»   » 'ಟಾಸ್' ಹಾಕಿದ 'ಚಿನ್ನಾರಿ ಮುತ್ತಾ' ವಿಜಯ ರಾಘವೇಂದ್ರ

'ಟಾಸ್' ಹಾಕಿದ 'ಚಿನ್ನಾರಿ ಮುತ್ತಾ' ವಿಜಯ ರಾಘವೇಂದ್ರ

Posted By:
Subscribe to Filmibeat Kannada

'ಚಿನ್ನಾರಿ ಮುತ್ತ' ಖ್ಯಾತಿಯ ವಿಜಯ ರಾಘವೇಂಧ್ರ ಅವರ ಈ ವರ್ಷದ ಬಹು ನಿರೀಕ್ಷಿತ 'ವಂಶೋದ್ಧಾರಕ' ಚಿತ್ರ ಬಿಡುಗಡೆಯ ಹಂತದಲ್ಲಿರುವಾಗಲೇ ಇನ್ನೊಂದು ಹೊಸ ಚಿತ್ರ ಸೆಟ್ಟೇರಿದ್ದು, ಈಗಾಗಲೇ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಅಷ್ಟಾಗಿ ಯಶಸ್ಸು ಗಳಿಸದ ನಟಿ ರಮ್ಯಾ ಬಾರ್ನಾ ಅವರು ವಿಜಯ ರಾಘವೇಂದ್ರ ಅವರೊಂದಿಗೆ 'ಟಾಸ್' ಮೂಲಕ ಚಿತ್ರರಂಗದಲ್ಲಿ ತನ್ನನ್ನು ಗುರುತಿಸಿಕೊಳ್ಳಲು ಸಜ್ಜಾಗಿದ್ದಾರೆ.

Watch kannada movie Toss official Teaser

ಇದೀಗ ವಿಜಯ ರಾಘವೇಂದ್ರ, ರಮ್ಯ ಬಾರ್ನಾ ಹಾಗೂ ಹೊಸ ಪ್ರತಿಭೆ ಸಂದೀಪ್ ಕಾಣಿಸಿಕೊಂಡಿರುವ 'ಟಾಸ್' ನ ಟೀಸರ್ ಬಿಡುಗಡೆಯಾಗಿದ್ದು ಇಲ್ಲಿದೆ ನೋಡಿ..

ಒಂದು ರೂಪಾಯಿ ನಾಣ್ಯದಲ್ಲಿ ಎರಡು ಮುಖಗಳಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ ಅಂದಹಾಗೆ ಈ 'ಟಾಸ್' ನಲ್ಲಿ 1 ರೂನಲ್ಲಿ ಎರಡು ಪ್ರೀತಿ ಅಂತ ಅಡಿಬರಹ ಇಟ್ಟುಕೊಂಡು ನಿರ್ದೇಶಕ ದಯಾಳ್ ಅವರು ಒಂದು ಕಲರ್ ಫುಲ್ ಕಥೆಯೊಂದಿಗೆ ಗಾಂಧಿನಗರಕ್ಕೆ ಕಾಲಿಡುತ್ತಿದ್ದಾರೆ.

ಒಟ್ಟಾರೆ ಮನೋರಂಜನೆ, ಗೆಳೆತನ ಜೊತೆಗೆ ಹಾಸ್ಯದಿಂದ ಕೂಡಿರುವ 'ಟಾಸ್' ಪಕ್ಕಾ ಫ್ಯಾಮಿಲಿ ಎಂರ್ಟಟೈನರ್ ಚಿತ್ರ. 'ಹಗ್ಗದ ಕೊನೆ' ಚಿತ್ರದ ನಂತರ ನಿರ್ದೇಶಕ ದಯಾಳ್ ಅವರು 'ಟಾಸ್' ಹಾಕಲು ಗಾಂಧಿನಗರದತ್ತ ಮುಖ ಮಾಡಿದ್ದಾರೆ.

ಇನ್ನೂ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ರಮ್ಯಾ ಬಾರ್ನಾ, ವಿಜಯ ರಾಘವೇಂದ್ರ ಮುಂತಾದವರು ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಒಟ್ಟಿನಲ್ಲಿ ಬಹುದಿನಗಳ ನಂತರ ವಿಜಯ ರಾಘವೇಂದ್ರ ಅವರಿಗೆ 'ಟಾಸ್' ಚಿತ್ರವಾದ್ರೂ ಬ್ರೇಕ್ ಕೊಡುವಲ್ಲಿ ಯಶಸ್ವಿಯಾಗಬಹುದೇ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

English summary
Kannada Movie "Toss" official Teaser is released.'Toss' features Kannada actor Vijay Raghavendra, Actress Ramya Barna in the lead role. The movie is directed by Dayal.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada