»   » ವಿಡಿಯೋ: 'ಧಗ ಧಗ' ಅಂತ ಧೂಳೆಬ್ಬಿಸಿದ 'ಸ್ಟೈಲ್ ಕಿಂಗ್'

ವಿಡಿಯೋ: 'ಧಗ ಧಗ' ಅಂತ ಧೂಳೆಬ್ಬಿಸಿದ 'ಸ್ಟೈಲ್ ಕಿಂಗ್'

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಅವರ ಬಹುನಿರೀಕ್ಷಿತ 'ಸ್ಟೈಲ್ ಕಿಂಗ್' ಚಿತ್ರ ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ವಿಷಯ ನಿಮಗೆ ತಿಳಿದೇ ಇದೆ.

ಇನ್ನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರು ವಿಭಿನ್ನ ಪ್ರೊಮೋ ಹಾಡೊಂದಕ್ಕೆ ಧ್ವನಿ ನೀಡಿದ್ದು, ಇದೀಗ ಆ ಹಾಡು ಬಿಡುಗಡೆಯಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅವರ ಪತ್ನಿ ನಿರ್ಮಾಪಕಿ ಶಿಲ್ಪಾ ಗಣೇಶ್ ಅವರು 'ಧಗ ಧಗ' ಹಾಡು ಬಿಡುಗಡೆ ಮಾಡಿದರು.['ಸ್ಟೈಲ್ ಕಿಂಗ್' ಪ್ರೊಮೋಷನಲ್ ಹಾಡಿಗೆ ವಾಯ್ಸ್ ನೀಡಿದ ಅರ್ಜುನ್ ಜನ್ಯಾ]

Watch Kannada movie 'Style King' Promo Song

ಇದೇ ಮೊದಲ ಬಾರಿಗೆ ಚಿನ್ನದ ಹುಡುಗ ವಿಭಿನ್ನ ಪಾತ್ರದಲ್ಲಿ ಮಿಂಚಿದ್ದು, ರೌಡಿ ಲುಕ್ ನಲ್ಲಿ ಸಖತ್ ಫೈಟ್ ಮಾಡಿದ್ದಾರೆ. ಯಾವಾಗಲೂ ಲವರ್ ಬಾಯ್ ಆಗಿದ್ದ ಮಳೆ ಹುಡುಗ ಕೊಂಚ ರಿಫರೆಂಟ್ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಪರಭಾಷಾ ನಟಿ ತಮಿಳಿನ 'ಪಿಜ್ಜಾ' ಬೆಡಗಿ ನಟಿ ರೆಮ್ಯಾ ನೆಂಬಿಸನ್ ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಜೊತೆ ಡ್ಯುಯೆಟ್ ಹಾಡಿದ್ದಾರೆ.

'ಧಗ ಧಗ' ಹಾಡನ್ನು ಸಂಗೀತ ಮಾಂತ್ರಿಕ ಅರ್ಜುನ್ ಜನ್ಯಾ ಅವರು ಹಾಡಿದ್ದು, ಹಾಡುವುದರ ಜೊತೆಗೆ ಸಖತ್ ಡ್ಯಾನ್ಸ್ ಪರ್ಫಾಮೆನ್ಸ್ ಕೂಡ ನೀಡಿದ್ದಾರೆ.['ರಾಜ್ಯೋತ್ಸವ'ದಲ್ಲಿ ನಂದೇ ಸ್ಟೈಲ್, ಎಂದ ಚಿನ್ನದ ಹುಡುಗ]

ನಿರ್ದೇಶಕ ಪಿ.ಸಿ ಶೇಖರ್ ಆಕ್ಷನ್-ಕಟ್ ಹೇಳಿರುವ ಮಾರುತಿ ಎಂಟರ್ ಪ್ರೈಸಸ್ ಅರ್ಪಿಸುವ ಗಣಿ ಅವರ ಸ್ಟೈಲ್ ಕಿಂಗ್ ಚಿತ್ರದ 'ಧಗ ಧಗ' ಪ್ರೋಮೋ ಹಾಡಿನ ವಿಡಿಯೋ ಇಲ್ಲಿದೆ ನೋಡಿ..

Exclusive ಸ್ಟೈಲ್ ಕಿಂಗ್ ಧಗ ಧಗ ಹಾಡು #kannada Kannada movies Golden Star Ganesh fans Club PC Shekar Arjun Janya

Posted by Kannada Filmibeat on Saturday, November 21, 2015

ಒಟ್ನಲ್ಲಿ ಗ್ಯಾಂಗ್ ಸ್ಟರ್ ಆಗಿ ಮಿಂಚಿರುವ ನಟ ಗಣೇಶ್ ಅವರ 'ಸ್ಟೈಲ್ ಕಿಂಗ್' ಗಣಿ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದೆ. ಮಾತ್ರವಲ್ಲದೇ ಎರಡು ಶೇಡ್ ಗಳಲ್ಲಿ ಮಿಂಚಿರುವ ಗೋಲ್ಡನ್ ಸ್ಟಾರ್ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದಾರೆ.

English summary
Watch Kannada movie 'Style King' 'Dhaga Dhaga', official Promo video Song. Kannada Actor Ganesh, Actress Remya Nambeesen in the lead role. Thae movie is Directed by PC Shekar. Music composed by Arjun Janya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada