»   » ಗಣೇಶ್ 'ಸ್ಟೈಲ್ ಕಿಂಗ್' ಚಿತ್ರದ ಸ್ಟೈಲಿಶ್ ಟ್ರೇಲರ್ ನೋಡಿದ್ರಾ?

ಗಣೇಶ್ 'ಸ್ಟೈಲ್ ಕಿಂಗ್' ಚಿತ್ರದ ಸ್ಟೈಲಿಶ್ ಟ್ರೇಲರ್ ನೋಡಿದ್ರಾ?

Posted By:
Subscribe to Filmibeat Kannada

ಪಟ ಪಟ ಮಾತುಗಳು ಮತ್ತು ವಿಭಿನ್ನ ಮ್ಯಾನರಿಸಂ ನಿಂದ ಹುಡುಗಿಯರ ದಿಲ್ ಕದ್ದ ಚೋರ ಚಿತ್ತ ಚೋರ ಗೋಲ್ಡನ್ ಸ್ಟಾರ್ ಗಣೇಶ್ ಈಗ 'ಸ್ಟೈಲ್ ಕಿಂಗ್' ಆಗಿ ಮತ್ತೊಮ್ಮೆ ಮ್ಯಾಜಿಕ್ ಮಾಡುವುದಕ್ಕೆ ಬರ್ತಿದ್ದಾರೆ.

'ಸ್ಟೈಲ್ ಕಿಂಗ್' ಚಿತ್ರದ ಟ್ರೇಲರ್ ಔಟ್ ಆಗಿದೆ. 'ಸ್ಟೈಲ್ ಕಿಂಗ್' ದರ್ಶನ ನಿಮಗಿನ್ನೂ ಆಗಿಲ್ಲ ಅಂದ್ರೆ ಇಲ್ಲಿ ನೋಡಿ....'ಸ್ಟೈಲ್ ಕಿಂಗ್' ಚಿತ್ರದ ಟ್ರೇಲರ್ ನೋಡ್ತಿದ್ರೆ, ಇದೊಂದು ಪಕ್ಕಾ ಎಂಟರ್ಟೇನ್ಮೆಂಟ್ ಸಿನಿಮಾ ಅನ್ನೋದ್ರಲ್ಲಿ ಡೌಟೇ ಇಲ್ಲ. 'ರೋಮಿಯೋ' ನಂತರ ಮತ್ತೊಮ್ಮೆ ಆರ್ಡಿನರಿ ಹುಡುಗನ 'ಎಕ್ಸ್ ಟ್ರಾಡಿನರಿ' ಸ್ಟೋರಿ ಈ 'ಸ್ಟೈಲ್ ಕಿಂಗ್'ದು. ಗಣೇಶ್ ಗಾಗಿ ಸ್ಪೆಷಲ್ ಆಗಿ ತಯಾರಿಸಿರುವ ಈ ಸ್ಟೋರಿಯಲ್ಲಿ ಮಲ್ಲು ಕುಟ್ಟಿ ರಮ್ಯಾ ನಂಬೀಸನ್ ನಾಯಕಿ. [ಮುಂಗಾರು ಮಳೆ ಲವರ್ ಬಾಯ್ ಇದೀಗ ಗ್ಯಾಂಗ್ ಸ್ಟರ್]


'ಸ್ಟೈಲ್ ಕಿಂಗ್' ಹೇಳಿ ಕೇಳಿ ಗಣೇಶ್ ಸಿನಿಮಾ. ಅಂದ್ಮೇಲೆ ಚಿತ್ರದಲ್ಲಿ ಕಾಮಿಡಿಗೇನು ಕೊರತೆ ಇಲ್ಲ. ರಂಗಾಯಣ ರಘು, ಸಾಧು ಕೋಕಿಲ, ಮಿತ್ರ ಸೇರಿದಂತೆ ಹಾಸ್ಯ ಕಲಾವಿದರ ದಂಡೇ ಚಿತ್ರದಲ್ಲಿದೆ. [ವಿಡಿಯೋ: 'ಧಗ ಧಗ' ಅಂತ ಧೂಳೆಬ್ಬಿಸಿದ 'ಸ್ಟೈಲ್ ಕಿಂಗ್']


'ರೋಮಿಯೋ' ಸೂತ್ರಧಾರ ಪಿ.ಸಿ.ಶೇಖರ್ ಈ ಚಿತ್ರದ ನಿರ್ದೇಶಕ. ಸಖತ್ ಸಂಟ್ಸ್, ಕಲರ್ ಫುಲ್ ಸಾಂಗ್ಸ್, ಮಸ್ತ್ ಕಾಮಿಡಿ ಇರುವ 'ಸ್ಟೈಲ್ ಕಿಂಗ್' ಚಿತ್ರದ ಟ್ರೇಲರ್ ನಿಮಗೆ ಇಷ್ಟವಾಯ್ತಾ?

English summary
Kannada Actor Ganesh starrer 'Style King' trailer is out. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada