For Quick Alerts
  ALLOW NOTIFICATIONS  
  For Daily Alerts

  ಸೆಂಚುರಿ ಗೌಡರ 'ತಿಥಿ'ಯಲ್ಲಿ ಪವರ್ ಸ್ಟಾರ್ ಪುನೀತ್

  By Suneetha
  |

  ಈಗಾಗಲೇ ಅಂತರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡು ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಕನ್ನಡದ ಚಲನಚಿತ್ರ 'ತಿಥಿ'ಯ ಕಲರ್ ಫುಲ್ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದೆ.

  ರಾಷ್ಟ್ರಪ್ರಶಸ್ತಿ ಸೇರಿದಂತೆ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿರುವ 'ತಿಥಿ' ಸಿನಿಮಾ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸೋದು ಗ್ಯಾರಂಟಿ. ಅದಕ್ಕೆ ಉತ್ತಮ ಸಾಕ್ಷಿ ಎಂದರೆ ಬಿಡುಗಡೆ ಆಗಿರುವ ಚಿತ್ರದ ಟ್ರೈಲರ್.[KFCCಯಿಂದ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ]

  ಯಂಗ್ ಡೈರೆಕ್ಟರ್ ರಾಮ್ ರೆಡ್ಡಿ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ 'ತಿಥಿ' ಸಿನಿಮಾದಲ್ಲಿ ಸೆಂಚುರಿ ಗೌಡನ ಸಾವಿಗೆ ಮನೆಯವರು ಸೇರಿದಂತೆ ಊರಿನವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕೊಂಚ ಹಾಸ್ಯ ಮಿಶ್ರಿತವಾಗಿ ಹೆಣೆದು ಸಿನಿಮಾ ಮಾಡಲಾಗಿದೆ.

  ಒಂದು ಸಾವಿನ ಸುತ್ತ ನಡೆಯುವ ಚಿತ್ರ ಇದಾಗಿದ್ದು, ಆಸ್ತಿ ಮಾರಾಟಕ್ಕೆ ಯಾವ ರೀತಿ ಎಲ್ಲಾ ಸರ್ಕಸ್‌ ಮಾಡುತ್ತಾರೆ ಅನ್ನೋದನ್ನ ತೆರೆಯ ಮೇಲೆ ಮನೋಜ್ಞವಾಗಿ ತೋರಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಚಿತ್ರದ ಕಲರ್ ಫುಲ್ ಟ್ರೈಲರ್ ಇಲ್ಲಿದೆ ನೋಡಿ...[ನವದೆಹಲಿಯ ಚಲನಚಿತ್ರೋತ್ಸವದಲ್ಲಿ ಕನ್ನಡ ಚಿತ್ರಗಳ ಅಬ್ಬರ]

  ಅಂದಹಾಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದು, ಪುನೀತ್ ಅವರು ಕೂಡ ಈ ಸಿನಿಮಾ ನೋಡಿ ನಕ್ಕು-ನಕ್ಕು ಸಖತ್ ಎಂಜಾಯ್ ಮಾಡಿದ್ದು ಮಾತ್ರವಲ್ಲದೇ, ನಿರ್ದೇಶಕರ ಪ್ರಯತ್ನವನ್ನು ಮನಸಾರೆ ಹೊಗಳಿದ್ದಾರೆ.

  ಪ್ರತಾಪ್ ರೆಡ್ಡಿ ಮತ್ತು ಸುನ್ಮಿನ್ ಪರ್ಕ್ ನಿರ್ಮಾಣದಲ್ಲಿ ಮೂಡಿಬಂದಿರುವ 'ತಿಥಿ' ಮುಂದಿನ ತಿಂಗಳು ಮೇ 6ರಂದು ಇಡೀ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಟ್ರೈಲರ್ ಬಿಡುಗಡೆ ಸಮಾರಂಭದ ಫೋಟೋ ಗ್ಯಾಲರಿ ನೋಡಿ ಸ್ಲೈಡುಗಳಲ್ಲಿ...

  ಟ್ರೈಲರ್: 'ತಿಥಿ' ನೋಡಿ ನಕ್ಕು ಸುಸ್ತಾದ ಪವರ್ ಸ್ಟಾರ್ ಪುನೀತ್

  English summary
  Watch Kannada Movie 'Thithi' Official Trailer. Winner of the National Film Award for Best Kannada Film 2016 and two Golden Leopards at the prestigious Locarno Film Festival 2015. Directed by Raam Reddy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X