ಗಳಿರುವ 'ಶಿವಲಿಂಗ' ಟೀಸರ್ ಪ್ರೇಕ್ಷಕರಿಗೆ ಭಾರಿ ಕುತೂಹಲ ಹುಟ್ಟಿಸಿದೆ. 'ಬೇಟೆಗಾರನೊಬ್ಬ ಹೊಂಟಿರುವ ಎಚ್ಚರಿಕೆ' ಎನ್ನುವ ಹಾಡಿನ ಸಾಲುಗಳಲ್ಲಿ 'ಶಿವಲಿಂಗ' ಕಥೆಯನ್ನ ಟೀಸರ್ ಹೇಳ ಹೊರಟಿದೆ.[ಶಿವಣ್ಣನ ಮನಮೋಹಕ ಸಿನಿಮಾಗಳ ಲಿಸ್ಟ್ ನೋಡಿದ್ದೀರಾ?]

'ವೇಗದಲ್ಲಿ ವಾಯುಲಿಂಗ, ಕೋಪದಲ್ಲಿ ಅಗ್ನಿಲಿಂಗ, ನುಗ್ಗಿ ಬಂದ ಪದಳ ಲಿಂಗ, ಬಂದ ಬಂದ 'ಶಿವಲಿಂಗ' ಅಂತ 'ಕರುನಾಡ ಚಕ್ರವರ್ತಿಯ' ಗ್ರ್ಯಾಂಡ್ ಎಂಟ್ರಿ ಟೀಸರ್ ನಲ್ಲಿ ಸಖತ್ ಹೈಲೈಟ್ ಆಗುತ್ತಿದೆ.[ವೀರಪ್ಪನ್ ಕೊಲ್ಲೋಕೆ ಶಿವರಾಜ್ ಕುಮಾರ್ ಸಿದ್ಧ]

ಕೆ.ಎ.ಸುರೇಶ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ 'ಶಿವಲಿಂಗ' ಚಿತ್ರಕ್ಕೆ ವಿ.ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಇನ್ನುಳಿದಂತೆ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಹೇ ಮಿಸ್ಟರ್ ಬಾಲು' ಅಂತ ಡ್ಯುಯೆಟ್ ಹಾಡಿ ಮಾಯ ಆಗಿದ್ದ ವೇದಿಕಾ ಮತ್ತೆ 'ಶಿವಲಿಂಗ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದಾರೆ.[ಶಿವಣ್ಣನ ಬರ್ತಡೇಗೆ ಒಂದಕ್ಕಿಂತ ಒಂದು ವಿಶೇಷ ಕಾರ್ಯಕ್ರಮ]

'ಭಜರಂಗಿ' 'ವಜ್ರಕಾಯ' ಬ್ಲಾಕ್ ಬಾಸ್ಟರ್ ಹಿಟ್ ಕಂಡಂತೆ 'ಶಿವಲಿಂಗ' ಕೂಡ ಅದೇ ಸಾಲನ್ನು ಸೇರುತ್ತಾ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

English summary
Kannada Movie 'Shivalinga' official Teaser is released, 'Shivalinga' features Kannada actor shivarajkumar,actress Vedika in the lead role, The movie is directed by P.Vasu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada